ಚರ್ಮದ್ಯೋಗಿ_ಕಾಯಕ_ಕುಟುಂಬದ
ಸಂತ_ಭಗತ್_ರವಿದಾಸ್
ಕರ್ನಾಟಕದ ಶಿವಶರಣರಾದ ಹರಳಯ್ಯನವರಂತೆ ಉತ್ತರ ಭಾರತದಲ್ಲಿ ಶ್ರಮಿಕ ವರ್ಗದ ಕಾಯಕವನ್ನು ದೈವಿಕ ಮಟ್ಟಕ್ಕೆ ಕೊಂಡೊಯ್ದು ಸಾಮಾಜಿಕ ಸಮಾನತೆಗಾಗಿ ಧ್ವನಿ ಎತ್ತಿದವರು ಮಹಾನ್ ಚೇತನ ಭಗತ್ ರವಿದಾಸ್.
ಸಂತ ರವಿದಾಸರು ಮೂಲತಃ ಸಿಖ್ ಧರ್ಮದವರಲ್ಲ ಅವರು 15–16ನೇ ಶತಮಾನದ ಭಕ್ತಿ ಪರಂಪರೆಯ ಸಂತರು.
ಅವರ ಜೀವನ ಸಿಖ್ ಧರ್ಮ ರೂಪುಗೊಳ್ಳುವುದಕ್ಕಿಂತ ಹಿಂದಿನದು ಆದರೆ ಅವರಿಗೆ #ಸಿಖ್_ಪರಂಪರೆಯಲ್ಲಿ ಬಹಳ ಮಹತ್ವವಿದೆ.
ಅವರ 40ಕ್ಕೂ ಹೆಚ್ಚು ಶಬ್ದಗಳು/ಪದ್ಯಗಳು #ಗುರು_ಗ್ರಂಥ_ಸಾಹಿಬ್‌ನಲ್ಲಿ “#ಭಗತ್_ರವಿದಾಸ”ರ #ಬಾಣಿಯಾಗಿ ಸೇರಿವೆ.
#ಸಂತ_ರವಿದಾಸ್ (ಭಗತ್ ರವಿದಾಸ್ / ರಾಯ್‌ದಾಸ್) ಅವರು 15-16ನೇ ಶತಮಾನದ ಭಾರತದ ಭಕ್ತಿ ಚಳವಳಿಯ ಪ್ರಮುಖ ಸಂತ, ಕವಿ ಹಾಗೂ ಸಮಾಜ ಸುಧಾರಕರಲ್ಲಿ ಒಬ್ಬರು.
ಉತ್ತರ ಪ್ರದೇಶದ ವಾರಾಣಸಿಯ ಸಮೀಪದ ಸೀರ ಗೋವರ್ಧನಪುರದಲ್ಲಿ ಜನಿಸಿದರು ಅವರು ಚಮ್ಮಾರ (ಚರ್ಮೋದ್ಯೋಗಿ) ಕಾಯಕದ ಕುಟುಂಬದಿಂದ ಬಂದವರಾಗಿದ್ದು, ತಮ್ಮ ಜೀವನದುದ್ದಕ್ಕೂ ಕಾಯಕ ನಿಷ್ಠೆ ಮತ್ತು ಭಕ್ತಿಯನ್ನು ಏಕಕಾಲದಲ್ಲಿ ಪಾಲಿಸಿದರು.
ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ, ಮಾಡುವ ಕರ್ಮ ಮತ್ತು ಗುಣದಿಂದ ಮಾತ್ರ ಮನುಷ್ಯ ಶ್ರೇಷ್ಠನಾಗುತ್ತಾನೆ ಎಂದು ಸಾರಿದರು.
ಸಂತ ರವಿದಾಸರು ಕಲ್ಪಿಸಿದ ಆದರ್ಶ ನಗರದ ಪರಿಕಲ್ಪನೆ '#ಬೇಗಂಪುರ' (ದುಃಖವಿಲ್ಲದ ಊರು) ಅಲ್ಲಿ ಯಾವುದೇ ತಾರತಮ್ಯ, ಜಾತಿ ಬೇಧ, ಬಡತನ, ತೆರಿಗೆ ಅಥವಾ ಶೋಷಣೆ ಇರುವುದಿಲ್ಲ ಎಲ್ಲರೂ ಸಮಾನರು ಮತ್ತು ನೆಮ್ಮದಿಯಿಂದ ಬದುಕುತ್ತಾರೆ ಎಂಬುದು ಇದರ ಕಲ್ಪನೆ.
ಸಿಖ್ ಧರ್ಮದ ಪವಿತ್ರ ಗ್ರಂಥವಾದ 'ಗುರು ಗ್ರಂಥ ಸಾಹೀಬ್'ನಲ್ಲಿ ಭಗತ್ ರವಿದಾಸರ ಸುಮಾರು 41 ಭಕ್ತಿಗೀತೆಗಳು (ಪದಗಳು/ಶಬ್ದಗಳು) ಪೂಜನೀಯವಾಗಿ ಸ್ಥಾನ ಪಡೆದಿವೆ.
ಅವರ ಪ್ರಸಿದ್ಧ ನಾಣ್ಣುಡಿ
"ಮನ್ ಚಂಗಾ ತೊ ಕಠೌತೀ ಮೇಂ ಗಂಗಾ"
(ಮನಸ್ಸು ಶುದ್ಧವಾಗಿದ್ದರೆ, ನಾವು ನೀರು ಇಟ್ಟುಕೊಳ್ಳುವ ಸಣ್ಣ ಮರದ ಪಾತ್ರೆಯಲ್ಲೂ ಗಂಗೆ ಇರುತ್ತಾಳೆ ಅಂದರೆ ಬಾಹ್ಯ ಆಡಂಬರ, ತೀರ್ಥಯಾತ್ರೆಗಿಂತ ಆಂತರಿಕ ಮನಸ್ಸಿನ ಶುದ್ಧತೆ ಮುಖ್ಯ).
ಇಂದಿಗೂ ಅವರ ಅನುಯಾಯಿಗಳು 'ರವಿದಾಸಿಯಾ' ಧರ್ಮ/ಪಂಥದ ಮೂಲಕ ಅವರ ತತ್ವಗಳನ್ನು ಪಾಲಿಸುತ್ತಿದ್ದಾರೆ.
#santha #bhagathravidas #sharanaharalia #basavanna #bijjala #sikhreligion
Comments
Post a Comment