Skip to main content

Posts

Showing posts with the label Hog plumb product research work should be done.

Blog number 854. ಅಮಟೆಕಾಯಿ ಮೌಲ್ಯವರ್ಧನೆ ಆಗಬೇಕಾಗಿದೆ, ಅಮಟೆಕಾಯಿ ಇಲ್ಲದೆ ಕೆಸುವಿನ ಕರಕಲಿ ಮತ್ತು ಹುಳ್ಳಿಕಟ್ಟು ಸಂಪೂರ್ಣವಾಗುವುದಿಲ್ಲ.

#ಅಮಟೆಕಾಯಿ_ಮಿಡಿಯ_ಕಾಲವಿದು. #ಮಾವಿನ_ಮಿಡಿ_ಮುಗಿದಂತೆ_ಅಮಟೆಕಾಯಿ_ಮಿಡಿ  #ಅಮಟೆಕಾಯಿ_ಮೌಲ್ಯವರ್ಧನೆ_ಕೆಲಸ_ಆಗಬೇಕಾಗಿದೆ. #ಒಂದು_ಕಾಲದಲ್ಲಿ_ಹುರುಳಿಕಟ್ಟಿನಲ್ಲಿ_ಕೆಸುವಿನ_ಕರಕಲಿಯಲ್ಲಿ_ಅಮಟೆಕಾಯಿ_ಇರಲೇ_ಬೇಕಿತ್ತು.   ಸಂಸ್ಕೃತದಲ್ಲಿ ಅಮಟೆಕಾಯಿಗೆ ಅಮರಾಟ ಅನ್ನುತ್ತಾರೆಂದರೆ ಅಮಟೆಕಾಯಿ ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೋನೇಷಿಯದ ಮೂಲದ್ದಿರಬಹುದಾ ಎಂಬ ಅನುಮಾನಗಳು ಇದೆ ಯಾಕೆಂದರೆ ಅಮಟೆ ಅಮೇರಿಕಾದ ಉಷ್ಣವಲಯದ ಮೂಲದದ್ದು 17 ನೇ ಶತಮಾನದಲ್ಲಿ ಭಾರತಕ್ಕೆ ಪೋಚು೯ಗೀಸರಿಂದ ತಲುಪಿತು ಎ೦ದು ದಾಖಲಿಸಿದ್ದಾರೆ.    ನಮ್ಮ ಮನೆಯಲ್ಲಿ 1997 ರಲ್ಲಿ ನಮ್ಮ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಘಂಟಿನಕೊಪ್ಪದ ಮಾಜಿ ಸಾಗರ ತಾಲ್ಲೂಕ್ ಬೋರ್ಡ್ ಸದಸ್ಯರಾಗಿದ್ದ ಹಿರೇನಾಯಕರ ಪುತ್ರ ಸ್ವಾಮಿ ರಾವ್ ಅವರ ಮನೆಯ ಅಮಟೆ ಮರದ ರೆಂಬೆ ತಂದು ಕೊಟ್ಟಿದ್ದರು.   ನಾನು ಅವರ ಕೈಯಲ್ಲೇ ನನ್ನ ಅವರ ಗೆಳೆತನದ ಸಂಬಂದದ ನೆನಪಿಗಾಗಿ ನಡೆಸಿದೆ ಅದು ಹುಲುಸಾಗಿ ಬೆಳೆದಿದೆ, ಕಾಲ ಕಾಲಕ್ಕೆ ರೂಪಾಂತರವೂ ಮಾಡಿದ್ದೇನೆ.    ಅಮಟೆಕಾಯಿ ಚಿಗುರು - ಹೂವು - ಕಾಯಿ ಎಲ್ಲವೂ ಬಳಸುತ್ತಾರೆ ಇದರ ಆರೋಮ ಕೂಡ ವಿಶಿಷ್ಟ.   ಅಮಟೆಕಾಯಿ ಎಳೆ ಮಿಡಿ ಉಪ್ಪಿನಕಾಯಿ, ಪೂರ್ಣ ಬೆಳೆಯುವ ಮೊದಲು ಉದ್ದ ಸಿಗಿದು ಹಾಕುವ ಕಡಿ ಉಪ್ಪಿನಕಾಯಿ, ನಂತರ ಜಜ್ಜಿ ಇಡಿಯಾಗಿ ಸಿಹಿ ಅಥವ ಕಾರದ ಉಪ್ಪಿನ ಕಾಯಿ, ಮಾವಿನ ಮಿಡಿಯಂತೆ ಚಟ್ಟ...