Skip to main content

Posts

Showing posts with the label After 46 years met my Class teacher.

Blog number 1817. ನನ್ನ 7ನೇ ತರಗತಿ ಕ್ಲಾಸ್ ಟೀಚರ್ ಜಯಂತಿ ವಾಲ್ಮೀಕಿ ಆಳ್ವಾರ್ 46 ವರ್ಷದ ನಂತರ ಬೇಟಿ ಮತ್ತು ಗುರುಕಾಣಿಕೆ ಸಮಪ೯ಣೆ.

#ನಲವತ್ತಾರು_ವರ್ಷದ_ನಂತರ_ಬೇಟಿ #ನನಗೆ_ಏಳನೆ_ತರಗತಿಯಲ್ಲಿ_ಕ್ಲಾಸ್_ಟೀಚರ್ #ಶ್ರೀಮತಿ_ಜಯಂತಿ_ಆಳ್ವಾರ್  #ಇವತ್ತು_ಅವರ_ಇಡೀ_ಕುಟುಂಬ_ನಮ್ಮ_ಅತಿಥಿಗಳು. #ಇವತ್ತಿನ_ದಿನ_ನನಗೆ_ಅತ್ಯಂತ_ಸಂತೃಪ್ತಿಯ_ದಿನ.   ನನ್ನ ಏಳನೇ ತರಗತಿಯ ಕ್ಲಾಸ್ ಟೀಚರ್ ಶ್ರೀಮತಿ ಜಯಂತಿ ವಾಲ್ಮಿಕಿ ಆಳ್ವಾರ್, ಇವರ ಸರ್ಕಾರಿ ಶಾಲಾ ಶಿಕ್ಷಕ ವೃತ್ತಿ ಆನಂದಪುರಂನ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 1976 ರಲ್ಲಿ ನಾವು 6ನೇ ತರಗತಿಯಲ್ಲಿ ಇದ್ದಾಗ ಪ್ರಾರಂಭ ಆಯಿತು, 1977 ರಲ್ಲಿ ನಾವೆಲ್ಲ 7 ನೇ ತರಗತಿಗೆ ಬಂದಾಗ ನಮಗೆ ಕ್ಲಾಸ್ ಟೀಚರ್ ಇವರು.   ಪಬ್ಲಿಕ್ ಪರೀಕ್ಷೆಯಲ್ಲಿ 7ನೇ ತರಗತಿಯಲ್ಲಿ ಎಲ್ಲರೂ ತೇರ್ಗಡೆ ಆಗಲೇ ಬೇಕೆಂಬ ಗುರಿ ಇವರದ್ದು ಆದ್ದರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಜೆ ಎಲ್ಲಾ ಸಬ್ಜೆಕ್ಟ್ ಗಳ ಟ್ಯೂಷನ್ ಆನಂದಪುರಂನ ಇತಿಹಾಸ ಪ್ರಸಿದ್ಧ ರಂಗನಾಥ ದೇವಾಲಯದ ಆವರಣದಲ್ಲಿ ನಡೆಸುತ್ತಿದ್ದರು.    ಈ ದೇವಾಲಯದ ಅರ್ಚಕರು ಇವರ ತಂದೆ ಶ್ರೀ ವಾಲ್ಮೀಕಿ ಆನಂದ ಆಳ್ವಾರ್ ಇವರೆಲ್ಲ ಹುಟ್ಟಿ ಬೆಳೆದದ್ದು ಇಲ್ಲೇ, ಇವರ ತಂದೆ ಮಣ್ಣಾಗಿದ್ದೂ ಆನಂದಪುರಂನಲ್ಲಿ.   ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ ಓದಿ  https://arunprasadhombuja.blogspot.com/2021/05/7-sr.html   ಆ ವರ್ಷ 7 ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ  ಅತಿ ಹೆಚ್ಚು ಅಂಕ ಪಡೆದ ಟಾಪರ್ ಗಳು ಎಲೆ ಬೀಮಣ್ಣರ ಮಗಳ...