https://youtu.be/UTPK8j25nYQ?feature=shared #ನನ್ನ_ಪ್ರೀತಿಯ_ರಾಟ್_ವೀಲರ್_ಶಂಭೂರಾಮನ_ರಸ_ಕಬ್ಬಿನ_ಕೋಲಿನ_ರಸದೌತಣ. #ಮಲೆನಾಡಿನ_ಹಳ್ಳಿಗಳಲ್ಲಿ_ಈಗ_ಕಬ್ಬಿನ_ಅಲೇಮನೆ_ಸೀಸನ್. #ಇವತ್ತು_ಬೆಳಗಿನ_ವಾಕಿಂಗ್_ನಂತರ_ನಾನೂ_ಶಂಭೂರಾಮು_ಕಬ್ಬು_ತಿಂದದ್ದು #ಸಂಪ್ರದಾಯಿಕ_ಆಲೇಮನೆ_ಜೋನಿಬೆಲ್ಲ_ಕಬ್ಬಿನಹಾಲು_ರಸಕಬ್ಬು #ಈಗ_ಅಪರೂಪದಲ್ಲಿ_ಅಪರೂಪ #ಆಲೇ_ಮನೆ_ಜೋನಿ_ಬೆಲ್ಲ_ಕೇಜಿಗೆ_ನೂರು_ದಾಟಿದೆ #ಸಕ್ಕರೆ_ಬೆಲೆ_ಕೇಜಿಗೆ_ನಲವತ್ತು #ಆದ್ದರಿಂದ_ಸಕ್ಕರೆ_ಕರಗಿಸಿ_ಬೆಲ್ಲ_ರೂಪಾಂತರ_ಮಾಡಿ_ಲಾಭ_ಮಾಡುವ_ಉದ್ಯಮವೂ_ಶುರುವಾಗಿದೆ. ಹಳ್ಳಿಗಳಲ್ಲಿ ಆದುನೀಕರಣದ ವೇಗದಲ್ಲಿ ಅನೇಕ ಸಂಪ್ರದಾಯಿಕ ಜೀವನ ಶೈಲಿ ಬದಲಾಗಿದೆ ಸ್ವಾವಲಂಬಿ ಬದುಕಿನ ಭಾಗವಾಗಿದ್ದ ಆಹಾರ ಉತ್ಪಾದನೆ ಬೃಹತ್ ಗಾತ್ರದ ಉದ್ಯಮವಾಗಿ ಯಂತ್ರಗಳ ಮೇಲೆ ಅವಲಂಬಿಸಿದ್ದರಿಂದ ಹಳ್ಳಿಗಳ ಮನೆ ಮನೆಯ ಹೈನುಗಾರಿಕೆ - ಕೋಳಿ ಸಾಕಾಣಿಕೆ - ಬಾವಿ ನೀರು - ಹಿತ್ತಲ ಕೈ ತೋಟಗಳು ಇಲ್ಲವಾಗಿದೆ. ಇದೇ ರೀತಿ ನಮಗೆಲ್ಲ ಬಾಲ್ಯದಲ್ಲಿ ವಿಶೇಷವಾದ ಹಬ್ಬದ ಸಂಭ್ರಮ ಉಂಟು ಮಾಡುತ್ತಿದ್ದ ಕಬ್ಬಿನ ಹಾಲು- ಮಣ್ಣಿನ ಕೊಡದಲ್ಲಿ ತು೦ಬಿ ತರುತ್ತಿದ್ದ ಬೆಲ್ಲ - ಅದನ್ನ ತಯಾರಿಸಲು ಬೆಳೆಯುತ್ತಿದ್ದ ದೇಸಿ ತಳಿಯ ತರಹವಾರೆ ಕಬ್ಬು, ಈ ಕಬ್ಬು ಅರೆಯಲು ಆಲೆ ಕಣ ಅದನ್ನು ತಿರುಗಿಸಲು ಕರಾವಳಿಯ ತೀರದಿಂದ ಪ್ರತಿ ವರ್ಷ ಘಟ್ಟ ಹತ್ತಿ ಬರುತ್ತಿದ್ದ ಅಲೇ ಕೋಣಗಳು,ಸುಗ್ಗಿ ಕಾಲದ ಆಯಾಸದ ನಂತರದಲ್ಲಿ ...