#ಖಾಲಿಚೆಕ್ ನಿಂದ ಬಡ್ಡಿ ವ್ಯವಹಾರದವರ ಅಪರಾ ತಪರಾ ವಸೂಲಿ ಸಾಲಗಾರರ ಆತ್ಮಹತ್ಯಗೆ ಪ್ರೇರಣೆ# ಇವತ್ತಿನ ವಿಜಯ ಕನಾ೯ಟಕದ ನಮ್ಮ ಶಿವಮೊಗ್ಗ ಪುರವಣಿಯಲ್ಲಿ ತೀಥ೯ಹಳ್ಳಿಯ ರಾಘವೇoದ್ರ ಮೇಗರವಳ್ಳಿ "ಖಾಲಿ ಚೆಕ್ ನೀಡಿ ಕಂಗಾಲಾದ ಸಾಲಗಾರ" ಎಂಬ ಅತ್ಯುತ್ತಮ ಲೇಖನ ಪ್ರಕಟಿಸಿದ್ದಾರೆ ಜೊತೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ಅಭಿಪ್ರಾಯ ಬಡ್ಡಿ ವ್ಯವಹಾರಸ್ಥರು ಕಿರುಕುಳ ನೀಡಿದರೆ ಸಮೀಪ ಠಾಣೆಗೆ ದೂರು ನೀಡಿದರೆ ತಕ್ಷಣ ಕಾನೂನು ಕ್ರಮ ಜರುಗಿಸುವ ಅಭಯ ಬಾಕ್ಸ್ ವರದಿ ಆಗಿದೆ. ದಿನ ಬಡ್ಡಿ, ಮೀಟರ್ ಬಡ್ಡಿ ಮಾಫಿಯಾ ಎಲ್ಲಾ ಊರಲ್ಲೂ ಇದೆ ಮೊನ್ನೆ ಮೊನ್ನೆ ಗೆಳೆಯನೊಬ್ಬ ತಾನು ವಿಷ ಕುಡಿಯುವ ಸಂದಭ೯ ಬಂದಿದೆ ಅಂದಾಗ ಅವನ ಕಷ್ಟ ಪರಿಹಾರಕ್ಕೆ ಮಾಗ೯ ತೋರಿಸಿದೆವು ಆದರೆ ಅವನ ರಬ್ಬರ್ ತೋಟ ಖರೀದಿ ಅಗ್ರೀಮೆ೦ಟ್ ಮಾಡಿದ ರೀತಿ ಸಾಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಜಮೀನು ಪಹಣಿಯಲ್ಲಿ ಸಾಲ ಕೊಟ್ಟವನ ಹೆಸರು ನಮೂದಾಗಿತ್ತು ನಾಕಾರು ಖಾಲಿ ಚೆಕ್ ಬೇರೆ ಬೇರೆಯವರ ಹೆಸರಲ್ಲಿ ಹತ್ತಾರು ಲಕ್ಷಕ್ಕೆ ಕೇಸ್ ಬೇರೆ ಇದಕ್ಕೆ ಬುದ್ಧಿವಂತ ಪ್ರಗತಿ ಪರ ಎನ್ನುವ ವಕೀಲರ ವಕಾಲತ್ತು. ನಂತರ ಅವನ ಅದ೯ ಜಮೀನು ಬೇರೆಯವರಿಗೆ ಕ್ರಯ ನೀಡಿ ಈ ಸಾಲಗಾರನ ಪಾಶದಿಂದ ಪರಿಹರಿಸಲಾಯಿತು ಸರಿಯಾದ ಸಮಯದಲ್ಲಿ ಈತನಿಗೆ ಸಲಹೆ ಸಹಾಯ ಸಿಕ್ಕಿದ್ದರಿಂದ ಜೀವ ಉಳಿಯಿತು, ಕೈತಪ್ಪಿದ್ದ ಆಸ್ತಿ ಆದ೯ ಉಳಿಯಿತು. 1992ರಲ್ಲಿ ಶಿವಮೊಗ್ಗದ ಜಿಲ್ಲಾಧ...