ಇವತ್ತಿನ ವಿಜಯ ಕನಾ೯ಟಕದ ನಮ್ಮ ಶಿವಮೊಗ್ಗ ಪುರವಣಿಯಲ್ಲಿ ತೀಥ೯ಹಳ್ಳಿಯ ರಾಘವೇoದ್ರ ಮೇಗರವಳ್ಳಿ "ಖಾಲಿ ಚೆಕ್ ನೀಡಿ ಕಂಗಾಲಾದ ಸಾಲಗಾರ" ಎಂಬ ಅತ್ಯುತ್ತಮ ಲೇಖನ ಪ್ರಕಟಿಸಿದ್ದಾರೆ ಜೊತೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ಅಭಿಪ್ರಾಯ ಬಡ್ಡಿ ವ್ಯವಹಾರಸ್ಥರು ಕಿರುಕುಳ ನೀಡಿದರೆ ಸಮೀಪ ಠಾಣೆಗೆ ದೂರು ನೀಡಿದರೆ ತಕ್ಷಣ ಕಾನೂನು ಕ್ರಮ ಜರುಗಿಸುವ ಅಭಯ ಬಾಕ್ಸ್ ವರದಿ ಆಗಿದೆ.
ದಿನ ಬಡ್ಡಿ, ಮೀಟರ್ ಬಡ್ಡಿ ಮಾಫಿಯಾ ಎಲ್ಲಾ ಊರಲ್ಲೂ ಇದೆ ಮೊನ್ನೆ ಮೊನ್ನೆ ಗೆಳೆಯನೊಬ್ಬ ತಾನು ವಿಷ ಕುಡಿಯುವ ಸಂದಭ೯ ಬಂದಿದೆ ಅಂದಾಗ ಅವನ ಕಷ್ಟ ಪರಿಹಾರಕ್ಕೆ ಮಾಗ೯ ತೋರಿಸಿದೆವು ಆದರೆ ಅವನ ರಬ್ಬರ್ ತೋಟ ಖರೀದಿ ಅಗ್ರೀಮೆ೦ಟ್ ಮಾಡಿದ ರೀತಿ ಸಾಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಜಮೀನು ಪಹಣಿಯಲ್ಲಿ ಸಾಲ ಕೊಟ್ಟವನ ಹೆಸರು ನಮೂದಾಗಿತ್ತು ನಾಕಾರು ಖಾಲಿ ಚೆಕ್ ಬೇರೆ ಬೇರೆಯವರ ಹೆಸರಲ್ಲಿ ಹತ್ತಾರು ಲಕ್ಷಕ್ಕೆ ಕೇಸ್ ಬೇರೆ ಇದಕ್ಕೆ ಬುದ್ಧಿವಂತ ಪ್ರಗತಿ ಪರ ಎನ್ನುವ ವಕೀಲರ ವಕಾಲತ್ತು.
ನಂತರ ಅವನ ಅದ೯ ಜಮೀನು ಬೇರೆಯವರಿಗೆ ಕ್ರಯ ನೀಡಿ ಈ ಸಾಲಗಾರನ ಪಾಶದಿಂದ ಪರಿಹರಿಸಲಾಯಿತು ಸರಿಯಾದ ಸಮಯದಲ್ಲಿ ಈತನಿಗೆ ಸಲಹೆ ಸಹಾಯ ಸಿಕ್ಕಿದ್ದರಿಂದ ಜೀವ ಉಳಿಯಿತು, ಕೈತಪ್ಪಿದ್ದ ಆಸ್ತಿ ಆದ೯ ಉಳಿಯಿತು.
1992ರಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿ ಆಗಿದ್ದ ವಿಜಯಕುಮಾರ್ ಗ್ರಾಮಾಂತರ ಪ್ರದೇಶದಲ್ಲಿ ಸಾವ೯ಜನಿಕರಿಗೆ ಬಸ್ ಸೇವೆ ಒದಗಿಸಲು ಗ್ರಾಮಾಂತರ ಸಾರಿಗೆ ಎಂಬ ಯೋಜನೆ ಜಾರಿ ತಂದಿದ್ದರು ಆಯಾ ತಾಲ್ಲೂಕಿನಲ್ಲಿ ಬಸ್ ಸಂಪಕ೯ ಇಲ್ಲದ ಮಾಗ೯ ಗುರುತಿಸಿ ಆಸಕ್ತರಿಗೆ ಪಮಿ೯ಟ್ ಸರಳವಾಗಿ ಮಂಜೂರು ಮಾಡುತ್ತಿದ್ದರು ಹೊಸ ನಗರ ತಾಲ್ಲೂಕಿನ ಬೆಳ್ಳೂರು - ರಿಪ್ಪನ್ ಪೇಟೆ -ಆನಂದಪುರ- ಸಾಗರ ಮಾಗ೯ದ ಪಮಿ೯ಟ್ ನಾನು ಪಡೆದಿದ್ದೆ.
ಈ ಮಾಗ೯ದಲ್ಲಿ ಪಾಲುದಾರನೊವ೯ನ ಜೊತೆ ಮಾಡಿ ಪ್ರಶಾಂತ್ ಎಂಬ ಬಸ್ ಬಿಟ್ಟಿದ್ದೆ ಆದರೆ ಅನುಭವ ಇರುವ ಇನ್ನೊವ೯ನನ್ನ ಪಾಲುದಾರನಾಗಲು ವಿನಂತಿಸಿದೆವು ಆತಿ ಚಾಲು ಆದ ಆತ ಬಂಡವಾಳ ಇಲ್ಲದೆ ಪಾಲುದಾರನಾಗಿ ಸಹಾಯ ನೀಡಲು ಮುಂದೆ ಬಂದ ನಾವೊ ಅನನಭವಿಗಳು ಹಿಂದೂ ಮುಂದು ಯೋಚಿಸದೆ ಸೇರಿಸಿಕೊಂಡೆವು ನಂತರ ಆತನ ಸಂಬಂದಿಗಳೆ ನೌಕರರು ಹೆಚ್ಚಿನ ದಿನಂಪ್ರತಿ ಲಾಭ ಆತ ಮಾಡುತ್ತಿದ್ದ ವಾಷಿ೯ಕ ಲೆಕಾಚಾರದಲ್ಲೂ ಅವನಿಗೆ ಸರಿ ಪಾಲು ನೀಡಿದೆವು ನಂತರ ನಮಗೆ ಅವನ ಕಪಿ ಮುಷ್ಟಿಯಿ೦ದ ಹೊರಬರಲು ಬಸ್ ಮಾರಾಟ ಮಾಡಿದೆವು ಪ್ರತಿ ದಿನ ಲೈನ್ ಬಾಡಿಗೆ 3 ವಷ೯ ಆತನೆ ಪಡೆದ ನಮಗೆ ಕೊಡಲಿಲ್ಲ ನಮಗೆ ಬೇರೆ ಅಕ್ಕಿ ಗಿರಣಿ, ತಂಪು ಪಾನಿಯದ ಉದ್ದಿಮೆಯಲ್ಲಿ ಲಾಭ ಇದ್ದಿದ್ದರಿಂದ ಈ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ ಆಗಲೇ ಆತ ನಮ್ಮ ಗಮನಕ್ಕೆ ತರದೆ ನನ್ನ ಸಹೋದರನ 4 ಖಾಲಿ ಚೆಕ್ ಯಾವಾಗಲೋ ಟೈರ್ ತರಲು ಅಂತ ಪಡೆದಿದ್ದು ಅದನ್ನ 50 ಸಾವಿರ ಅಂತ ಬರೆದು ಬೌನ್ಸ್ ಮಾಡಿಸಿ ಕೇಸು ಹಾಕಿಸಿ ವಸೂಲಿಯು ಮಾಡಿಸಿಬಿಟ್ಟ, ಬಂಡವಾಳ ಇಲ್ಲದೆ ನಮ್ಮಿ೦ದ ಲಾಭವೂ ತಿ೦ದು, ಅವನ ಇಡೀ ಕುಟುಂಬ ಉದ್ಯೋಗವು ಪಡೆದು, 3 ವಷ೯ ಲೈನ್ ಬಾಡಿಗೆ ನನಗೆ ಬರಬೇಕಾದದ್ದು ಮೋಸ ಮಾಡಿ ಚೆಕ್ ಕೇಸ್ ಹಾಕಿ 50 ಸಾವಿರ ಪೀಕಿಸಿದ ಅವನ ಬುದ್ದಿವಂತಿಗೆ ಮೋಸ ಎನ್ನುವುದಾದರೂ ಹೇಗೆ ಅವತ್ತೇ ತೀಮಾ೯ನ ಮಾಡಿದೆ ಖಾಲಿ ಚೆಕ್ ಕೊಡಬಾರದೆಂದು.
ಆದರೆ ನನ್ನ ತಂದೆ ತಾಯಿ ಹೆಸರಲ್ಲಿ ಕಲ್ಯಾಣ ಮಂಟಪ ಕಟ್ಟುವ ಕಾಮಗಾರಿ ಕುಲಬಾಂದವನೊಬ್ಬನಿಗೆ ನೀಡಿದ್ದೆ ಆತ 75 ಸಾವಿರ ರೂಪಾಯಿ ಚೆಕ್ ಬೌನ್ಸ್ ಮಾಡಿ ನನ್ನ ಜೈಲಿಗೆ ಕಳಿಸುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ ಈತನ ಮಗಳು ಹೃದಯ ಸಂಬಂದಿ ತೊ೦ದರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸೇರಿದ್ದಾಗ ಹೋಗಿ ಹತ್ತು ಸಾವಿರ ಹಣ ಸಹಾಯ ಮಾಡಿದ್ದೆ ಅವಳು ವಕೀಲಿಕೆ ಓದಿ ನನಗೆ ತೊಂದರೆ ನೀಡಲು ಮುಂದೆ ಬಂದಿದ್ದಲು ಹೀಗೆ ನಾನೇ ಎರಡು ಬಾರಿ ಚೆಕ್ ಲೆಖ್ಖಾಚಾರದಲ್ಲಿ ಮುಗ್ಗರಿಸಿದ್ದೆ.
ಮೊಸಗಾರರಿಗೆ ಇನ್ನೊಬ್ಬರ ಹಣ ಆಸ್ತಿ ಹೊಡೆದುಕೊಳ್ಳಲು ಚೆಕ್ ಬೌನ್ಸ್ ಕೇಸುಗಳ ದುರುಪಯೋಗವೇ ಈಗ ಹೆಚ್ಚು ಆದರೆ ಈಗೆಲ್ಲ ಇಂತಹ ತೊಂದರೆ ಆದವರಿಗೆ ಫೋಲಿಸರಿOದ ರಕ್ಷಣೆ ಸಿಗುವುದು ದೊಡ್ಡ ಉಪಕಾರ ಮತ್ತು ಪರಿಹಾರ.
ಈ ರೀತಿ ತೊಂದರೆಗೆ ಒಳಪಡುವವರು ನಿಭ೯ಯದಿ೦ದ ಪೋಲಿಸರಿಗೆ ದೂರು ನೀಡಲು ಮುಂದಾಗಬೇಕು.
Comments
Post a Comment