#ಕರಾವಳಿಯಿಂದ_ಉದ್ಯೋಗ_ಹುಡುಕಿ_ವಲಸೆ_ಬಂದ_ಕುಟುಂಬದವರು.
#ಈ_ಸಾವು_ನ್ಯಾಯವೆ?
ಮೊನ್ನೆ ಮಾರ್ಚ್ 9 ರ ತನಕ ಎಡಜಿಗಳೆಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಡವರ, ಕೂಲಿಕಾರ್ಮಿಕರ ಆಪತ್ಕಾಲಕ್ಕೆ ಸದಾ ಸಹಾಯಕ್ಕೆ ಮುಂದಾಗುತ್ತಿದ್ದ ಕರ್ಕಿಕೊಪ್ಪದ ಮಹಾದೇವ ಸಣ್ಣವಯಸ್ಸಲ್ಲಿ ಇಹಲೋಕ ತ್ಯಜಿಸಿದ ಸುದ್ದಿ ಆ ಭಾಗದಲ್ಲಿ ಇವತ್ತಿನ ತನಕ ಜನಮಾನಸದಲ್ಲಿ ಒ0ದು ರೀತಿಯ ವಿಷಾದ ಮತ್ತು ಮೌನ ಉಂಟಾಗಿದೆ.
1993 ರಲ್ಲಿ ಸಾಗರ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಗಳು ಹೊಸ ಮುಖಗಳ ಆಯ್ಕೆಯಲ್ಲಿ ಮಹಾದೇವ ಆಯ್ಕೆ ಆಗಿ ಯಡಜಿಗಳೆಮನೆ ಅಧ್ಯಕ್ಷರಾದರು ಆಗ ನಾನು ಯಡೇಹಳ್ಳಿ ಗ್ರಾಮ ಪಂಚಾಯತ್ ನಿಂದ ಆಯ್ಕೆ ಆಗಿದ್ದೆ ನಾವೆಲ್ಲ ಸೇರಿ ಸಾಗರ ತಾಲ್ಲೂಕ್ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಒಕ್ಕೂಟ ಒಂದನ್ನು ಮಾಡಿಕೊಂಡಿದ್ದೆವು.
ನಂತರ 1995ರಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗ ಇವರ ಭಾಗದಿಂದ ಸಜ್ಜನ ಎಂ.ಜಿ.ಕೃಷ್ಣಮೂರ್ತಿ ಜಿಲ್ಲಾ ಪಂಚಾಯತ್ ಸದಸ್ಯರಾದರು, ಮಹಾದೇವ ಮತ್ತು ಎಂ.ಜಿ. ಜೊತೆ ಜೊತೆಗೆ ಅಭಿವೃದ್ಧಿ ಕೆಲಸದಲ್ಲಿ ಮುಂದುವರಿದಾಗ ನಮ್ಮ ಸಂಬಂದ ಕೂಡ ಮುಂದುವರಿದಿತ್ತು.
ಈ ಸಂದರ್ಭದಲ್ಲಿಯೇ ಇವರ ಸಹೋದರ ಲಾರಿ ಮಾಲಿಕ ರಾಜು ಕೂಡ ಅಕಾಲ ಮೃತ್ಯುವಶವಾದಾಗ ನಾನು ಮತ್ತು ಬೀಮನೇರಿ ಶಿವಪ್ಪ ಅಂತ್ಯ ಸಂಸ್ಕಾರಕ್ಕೆ ಹೋಗಿದ್ದ ನೆನಪು.
ಕರ್ಕಿಕೊಪ್ಪ ಒಂದು ರೀತಿ ಮಿನಿ ಕುಂದಾಪುರ ಏಕೆಂದರೆ ಅಲ್ಲಿ ಕರಾವಳಿಯ ಎಲ್ಲಾ ಜಾತಿಯ ಜನ ವಾಸವಾಗಿದ್ದಾರೆ ಇದಕ್ಕೆ ಕಾರಣ ಎಂ.ಆರ್.ಶೇಷಗಿರಿ ಭಟ್ಟರು ಅಂತ ಎಲ್ಲರೂ ಸ್ಮರಿಸುತ್ತಾರೆ, ಇವರು ಎಲ್.ಬಿ.ಕಾಲೇಜ್ ಉಪನ್ಯಾಸಕರು ಮತ್ತು ಸಾಹಿತಿಗಳಾದ ತಿರುಮಲ ಮಾವಿನಕುಳಿಯವರ ಸಹೋದರರು.
ಹೊಟ್ಟೆಪಾಡಿಗಾಗಿ ಕರಾವಳಿಯಿಂದ ಮಲೆನಾಡ ಸಾಗರದ ಸುತ್ತಾ ಮುತ್ತಾ ಅಡಿಕೆ ತೋಟದ ಕೃಷಿ ಕೆಲಸ ಮಾಡಿಕೊಂಡಿದ್ದ ಈ ಜನರನ್ನು ಕರ್ಕಿಕೊಪ್ಪದಲ್ಲಿ ಸ್ವಂತ ಜಾಗ ಮನೆ ಮಾಡಿ ಬದುಕು ಕಟ್ಟಿಕೊಳ್ಳಲು ಎಂ.ಆರ್.ಶೇಷಗಿರಿ ಭಟ್ಟರು ಶ್ರಮಿಸುತ್ತಾರೆ ಆದ್ದರಿಂದಲೇ ಕರಾವಳಿಯ ಈ ಶ್ರಮಿಕರು ಶೇರೆಗಾರರ ಬಿಡಾರದಿಂದ ಸ್ವಂತ ನೆರಳಿಗೆ ಬಂದು ಕರ್ಕಿಕೊಪ್ಪದಲ್ಲಿ ನೆಲೆಸಿದರು. ಈಗಲೂ ಈ ಜನರು ಶೇಷಗಿರಿ ಭಟ್ಟರ ಸಹಾಯ ನೆನಪಿಸುತ್ತಾರೆ.
ಇಂತಹ ಸಂದರ್ಭದಲ್ಲಿ ಇಲ್ಲಿಗೆ ಬಂದು ನೆಲೆ ನಿಂತ ಶೇರೆಗಾರ ಕೃಷ್ಣ ಪೂಜಾರಿಯ ಆರು ಗಂಡು ಮಕ್ಕಳಲ್ಲಿ ಮಹಾದೇವ ನಾಲ್ಕನೆಯವರು.
ರಾಜು, ಕೊಪ್ಪ, ಚಂದ್ರು, ಮಹಾದೇವ, ಸಹದೇವ ಮತ್ತು ವಾಸುದೇವರಲ್ಲಿ ರಾಜು ಈಗಿಲ್ಲ.
ಈ ಸಹೋದರರಲ್ಲಿ ಚಂದ್ರು (ಕರ್ಕಿಕೊಪ್ಪದ ಚಂದ್ರು) ಇವತ್ತು ಜಿಲ್ಲೆಯ ಪ್ರಮುಖ ಗುತ್ತಿಗೆದಾರರು ಮತ್ತು ಉದ್ಯಮಿಗಳಾಗಿದ್ದಾರೆ.
ಯಾವುದೇ ಸಮಸ್ಯೆ ಆಗಲಿ ಈ ಭಾಗದ ಜನತೆ ಮಹಾದೇವರನ್ನು ಅವಲಂಬಿಸಿದ್ದರು ಮಹಾದೇವ ಕೂಡ ಅಧಿಕಾರ ಇರಲಿ ಇಲ್ಲದಿರಲಿ ಸದಾ ಈ ಜನರಿಗೆ ಸಹಾಯ ಮಾಡುತ್ತಿದ್ದರು.
ಕರ್ಕಿಕೊಪ್ಪದ ಮಹಾದೇವ ಸಣ್ಣವಯಸ್ಸಲ್ಲಿ ಹೃದಯಾಘಾತದಿಂದ ಅಗಲಿದ್ದು ವಿಷಾದನೀಯ ವಿಚಾರ.
Comments
Post a Comment