Skip to main content

Posts

Showing posts with the label Kumara Rama and Aridramale Habba

3435. ಆರಿದ್ರಾ ಮಳೆ ಹಬ್ಬ ಕುಮಾರ ರಾಮ ಪೂಜೆ

#ಮಲೆನಾಡಿನ_ಆರಿದ್ರಮಳೆ_ಹಬ್ಬದ_ವಿಶಿಷ್ಟ_ಆಚರಣೆಯ_ಹಿನ್ನೆಲೆ #ಸಮಾಜಮುಖಿಯಲ್ಲಿ_ಕನ್ನೇಶ್ವರರಾಮ_ಬರೆದ_ಲೇಖನ #ಬರಹಗಾರ_ಉಮೇಶ್_ಮಳೆಮಟ್_ಲೇಖನ_ನೋಡಿ #aridranakshatra #malenadu #divaru #kunararama ಮಲೆನಾಡಿನಲ್ಲಿ ಈ ವರ್ಷ ಆರಿದ್ರಾ ಮಳೆ ಭರಪೂರ ಸುರಿದಿದೆ 4-ಜುಲೈ-2025ಕ್ಕೆ ಆರಿದ್ರ ಮಳೆ ಮುಕ್ತಾಯ ಆಯಿತು ಈಗ ಪುನರ್ವಸು ಮಳೆ ಪ್ರಾರಂಭ ಆಗಿದೆ.    ಆರಿದ್ರ ನಕ್ಷತ್ರದ ಮಳೆಗೆ ಆಡು ಮಾತಿನಲ್ಲಿ ಆದ್ರೆ ಮಳೆ ಎಂಬ ಸಂಕ್ಷಿಪ್ತ ಪದ ಬಳಕೆ ಬಂದಿದೆ.    ಅನೇಕ ಗಾದೆಗಳೂ ಇದೆ ಅದರಲ್ಲಿ "ಆರಿದ್ರ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗುವುದಿಲ್ಲ" "ಆರಿದ್ರ ಮಳೆ ಆರದೆ ಹುಯ್ಯುತ್ತದೆ" " ಆರಿದ್ರ ಇಲ್ಲದಿದ್ದರೆ ದರಿದ್ರ ಖಂಡಿತಾ "   " ಆರಿದ್ರ ಮಳೆಗೆ ಆದವನೆ ಗಂಡ"... ಹೀಗೆ ಹಲವಾರು. #ಸಮಾಜಮುಖಿಯಲ್ಲಿ_ಕುಮಾರರಾಮರ_ಲೇಖನ ಬುಡಕಟ್ಟು ರಾಜಪುತ್ರ ಕುಮಾರರಾಮ ತನ್ನ ವೀರತ್ವ,ಧೀರತನ, ಮಹಿಳೆಯರ ಮೇಲಿನ ಗೌರವಾದರಗಳಿಂದ ಇತಿಹಾಸ ಸೇರಿದ ಹೈದರಾಬಾದ್ ಕರ್ನಾಟಕದ ದೊರೆ. ವಿಜಯನಗರ ಸಾಂಮ್ರಾಜ್ಯದ ಮೂಲ ಪುರುಷ  ಎಂದು ಗುರುತಿಸಲಾಗುವ ಕುಮಾರ ರಾಮನನ್ನು ಹೈದರಾಬಾದ್ ಕರ್ನಾಟಕ ಜನತೆ ಈಗಲೂ ಗೌರವದಿಂದ ಸ್ಮರಿಸಿ ಆರಾಧಿಸುತ್ತಾರೆ. ಆದರೆ ಇದೇ ಕುಮಾರರಾಮನನ್ನು ಮಲೆನಾಡಿನ ಜನ ಪ್ರತಿವರ್ಷ ಸ್ಮರಿಸಿ, ಪೂಜಿಸುವ ಸಂಪ್ರದಾಯವೊಂದು ಮಲೆನಾಡು ಭಾಗದಲ್ಲಿದೆ. ಬನವಾಸಿ,ಸಿದ್ಧಾಪುರ, ಶಿರಸಿ,ಸಾಗರ, ಸೊರಬಾಗಳ...