Skip to main content

Posts

Showing posts with the label Handigodu syndrome Desease

Blog number 2329. ಮಲೆನಾಡಿನ ಹಂದಿಗೋಡು ಕಾಯಿಲೆ

#ಮಲೆನಾಡಿನ_ಜ್ವಲಂತ_ಸಮಸ್ಯೆ   ಪ್ರಪಂಚದ_ಎರೆಡು_ನಿಗೂಡ_ಕಾಯಿಲೆ_ಶಿವಮೊಗ್ಗ_ಜಿಲ್ಲೆಯಲ್ಲಿ_ಪ್ರಥಮವಾಗಿ_ಗೋಚರಿಸಿತ್ತು ಹಂದಿಗೋಡು ಸಿಂಡ್ರಮ್ ಡಿಸೀಸ್ ಮತ್ತು ಕ್ಯಾಸನೂರು ಪಾರೆಸ್ಟ್ ಡಿಸೀಸ್ ಐವತ್ತು_ವರ್ಷವಾದರೂ_ಹಂದಿಗೋಡು_ಕಾಯಿಲೆಗೆ_ಔಷದಿ_ಕಂಡು_ಹಿಡಿಯಲಾಗಲಿಲ್ಲ. ಮಂಗನ ಕಾಯಿಲೆ ಕೂಡ ಬೇಸಿಗೆಕಾಲದಲ್ಲಿ ಹೆಚ್ಚು ಅಪಾಯ ತರುತ್ತದೆ ಕುಮಾರಸ್ವಾಮಿ_ಮುಖ್ಯಮಂತ್ರಿ_ಆಗಿದ್ದಾಗ_ಹಂದಿಗೋಡಿನಲ್ಲಿ_ಗ್ರಾಮ_ವಾಸ್ತವ್ಯ_ಮಾಡಿದ್ದರು.   ಹಂದಿಗೋಡು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣಕ್ಕೆ ಸಮೀಪದ ಒಂದು ಸಣ್ಣ ಹಳ್ಳಿ, ಹಳ್ಳಿಯ ಮೇಲು ಬಾಗದಲ್ಲಿ ಪರಿಶಿಷ್ಟರ ಕಾಲೋನಿ ಕೆಳಗೆ ಹವ್ಯಕ ಬ್ರಾಹ್ಮಣರ ಬೀದಿ.   ಅಡಿಕೆ ಬೆಳೆಗಾರರಾದ ಹವ್ಯಕ ಬ್ರಾಹ್ಮಣರ ಕೃಷಿ ಕಾರ್ಮಿಕರು ಪರಿಶಿಷ್ಟ ಕಾಲೋನಿ ವಾಸಿಗಳು 1974ರಲ್ಲಿ ಈ ಕಾಲೋನಿಯ ಕೆಲವರಿಗೆ ಮೂಳೆಯ ಸಂದುಗಳಲ್ಲಿ ವಿಪರೀತ ನೋವು ಗೋಚರಿಸಿತ್ತು ಅಂತಹ ನಾಲ್ಕು ರೋಗಿಗಳನ್ನು ಹಂದಿಗೋಡಿನ ಹೆಚ್.ಎಂ.ಚಂದ್ರಶೇಖರ್ ಸಾಗರದ ಸರ್ಕಾರಿ ಆಸ್ಪತ್ರೆಗೆ ಅಡ್ಮಿಟ್ ಮಾಡಿಸುತ್ತಾರೆ ಆದರೆ ಕಾಯಿಲೆ ಏನಂತ ವೈದ್ಯರಿಗೆ ಗೊತ್ತಾಗುವುದಿಲ್ಲ ಇದು ಹಂದಿಗೋಡು ನಿಗೂಡ ಕಾಯಿಲೆ ಪ್ರಪಂಚಕ್ಕೆ ಮೊದಲ ಬಾರಿ ಗೋಚರಿಸಿದ ಘಟನೆ.     ನಿಮಾಃನ್ಸ್ ನ ಡಾ.ಕೆ.ಎಸ್.ಮಣಿ ಇದು ನರ ಸಂಬಂದಿತ ಕಾಯಿಲೆ ಅಲ್ಲ ಮೂಳೆ ಸಂದುಗಳಲ್ಲಿ ಮೂಳೆಗಳ ಅಸ್ವಾಭವಿಕ ಬೆಳವಣಿಗೆ ಎಂದು ಮೊದಲು ಗುರುತಿಸಿದರು   ನ್ಯಾಷನಲ್ ಇನ್ಸ...