ಅಕ್ಕಿ ಪಾನಕ ಬಿಸಿ ಬೇಸಿಗೆಗೆ ದೇಹ ತಂಪು ಮಾಡುವ ದೇಶಿ ಸಂಪ್ರದಾಯಿಕ ಪಾನೀಯ, ಇದರ ರುಚಿ ಮತ್ತು ಆರೋಮ ವಿಶಿಷ್ಟ ಮತ್ತು ಇದರಿಂದ ದೇಹಕ್ಕೂ ಎನರ್ಜಿ ದೊರೆಯುತ್ತದೆ.
#ಕೃತಕ_ತಂಪುಪಾನಿಯಕ್ಕಿಂತ_ಶ್ರೇಷ್ಟಪಾನಿಯ
#ಸಂಪ್ರದಾಯಿಕ_ಇಂತಹ_ಆಹಾರ_ಪಾನಿಯ_ಬಳಕೆಗೆ_ಪ್ರಾಶಸ್ತ್ಯ_ನೀಡಬೇಕು
ಎರೆಡು ಟೇಬಲ್ ಸ್ಪೂನ್ ಅಕ್ಕಿ ತೊಳೆದು ಒಂದು ಗಂಟೆ ನೆನಸಿ, ಕಾಲು ಕಪ್ ಕಾಯಿತುರಿ, 2 ಏಲಕ್ಕಿ, ರುಚಿಗೆ ಉಪ್ಪು ಹಾಕಿ ನೀರು ಸೇರಿಸಿ ನುಣ್ಣಗೆ ಅರೆಯುವುದು ನಂತರ ಎರೆಡು ಲೋಟ ತಣ್ಣನೆ ನೀರು ಮತ್ತು ಜೋನಿ ಬೆಲ್ಲ ಬೆರೆಸಿದರೆ ಅಕ್ಕಿ ಹನಿ ಅರ್ಥಾರ್ತ್ ಅಕ್ಕಿ ಪಾನಕ ರೆಡಿ.
ಬೇಸಿಗೆಯಲ್ಲಿ ದೇಹಕ್ಕೆ ತಂಪು ಕೃತಕ ಪಾನಿಯಗಳಿಗಿಂತ ಶ್ರೇಷ್ಟ ಇದೇ ರೀತಿ ಎಳ್ಳು / ಗಸಗಸೆ / ಹೆಸರುಕಾಳು/ ರಾಗಿ ಮುಂತಾದನ್ನು ಬಳಸಿ ವೈವಿಧ್ಯಮಯ ದೇಶಿ ತಂಪು ಪಾನಿಯ ಮನೇನಲ್ಲೇ ತಯಾರಿಸಬಹುದು.
Comments
Post a Comment