ಭಾಗ-37, ಆನಂದಪುರಂ ಇತಿಹಾಸ, ಶಿವಮೊಗ್ಗ ಜಿಲ್ಲೆಯ ಪ್ರಭಾವಿ ಕಾಂಗ್ರೇಸ್ ರಾಜಕಾರಣಿ ಬದರಿನಾಯಣ ಅಯ್ಯಂಗಾರರು ದೇವರಾಜು ಅರಸರ ಮಂತ್ರಿ ಮಂಡಲದಲ್ಲಿ ವಿದ್ಯಾ ಮಂತ್ರಿ ಆಗಿದ್ದವರಿಂದ ರಾಜಿನಾಮೆ ಪಡೆಯುವ ಷಡ್ಯಂತ್ರ
*#ಭಾಗ_37.* *#ಆನಂದಪುರಂ_ಇತಿಹಾಸ.* *#ವಿದ್ಯಾಮಂತ್ರಿ_ಬದರಿನಾರಾಯಣರ_ರಾಜಿನಾಮೆ.* *#ಇಂದಿರಾಗಾಂಧಿಗೆ_ಸುಳ್ಳು_ಮಾಹಿತಿ_ನೀಡಿದ_ಪ್ರಕರಣ* *#ರಾಜಿನಾಮೆ_ಬೇಡ_ಕಾಲಾವಕಾಶ_ಕೊಡಿ_ಎಂದು_ಮುಖ್ಯಮಂತ್ರಿ_ದೇವರಾಜ್_ಅರಸ್* *#ಶಿವಮೊಗ್ಗದ_ಹೊಸನಗರದ_ಶಾಸಕರಾಗಿದ್ದ_ಶಿರ್ನಾಳಿ_ಚಂದ್ರಶೇಖರ್_ಕಾರಣ.* *ಆನಂದಪುರಂನ ಬದರಿನಾರಾಯಣ ಅಯ್ಯಂಗಾರರರು ಕರ್ನಾಟಕ ಪ್ರದೇಶ ಕಾಂಗ್ರೇಸ್ ನ ಆಗಿನ ಖಾಯಂ ಖಜಾಂಚಿಗಳು, ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಶಾಸಕರಾಗಿ ವಿದ್ಯಾ ಮಂತ್ರಿ ಆಗಿದ್ದು ಅವತ್ತಿನ ಕಾಲದಲ್ಲಿ ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಬದರಿನಾರಾಯಣ ಅಯ್ಯಂಗಾರ್ ಎಷ್ಟು ಪ್ರಬಾವಶಾಲಿ ಅನ್ನುವುದು ಅಂದಾಜಿಸಬಹುದು.* *ಮುಖ್ಯಮ೦ತ್ರಿ ನಿಜಲಿಂಗಪ್ಪರ ವಿರುದ್ಧ ದೇವರಾಜ ಅರಸರ ಬಂಡಾಯಕ್ಕೆ ನೀರು ಗೊಬ್ಬರ ಹಾಕಿ ಪೋಷಿಸಿದವರೇ ಬದರಿನಾರಾಯಣ್ ಅಯ್ಯಂಗಾರರು, ಮುಂದೆ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಅವಧಿಯಲ್ಲೂ ಹಿರಿಯ ಶಾಸಕರೂ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಮುಖಂಡರಾಗಿದ್ದ ಬದರಿ ನಾರಾಯಣ ಅಯ್ಯಂಗಾರರಿಗೆ ದೇವರಾಜ ಅರಸರ ಗುಂಪು ಎಂಬ ಕಾರಣದಿಂದ ಮಂತ್ರಿ ಸ್ಥಾನ ಸಿಗುವುದಿಲ್ಲ.* *ದೇವರಾಜ್ ಅರಸರು ಮುಖ್ಯಮಂತ್ರಿ ಆದ ಮೇಲೆ ಬದರಿನಾರಾಯಣ ಅಯ್ಯಂಗಾರರಿಗೆ ಕ್ಯಾಬಿನೆಟ್ ದರ್ಜೆ ವಿದ್ಯಾ ಮಂತ್ರಿ ಸ್ಥಾನ ಸಿಗುತ್ತದೆ ಇದು ಇಡೀ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಕ್ಷದಲ್ಲಿ ಸಂಚಲನ ಉಂಟು ...