Blog number 931. ಪ್ರಸಿದ್ದ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಮಾರಿಕಾಂಬೆಗೆ ಬಣ್ಣ ಮಾಡುವುದು ಶಕುಂತಳಾ ಗುಡಿಗಾರ್ ಎಂಬ ಮಹಿಳೆ, ಸರ್ಪಸುತ್ತು ಕಾಯಿಲೆಗೆ ಆಸ್ಥಳದಲ್ಲಿ ಗರುಡ ಬಿಡಿಸಿ ಕಟ್ಟು ಚಿಕಿತ್ಸೆ ಮಾಡುವ ಇವರ ಕುಟುಂಬದ ವೈದ್ಯ ಪದ್ದತಿಯಲ್ಲೂ ಇವರು ಪ್ರಸಿದ್ದರು.
#ಗುಡಿಗಾರರೆಂಬ_ಶ್ರೀಗಂದದ_ಕೆತ್ತನೆಗಾರರು. #ಜಡೆ_ಊರಿಂದ_ಕುರುಬರಲಿ೦ಗಣ್ಣ_ಮತ್ತು_ಪುತ್ತೂರಾಯರು_ಸಾಗರಕ್ಕೆ_ಕರೆತಂದ_ಅಣ್ಣಪ್ಪಗುಡಿಗಾರ_ಕುಟುಂಬ #ಶ್ರೀಗಂದವೇ_ಇಲ್ಲದ_ಈ_ಕಾಲದಲ್ಲಿ_ತಮ್ಮ_ಕುಲಕಸಬು_ಬಿಡುತ್ತಿರುವ_ಗುಡಿಗಾರರು #ಇಪ್ಪತ್ತೈದು_ವರ್ಷದ_ಹಿಂದೆ_ಅಣ್ಣಪ್ಪಗುಡಿಗಾರರ_ಮಗ_ದೇವಿಪ್ರಸಾದಗುಡಿಗಾರರ_ಬಗ್ಗೆ_ಪತ್ರಿಕೆಗಳಲ್ಲಿ_ಲೇಖನ_ಬರೆದಿದ್ದೆ #ದೇವಿಪ್ರಸಾದಗುಡಿಗಾರರ_ಮರಣ_ನಂತರ_ಕುಟುಂಬದ_ಹೊಣೆ_ಹೊತ್ತ_ಅವರ_ಸಹೋದರಿ_ಶಕುಂತಲಾಗುಡಿಗಾರ್ #ಪ್ರಸಿದ್ಧ_ಸಾಗರದ_ಮಾರಿಕಾಂಬೆ_ಜಾತ್ರೆಯಲ್ಲಿ_ದೇವರ_ವಿಗ್ರಹಕ್ಕೆ_ಬಣ್ಣ_ಮಾಡುವ_ಶಕುಂತಲಾಗುಡಿಗಾರ್_ಎಂಬ_ಸಾಹಿಸಿ. #ಸಪ೯ಸುತ್ತು_ಕಾಯಿಲೆಗೆ_ಬಣ್ಣದಿಂದ_ಗರುಡ_ಬಿಡಿಸಿ_ಕಟ್ಟು_ಮಾಡುವ_ಇವರ_ವಂಶಪಾರಂಪರ್ಯ_ಚಿಕಿತ್ಸೆ ಶಿವಮೊಗ್ಗ ಜಿಲ್ಲೆಯ ಸಾಗರ, ಸೊರಬ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮುಟಾದಲ್ಲಿ ಒಂದು ಕಾಲದಲ್ಲಿ ಶ್ರೀಗಂದದ ಮರದ ವಿಗ್ರಹಗಳ ಕೆತ್ತನೆಗಾರರಿಗೆ ಕೈ ತುಂಬಾ ಕೆಲಸ ಅವರು ಕೆತ್ತಿದ ವಿಗ್ರಹಗಳಿಗೆ ದೇಶ ವಿದೇಶಗಳಲ್ಲಿ ಭಾರೀ ಬೇಡಿಕೆ. ಸುವಾಸನೆಯ ಶ್ರೀಗಂದದ ಬಗ್ಗೆ ಗಾದೆಯೂ ಇದೆ "ಸಗಣಿಯವನ ಕೈಯಲ್ಲಿ ಗುದ್ದಾಡುವುದಕ್ಕಿಂತ ಗಂದದವನ ಕೈಯಲ್ಲಿ ಗುದ್ದಾಡುವುದು ಲೇಸು" ಅಂತ ಇದರ ಗೂಡಾರ್ಥ ಏನೇ ಇರಲಿ ಇದು ಶ್ರೀಗಂಧದ ಶ್ರೇಷ್ಟತೆ ಹೇಳುತ್ತದೆ. ಆದರೆ ಈಗ ಶ್ರೀಗಂದ ವಿರಳ, ಅರಣ್ಯದಲ್ಲಿನ ಶ್ರೀಗಂದ ಇಲ್ಲವೇ ಇಲ್ಲ, ಸರ್ಕಾರದಲ್ಲಿ ಕೂಡ ಬೇಕಾದಷ್ಟು ಶ್ರೀ...