Skip to main content

Posts

Showing posts with the label They were from Andhra Pradesh now settled in Anandapuram.they are belongs to sudugadusidda community

Blog number 1646.ಆನಂದಪುರಂ ಇತಿಹಾಸ ಭಾಗ 150. ದೂರದ ಆಂಧ್ರ ಪ್ರದೇಶದಿಂದ ವಲಸೆ ಬಂದು ಆನಂದಪುರಂನಲ್ಲಿ ನೆಲೆಸಿರುವ ಅಲೆಮಾರಿ ಸುಡುಗಾಡು ಸಿದ್ದರು.

#ಆನಂದಪುರಂ_ಇತಿಹಾಸ_ಭಾಗ_150. #ದೂರದ_ಆಂಧ್ರ_ಮೂಲದ_ಸುಡಗಾಡು_ಸಿದ್ಧರು_ಆನಂದಪುರಂಗೆ_ವಲಸೆ_ಬಂದವರು. #ತಾವರೇಹಳ್ಳಿ_ಗ್ರಾಮದ_ಜೇಡಿಸರದಲ್ಲಿ_ನೆಲೆಸಿದ್ದಾರೆ. #ತೆಲಗು_ಭಾಷಿಕರಾದ್ದರಿಂದ_ಇವರ_ಕ್ಯಾಂಪನ್ನು_ರೆಡ್ಡಿ_ಕ್ಯಾಂಪ್_ಎಂದು_ಸ್ಥಳಿಯರು_ಕರೆಯುತ್ತಾರೆ. #ಈ_ಕ್ಯಾಂಪಿನ_ಹಿರಿಯ_ಗೂರಪ್ಪಣ್ಣ_ಕನ್ನಡ_ಸಾಹಿತ್ಯ_ಪ್ರೇಮಿ. #ನಾಲ್ಕನೇ_ತರಗತಿವರೆಗೆ_ಓದಿರುವ_ಇವರು_ಓದಿದ_ಕಾದಂಬರಿ_ಎರೆಡು_ಸಾವಿರಕ್ಕೂ_ಮಿಕ್ಕಿದೆ.   ಇವರು ಆಂದ್ರ ಮಾತೃ ಬಾಷೆಯ ಆಂದ್ರ ಮೂಲದ ಅಲೆಮಾರಿ ಬುಡಕಟ್ಟು ಜನಾಂಗದ ಸುಡುಗಾಡು ಸಿದ್ಧರು ಜಾತಿಯವರು, ಆಂದ್ರದಿಂದ ಚಿತ್ರದುಗ೯ ಅಲ್ಲಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ, ಅಲ್ಲಿಂದ ಕೆಂಚನಾಲ ನಂತರ ನಮ್ಮ ಆನಂದಪುರಂನ ಜೇಡಿಸರದಲ್ಲಿ ಬಂದು ನೆಲೆಸಿದ ಇವರ ತಂದೆ ಪರಶುರಾಮಣ್ಣ ತಮ್ಮ ವಂಶಪಾರಂಪರ್ಯ ವೃತ್ತಿ ಆದ ಜೋತಿಷ ಹೇಳುವುದು, ಬಿಕ್ಷೆ ಬೇಡುವುದನ್ನು ಇಷ್ಟ ಪಡದೆ ಕೃಷಿ ಮೇಲೆ ಅವಲಂಬಿತರಾದವರು.   ಸುಡುಗಾಡ ಸಿದ್ಧರೆಂದರೆ ಶಿವನ ಅನುಯಾಯಿಗಳು, ಶಿವನ ಕೋಪಕ್ಕೆ ತುತ್ತಾಗಿ ಅಲೆಮಾರಿಗಳಾದರೂ ಎಂಬ ಪ್ರತೀತಿ ನಂಬಿಕೆ ಇವರಲ್ಲಿದೆ, ಇವರು ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಬುದ್ಧಿವಂತರು, ಕುಡಿತಕ್ಕೆ ಇವರಲ್ಲಿ ಯಾವುದೇ ನಿರ್ಬಂದವಿಲ್ಲ, ಅತ್ಯಂತ ಬುದ್ದಿವಂತರಾಗಿರುವ ಇವರು ಜಗಳ ಹೊಡೆದಾಟಗಳು ಮಾಡುವುದು ಕಡಿಮೆ, ಸೌಜನ್ಯ ಮತ್ತು ಸಂಸ್ಕಾರ ಈ ಅಲೆಮಾರಿ ಪಂಗಡದಲ್ಲಿ ಬೇರೆ ಅಲೆಮಾರಿ ಬುಡಕಟ್ಟು ಹೋಲಿಸಿದರೆ ಹೆಚ್ಚು...