#ನಾನು_ಮೊದಲ_ಬಾರಿಗೆ_ಜೋಗ_ಜಲಪಾತ_ನೋಡಿದ್ದು_1977 #ಆ_ವರ್ಷ_ಲಿಂಗನಮಕ್ಕಿ_ಅಣೆಕಟ್ಟಿನ_ಎಲ್ಲಾ_ಕ್ರಸ್ಟ್_ಗೇಟ್ಗಳನ್ನು #ತೆರೆದು_ಅಗಾಧ_ನೀರನ್ನು_ಹೊರ_ಬಿಡಲಾಗಿತ್ತು #ಎಲ್_ಬಿ_ಕಾಲೇಜಿನ_ಬ್ಯಾಡ್ಮಿಂಟನ್_ತಾರೆ_ನಮ್ಮೂರಿನ #ಗಣಪತಿಶೇಟ್_ನಮಗೆ_ಜೋಗ್_ಫಾಲ್ಸ್_ತೋರಿಸಿದ_ಮಿತ್ರ. #jogfalls #linganamakki #siddapura #ಸಾಗರ್ #shimoga ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಹರಿಯುವ ಶರಾವತಿ ನದಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೇರುಸೊಪ್ಪ ಕೊಳ್ಳದಲ್ಲಿ ಜೋಗ್ ಜಲಪಾತವಾಗಿ ಧಮ್ಮಿಕ್ಕುತ್ತದೆ ಬೇರೆ ತಾಲೂಕಿನ ಜನ ಸಾಗರ ಸಿದ್ದಾಪುರ ತಾಲೂಕಿನ ಎಲ್ಲರೂ ಜೋಗ ಜಲಪಾತ ನೋಡಿದ್ದಾರೆಂದು ಭಾವಿಸುತ್ತಾರೆ ಆದರೆ ಸಮೀಪದವರು ಈ ಜಲಪಾತ ನೋಡದೇ ಇರುವವರು ಅನೇಕರಿದ್ದಾರೆ, ನಾನು ನನ್ನ 15 ನೇ ವಯಸ್ಸಿನ ತನಕ ಜೋಗ ಜಲಪಾತ ನೋಡಿರಲಿಲ್ಲ. ನಾನು 8 ನೇ ತರಗತಿಗೆ ಸಾಗರ ಮುನ್ಸಿಪ್ ಹೈಸ್ಕೂಲ್ ಸೇರಿದಾಗ ನಿತ್ಯ ಬೆಳಿಗ್ಗೆ ರೈಲಿನಲ್ಲಿ ಸಾಗರಕ್ಕೆ ಹೋಗಿ ಕ್ಲಾಸ್ ಮುಗಿಸಿ ಸಂಜೆ ರೈಲಿನಲ್ಲಿ ವಾಪಾಸು ಬರುವ ಅನೇಕ ನಮ್ಮ ಊರಿನ ವಿದ್ಯಾರ್ಥಿ ವೃಂದದೊಂದಿಗೆ ನನ್ನ ಪಯಣ ಇದು. ಆಗ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರೀ ಕಾಲೇಜಿನಲ್ಲಿ ಪದವಿ ತರಗತಿ ವಿದ್ಯಾರ್ಥಿ ಆಗಿದ್ದ ಆನಂದಪುರಂನ ಗಣಪತಿ ಶೇಟ್ ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ ಹೀರೋ ಆಗಿದ್ದರು, ಅವರೇ ರೈಲಿನ ನಮ್ಮ ತಂಡದ ನಾಯಕರು. ಗಣ...