Skip to main content

Posts

Showing posts from April, 2022

Blog number 848, ಗೆಳೆತನದ ಸವಿ ನೆನಪಿಗಾಗಿ ಕಲಾವಿದ ನೀಡಿದ ಕಿನ್ನರಿ ವಾದ್ಯದ ಕೊಡುಗೆಗೆ ಬೆಲೆ ಕಟ್ಟಲು ಸಾಧ್ಯವೆ?

#ಕಿನ್ನರಿ_ಸ್ವತಃ_ತಯಾರಿಸಿ_ಕೊಡುಗೆಯಾಗಿ_ಕೊಟ್ಟ_ಕಲಾವಿದ_ನಾಗರಾಜತೊಂಬ್ರಿ #ಅದ್ಬುತ_ಸ್ಟರ_ಕಲೆ_ಒಲಿದಿರುವ_ಕಲಾವಿದ. #ಕಳೆದು_ಹೋಗಿದ್ದ_ಕೆಳದಿ_ರಾಜ_ವೆಂಕಟಪ್ಪನಾಯಕ_ಮತ್ತು_ರಾಣಿ_ಚಂಪಕಾರ_ದುರಂತ_ಪ್ರೇಮದ #ಕಳೆದು_ಹೋದ_ಲಾವಣಿಗೆ_ಪುನರ್_ರೂಪ_ಕೊಟ್ಟವರು    ಚಂಪಕ ಸರಸ್ಸು ಸ್ಮಾರಕ ನಿಮಿ೯ಸಲು ಕಾರಣವಾದ ಕೆಳದಿ ರಾಜ ವೆಂಕಟಪ್ಪ ನಾಯಕರು  ಆಕಷ೯ಕ ರಂಗೋಲಿಯ ಮೂಲಕ ಚಂಪಕಾಳ ಮೇಲೆ ಪ್ರೇಮಾ೦ಕುರವಾಗಿ ನಂತರ ಅವರ ವಿವಾಹವಾಗಿ ಪಟ್ಟದ ರಾಣಿ ಭದ್ರಮ್ಮರ ನೆಮ್ಮದಿಗೆ ಭಂಗವಾಗಿ ಅವರು ಜೀವ ತ್ಯಾಗ ಮಾಡಿದಾಗ ಪ್ರಜೆಗಳಲ್ಲಿ ಉಂಟಾದ ಅಸಹನೆಯಿಂದ ರಾಜ ವೆಂಕಟಪ್ಪ ನಾಯಕರ ಮೇಲೆ ದೊಡ್ಡ ಅಪಾದನೆ ಉಂಟಾದಾಗ ಚಂಪಕ ಹಾಲಿನೊಡನೆ ವಜ್ರದ ಪುಡಿ ಬೆರೆಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.    ಚಂಪಕಳ ಸ್ಮರಣಾರ್ಥ ಆನಂದಪುರಂನಲ್ಲಿ ಚಂಪಕ ಸರಸ್ಸು ನಿರ್ಮಿಸಿ ಈ ಪ್ರದೇಶಕ್ಕೆ ಚಂಪಕಳ ನೆನಪಿಗಾಗಿ ಆನಂದಪುರ ಎಂದು ನಾಮಕರಣ ರಾಜ ವೆಂಕಟಪ್ಪ ನಾಯಕರು ಮಾಡುತ್ತಾರೆ ಮತ್ತು ಅವರೇ ಈಗಿನ ಸಾಗರ ಪಟ್ಟಣ ಕಟ್ಟಿ ಅದಕ್ಕೆ ಸದಾಶಿವ ಸಾಗರ ಎಂದು ನಾಮಕರಣ ಮಾಡುತ್ತಾರೆ.   ಇದರ ಸಂಪೂರ್ಣ ಕಥೆಯ ಲಾವಣಿ 400 ವರ್ಷದಲ್ಲಿ ಕಳೆದು ಹೋಗಿದೆ, ಮೈಸೂರು ರಾಜರ ದಸರಾ ದರ್ಭಾರಿನಲ್ಲಿ ಕೋಲಾಟ ಪ್ರದರ್ಶನ ನೀಡಿದ್ದ ದಲಿತ ಕಲಾವಿದ ನಮ್ಮ ಊರಿನ ಸಮೀಪದ ಬಸವನ ಕೊಪ್ಪದ ಹೊಳೆ ಬಸಣ್ಣ ಈ ಲಾವಣಿ ಹಾಡುತ್ತಿದ್ದ ಕೊನೆಯ ಕಲಾವಿದರು, ಇವರು ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ

ಆನಂದಪುರಂ ಇತಿಹಾಸ ಭಾಗ-4. ಆನಂದಪುರ೦ ಕೊಡುಗೈ ದಾನಿ ರಾಮಕೃಷ್ಣ ಅಯ್ಯಂಗಾರ್ ಕುಟುಂಬ ಪರಿಚಯ

ಆನಂದಪುರಂ ಇತಿಹಾಸ ಭಾಗ_4 ಆನಂದಪುರಂನ ಕೊಡುಗೈ ದಾನಿ, ಇನಾಮುದಾರರು, ಸಮಾಜ ಸೇವಾ ನಿರತ ರಾಮಕೃಷ್ಣ ಅಯ್ಕಂಗಾರ್ ಆನಂದಪುರದ_ಅಯ್ಯಂಗಾರ್_ಕುಟುಂಬದ_ವಿವರ    ಲಕ್ಷೀಪತಿ ಅಯ್ಯಂಗಾರರು ಪಶು ಸಂಗೋಪನೆ ಮಾಡಿಕೊಂಡು ಜೀವನ ಮಾಡುತ್ತಾರೆ ಅವರ ಪುತ್ರ ರಾಮಕೃಷ್ಣ ಅಯ್ಯಂಂಗಾರ್ ಇವರ ಪತ್ನಿ ಕನಕಮ್ಮಾಳ್ ಇವರಿಗೆ ನಾಲ್ಕು ಪುತ್ರರು ದೊಡ್ಡವರು ಜಗನ್ನಾಥ ಅಯ್ಯಂಗಾರ್, ಎರಡನೆ ವೆಂಕಟಚಲಾಯ್ಯಂಗಾರ್, ಮೂರನೆಯ ಬದರಿನಾರಾಯಣ ಅಯ್ಯಂಗಾರ್ ಮತ್ತು ನಾಲ್ಕನೆಯ ಅನಂತರಾಮ ಅಯ್ಯಂಗಾರ್.  ಮೊದಲ ಪತ್ನಿ ಕನಕಮ್ಮಾಳ್ ಮೃತರಾದಾಗ ರಾಮಕೃಷ್ಣ ಅಯ್ಯಂಗಾರರು ಇನ್ನೊಂದು ವಿವಾಹ ಆಗುತ್ತಾರೆ, ಸುಂದರಮ್ಮ ಅವರ ಹೆಸರು, ಆ ಪತ್ನಿಯಿ೦ದ ಎರೆಡು ಗಂಡು ಮತ್ತು ಒಂದು ಪುತ್ರಿ ಹುಟ್ಟುತ್ತಾರೆ ಅವರ ಹೆಸರು ಶ್ರೀನಿವಾಸ ಅಯ್ಯಂಗಾರ್, ರಾಧಾಕೃಷ್ಣ ಆಯ್ಯಂಗಾರ್, ಮತ್ತು ವನಜಾಕ್ಷಿ.      ರಾಮಕೃಷ್ಣ ಅಯ್ಯಂಗಾರ್ ಮತ್ತು ಕನಕಮ್ಮಾಳ್ ದಂಪತಿಗಳ ಮೊದಲ ಪುತ್ರ ಜಗನ್ನಾಥ ಅಯ್ಯಂಗಾರರು  ಮೃತರಾಗುತ್ತಾರೆ, ಇವರ ಸ್ಮರಣಾರ್ಥವಾಗಿ ಆನಂದಪುರಂನಲ್ಲಿ ಪಶುವೈದ್ಯ ಶಾಲೆ ನಿಮಿ೯ಸಿದ್ದಾರೆ.   ಎರಡನೆ ಮಗ ವೆಂಕಟಾಚಲಯ್ಯಂಗಾರರಿಗೆ ರಾಮ ಪ್ರಸಾದ್, ರಂಗನಾಥ, ಶ್ಯಾಮಪ್ರಸಾದ್, ಜಯಪ್ರಕಾಶ್, ತಿರುನಾರಾಯಣ್, ಜಯರಾಮ ಎಂಬ ಆರು ಗಂಡು ಮಕ್ಕಳು ಮತ್ತು ಪುಷ್ಪಾ, ಕನಕ ಎಂಬ ಎರೆಡು ಹೆಣ್ಣು ಮಕ್ಕಳು.     ವೆಂಕಟಾಚಲಯ್ಯಂಗಾರರ ಮಕ್ಕಳು ಮಾತ್ರ ಆನಂದಪುರದ ರಂಗನಾಥ ಸ್ವಾಮಿ ಜಾತ

ಆನಂದಪುರಂ ಇತಿಹಾಸ ಭಾಗ-3. ಆನಂದಪುರಂ ಕನಕಮ್ಮಾಳ್ ಆಸ್ಪತ್ರೆ ನಿರ್ಮಿಸಿದ ಉದ್ದೇಶ

             ಆನಂದಪುರ೦ ಇತಿಹಾಸ ಭಾಗ_3                    #ಕನಕಮ್ಮಾಳ್_ಆಸ್ಪತ್ರೆ #ಅಯ್ಯಂಗಾರ್_ಕುಟುಂಬ_ಆನಂದಪುರಂ_ನಲ್ಲಿ_ಸ್ಥಾಪಿಸಿದ_ಆಸ್ಟತ್ರೆ. #ಈ_ಆಸ್ಪತ್ರೆ_ನಿಮಾ೯ಣದ_ಹಿಂದಿದೆ_ಒಂದು_ಮುಖ್ಯ_ಕಾರಣ         ರಾಮಕೃಷ್ಣ ಅಯ್ಯಂಗಾರರ ದಮ೯ ಪತ್ನಿ ಶೀಮತಿ ಕನಕಮ್ಮಾಳ್ ಅನಾರೋಗ್ಯದಿಂದ ಮರಣಿಸುತ್ತಾರೆ ಇದರಿಂದ ರಾಮಕೃಷ್ಣ ಅಯ್ಯಂಗಾರರು ತುಂಬಾ ದುಃಖಿತರಾಗುತ್ತಾರೆ, ಪತ್ನಿ ಕನಕಮ್ಮಾಳ್  ಅವರ ಆಭರಣ ಮಾರಾಟ ಮಾಡುತ್ತಾರೆ.       ಆ ಹಣದಲ್ಲಿ ಈಗಿನ ಹೊಸನಗರ ತಾಲ್ಲೂಕಿನ ಹರತಾಳು ಸಮೀಪದ ಹುಣಸವಳ್ಳಿಯಲ್ಲಿ ದೊಡ್ಡ ಆಸ್ತಿ ಜಮೀನು ತೋಟ ಖರೀದಿಸುತ್ತಾರೆ.      ಆದರೆ ಇದು ರಾಮಕೃಷ್ಣ ಅಯ್ಯಂಗಾರರಿಗೆ ಸಮಾದಾನ ತರುವುದಿಲ್ಲ, ಮುದ್ದಿನ ಮಡದಿಯ ಹೆಸರು ಚಿರಸ್ಥಾಯಿ ಆಗುವಂತೆ ಮಾಡಬೇಕೆಂಬ ಅದಮ್ಯ ಆಸೆ ಅವರಲ್ಲಿ ಚಿಗುರೊಡೆದಿರುತ್ತದೆ.    ಹುಣಸಳ್ಳಿಯಲ್ಲಿ ಖರೀದಿಸಿದ್ದ ಆಸ್ತಿಯನ್ನು (ಜಮೀನು, ತೋಟ ಮನೆ) ಸ್ವಾಮಿ ಗೌಡರಿಗೆ ಅಂದರೆ ಈಗಿನ ಹುಣಸಳ್ಳಿ ಚಂದ್ರಶೇಖರ ಗೌಡರ ತಂದೆಗೆ ಮಾರುತ್ತಾರೆ, ಈಗಿನ ಆನಂದ ಪುರದಿಂದ ಬಟ್ಟೆಮಲ್ಲಪ್ಪ ರಸ್ತೆಯಲ್ಲಿ ಎಡ ಭಾಗದ ಹುಣಸಳ್ಳಿ ಶಾಲೆ ಅಕ್ಕ ಪಕ್ಕದ ಈ ಜಮೀನು ನೋಡ ಬಹುದು.   ಇದನ್ನು ಖರೀದಿಸಿದ ಸ್ವಾಮಿ ಗೌಡರ ಮಗ ಚಂದ್ರಶೇಖರ ಗೌಡರು ಆನಂದಪುರದಲ್ಲಿ ಪ್ರೌಡ ಶಾಲಾ ಶಿಕ್ಷಕರಾಗಿ, ನಂತರ ಹೊಸನಗರ ತಾಲ್ಲೂಕ್ ಬೋಡ್೯ ಅಧ್ಯಕ್ಷರಾಗಿ, ಒಂದು ಅವದಿಗೆ ಹೊಸನಗರ ತಾಲ್ಲೂಕ್ ಕಾಂಗ್ರೇಸ್ ಪಕ್ಷದ

Blog number 847. ಇವತ್ತು ಹಸಿರು ದಂಟು ಹರಿವೆಯ ಮಂಗಳೂರು ಶೈಲಿಯ ಬೇಳೆ ರಹಿತ ಸಾಂಬಾರು.

#ದಂಟು_ಹರಿವೆಯ_ನೆನಪು_ಮಾಡಿದ_ಪೋಸ್ಟ್_ನೋಡಿ_ಬಂದ_ದಂಟು_ಹರಿವೆ #ಗಂಟಿನಕೊಪ್ಪದ_ಟ್ರಾಕ್ಟರ್_ಮಾಲಿಕ_ಗಜೇಂದ್ರ_ತಂದು_ಕೊಟ್ಟ_ದಂಟು_ಹರಿವೆ. #ಮಂಗಳೂರು_ಶೈಲಿಯ_ದಂಟು_ಹರಿವೆ_ಸಾರು.   ದಂಟು ಹರಿವೆಯ ಪೋಸ್ಟ್ ಗಳನ್ನು ನೋಡಿದ್ದ ಗೆಳೆಯ ಗಜೇಂದ್ರ ಪೋನ್ ಮಾಡಿದ್ದರು, ತಮ್ಮ ಅಡಿಕೆ ಸಸಿ ತೋಟದ ಮಧ್ಯ ಶುಂಠಿ ಪಟ್ಟೆಯಲ್ಲಿ ಕಳೆದ ವರ್ಷ ಅಲ್ಲಲ್ಲಿ ದಂಟು ಹರಿವೆ ಹಾಕಿದ್ದರಂತೆ ಅದರ ಬಿದ್ದ ಬೀಜದಲ್ಲಿ ಕೆಲ ದಂಟು ಹರಿವೆ ಗಿಡ ಇದೆ ನಿಮ್ಮ ಮನೆಗೆ ತಂದು ಕೊಡುವುದಾಗಿ ತಿಳಿಸಿ ತಲುಪಿಸಿದ್ದರು.  ನಾನು ಊರಲ್ಲಿ ಇರಲಿಲ್ಲ, ಬುಡ ಸಮೇತ ಕಿತ್ತು ತಂದ ಇದರ ಎತ್ತರ 5 ಅಡಿಗೆ ಕಡಿಮೆ ಇರಲಿಲ್ಲ, ಬೇರಿನ ಬುಡ ಕತ್ತರಿಸಿ ನೆಡುವ ವ್ಯವಸ್ಥೆ ಮಾಡಿದೆ. ದಂಟು ಮತ್ತು ಎಲೆ ಕತ್ತರಿಸಿ ತೊಳೆದು ಬೇಳೆ ಇಲ್ಲದ ಮಂಗಳೂರು ಶೈಲಿಯ ಸಾರು ಮಾಡಿದೆ.   ತುಂಡು ಮಾಡಿದ ಹರಿವೆ ಸೊಪ್ಪು - ದಂಟು, ಟೋಮೋಟೋ-ನೀರುಳ್ಳಿ ಸ್ಲೈಸ್ ನೀರಿನ ಜೊತೆ ಉಪ್ಪಿನೊಂದಿಗೆ ಬೇಯಿಸಲು ಇಟ್ಟು.    ಅರ್ಧ ತೆಂಗಿನ ತುರಿ, ಒಂದು ಚಮಚ ಜೀರಿಗೆ - ಕೊತ್ತುಂಬರಿ - ಉದ್ದಿನಬೇಳೆ,6 ಬೆಳ್ಳುಳ್ಳಿ ಎಸಳು - ಅದ೯ ನೀರುಳ್ಳಿ - 8 ಕೆಂಪು ಮೆಣಸು - ಇಂಗು ಸಣ್ಣ ಪ್ಲೇಮ್ ನಲ್ಲಿ ಒಂದೆರೆಡು ಚಮಚ ಎಣ್ಣೆಯಲ್ಲಿ ಬಾಣಲಿಯಲ್ಲಿ ಬಾಡಿಸಿ ಗ್ರೈಂಡ್ ಮಾಡುವುದು.    ಸೊಪ್ಪು - ದಂಟು ಅರ್ಧ ಬೆಂದಾಗ ಈ ಮಸಾಲೆ ಸೇರಿಸಿ ಕುದಿದ ನಂತರ ಸಾಸಿವೆ - ಉದ್ದಿನ ಬೇಳೆ

Blog number 846. ಭಾರತ ದೇಶ ಸೀಮೆ ಎಣ್ಣೆ ಮುಕ್ತ ದೇಶವಾಗಿದೆ, ಪಡಿತರ ಸೀಮೆ ಎಣ್ಣೆ ಮುಗಿದ ಅದ್ಯಾಯ.

#ಸೀಮೆಎಣ್ಣೆ_ವಿತರಣೆ_ಯಾಕೆ_ಇಲ್ಲ #ವಿದಾನಪರಿಷತ್_ನಲ್ಲಿ_ಸದಸ್ಯ_ಸಿದ್ಧಿ_ಸೀಮೆಎಣ್ಣೆ_ಪಡಿತರದಲ್ಲಿ_ವಿತರಿಸಲು_ಒತ್ತಾಯಿಸಿದರು #ಕೇಂದ್ರಸರ್ಕಾರ_ಉಚಿತ_ಅಡುಗೆ_ಅನಿಲ_ಸಿಲೆಂಡರ್_ಸಂಪರ್ಕ_ನೀಡುವ_ಮೂಲಕ_ದೇಶ_ಸೀಮೆಎಣ್ಣೆ_ಮುಕ್ತಮಾಡಿದೆ. #ಬೆಂಗಳೂರಲ್ಲಿ_ಖಾಸಾಗಿ_ಸೀಮೆಎಣ್ಣೆ_85_ರಿಂದ_100_ರೂಗೆ_ಲಭ್ಯ.   ಕೇಂದ್ರ ಇಂದನ ಸಚಿವರಾದ ರಾಮ ನಾಯಕರು 28- ನವೆಂಬರ್ -2003 ರಲ್ಲಿ ಕೆರೋಸಿನ್ ಆಮದು ಕಡಿತಗೊಳಿಸಲು ಆದೇಶಿಸುತ್ತಾರೆ.   ಇವರಿಗೆ ದೇಶದ ಲಾರಿ ಮಾಲಿಕರ ಒತ್ತಾಯವೂ ಕಾರಣ ಏನೆಂದರೆ ಪಡಿತರ ವ್ಯವಸ್ಥೆಯ ಸೀಮೆ ಎಣ್ಣೆ ಕಳ್ಳ ಮಾರುಕಟ್ಟೆಯ ವ್ಯವಸ್ಥೆಯಲ್ಲಿ ಡಿಸೇಲ್ ಗೆ ಕಲಬೆರಕೆ ಆಗುತ್ತಿದೆ ಇದರಿಂದ ಅನೇಕ ಲಾರಿ ಮಾಲಿಕರು ಕಡಿಮೆ ಬಾಡಿಗೆಯಲ್ಲಿ ಸಾಗಾಣಿಕೆ ಮಾಡುತ್ತಾರೆ ಇದರಿಂದ ಪರಿಸರಕ್ಕೂ ಹಾನಿ, ಸರ್ಕಾರದ ಸಹಾಯದನ ಕೂಡ ದುರ್ಬಳಕೆ ಎಂಬ ಮುಖ್ಯ ಕಾರಣ.   ಭಾರತ 1.2 ಮಿಲಿಯನ್ ಬ್ಯಾರಲ್ ಸೀಮೆ ಎಣ್ಣೆ ವಾರ್ಷಿಕ ಆಮದು ಮಾಡಿ ಅದಕ್ಕೆ ಸಹಾಯಧನ ನೀಡಿ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡುತ್ತಿದ್ದ ಸೀಮೆ ಎಣ್ಣೆ ಶೇಕಡಾ 99 ದುರುಪಯೋಗ ಆಗುತ್ತಿದೆ ಎಂಬ ಸರ್ಕಾರದ ವರದಿಯೂ ಇದೆ.  ಹಾಗಾಗಿ ಮೋದಿಯವರ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ನೀಡಿ ಸೀಮೆ ಎಣ್ಣೆ ಮುಕ್ತ ಭಾರತ ಮಾಡಿದೆ.   ವಿದ್ಯುತ್ ಸಂಪರ್ಕ ಇಲ್ಲದ ಗುಡ್ಡಗಾಡು ಪ್ರದೇಶದಲ್ಲಿ, ನಿರಂತರ ವಿದ್ಯುತ್ ನೀಡಲಾಗದ ಪ್ರದೇಶದಲ್ಲಿ ಜನ ದೀಪಕ್ಕಾಗಿ ಸೀಮೆ

Blog number 845.AAC BRICKS, ಆಟೋ ಕ್ಲೇವಡ್ ಏರೇಟೆಡ್ ಕಾಂಕ್ರಿಟ್ ಬ್ರಿಕ್ಸ್, ಲೈಟ್ ವೈಟ್ ಬ್ರಿಕ್ಸ್ ಎನ್ನುವ ಅದುನಿಕ ತಂತ್ರಜ್ಞಾನದ ಇಟ್ಟಿಗೆಗಳಿಂದ ಶೀಘ್ರ ಕಟ್ಟಡ ನಿರ್ಮಾಣ.

#AUTOCLAVED_AERATED_CONCRETE_BRICKS #AAC_BRICKS. #ಶೀಘ್ರ_ಮತ್ತು_ಸುಲಭ_ನಿಮಾ೯ಣಕ್ಕೆ_ಹೊಸ_ತಂತ್ರಜ್ಞಾನದ_ಹಗುರ_ಇಟ್ಟಿಗೆ  #ಇದನ್ನ_ಕಟ್ಟಲು_ಸಿಮೆ೦ಟ್_ಮರುಳು_ಬೇಕಾಗಿಲ್ಲ  #ಪ್ರತಿ_ನಿತ್ಯ_ಕ್ಯೂರಿOಗ್_ಕೂಡ_ಇಲ್ಲ.  #ಪ್ರತಿ_ಚದರ_ಅಡಿಗೆ1kg_ಕಬ್ಬಿಣ_ಉಳಿತಾಯ    2 ಅಡಿ ಉದ್ದ 6 ಇoಚ್ ದಪ್ಪ 8 ಇಂಚ್ ಎತ್ತರದ ಇಟ್ಟಿಗೆ ತೂಕ ಕೇವಲ 12 KG ಇದಕ್ಕೆ 75 ರೂಪಾಯಿ ಅದೇ ನಮ್ಮಲ್ಲಿನ 2 ಜOಬಿಟ್ಟಿಗೆ ಈ  ಒಂದು ಇಟ್ಟಿಗೆಗೆ ಸಮ, ಜಂಬಿಟ್ಟಿಗೆ 30 ರಿಂದ 35 kg ತೂಕ ಈ 12 kg ಒಂದು ಇಟ್ಟಿಗೆ ಜಾಗದಲ್ಲಿ 30 KG ಎರೆಡು ಇಟ್ಟಿಗೆ ಅಂದರೆ 60 ರಿಂದ 70  KG ಹೀಗಾದರೆ ಇಡಿ ಕಟ್ಟಡಕ್ಕೆ ಅನಾವಶ್ಯಕ ಬಾರ ಹೇರುತ್ತೇವೆ.   60 ರಿಂದ 70 ಇಂತಹ ಇಟ್ಟಿಗೆ ಕಟ್ಟಲು 1 ಬ್ಯಾಗ್ ಮೊಟಾ೯ರ್ ಸಾಕು ಇದಕ್ಕೆ 900 ಇದೆ, ಕ್ಯೂರಿ೦ಗ್ ಬೇಡ, ಸಿಮೆಂಟ್ ಮರಳು ಬೇಡ, ಗಮ್ ಹೇಗಿದೆ ಅಂದರೆ ಇಟ್ಟಿಗೆ ಪುಡಿಮಾಡಿದರೂ ಗಮ್ ಬಿಡುವುದಿಲ್ಲ.   ಪ್ಲಾಸ್ಟರ್ ಗೆ Eco plaster ಬ೦ದಿದೆ ಇದಕ್ಕೂ ಸಿಮೆoಟ್ ಮರಳು ಬೇಡ ಕ್ಯೂರಿOಗ್ ಬೇಡ ಲೈಟ್ವೈಟ್ ಬ್ರಿಕ್ ಗಳು ಏರು ಪೇರು ಇರುವುದಿಲ್ಲ ಹಾಗಾಗಿ 10 X 10 ಅಡಿ ಅಂದರೆ ಒಂದು squareಗೆ 4 Bag Eco Plaster ಸಾಕು ಒಂದು ಚೀಲ ಇಕೊ ಫ್ಲಾಸ್ಟರ್ ಗೆ ಅಂದಾಜು 300 ರೂಪಾಯಿ.   ತಕ್ಷಣ ಕೆಲಸ ಮತ್ತು ಸುಲಭ ನಿಮಾ೯ಣಕ್ಕೆ ಇದು ಅನುಕೂಲ, ಪಿಲ್ಲರ್ ಹಾಕಿ ಕಟ್ಟಿದ ಬಹುಮಹಡಿ ಕಟ್ಟಡಕ್ಕೆ ಇದು ಹೇಳಿ ಮಾಡಿಸಿದ್ದು.  ಇ

Blog number 844. ಇಂಗ್ಲೀಷ್ ವಿಶ್ವ ದಿನ ಪ್ರತಿ ವರ್ಷ ಏಪ್ರಿಲ್ 23 ರಂದು ಆಚರಿಸುತ್ತಾರೆ ಇದು ಪ್ರಖ್ಯಾತ ಇಂಗ್ಲೀಷ್ ನಾಟಕಕಾರ ಶೇಕ್ಸ್ ಪಿಯರ್ ರ ಹುಟ್ಟಿದ ಮತ್ತು ಕಾಲವಾದ ದಿನ ಮತ್ತು ನನ್ನ ಇಂಗ್ಲೀಷ್ ಮೀಡಿಯಂ ಪ್ರೌಡ ಶಾಲಾ ಅನುಭವ.

#ಶೇಕ್ಸ್ಪಿಯರ್_ಹುಟ್ಟಿದ_ಮತ್ತು_ಕಾಲವಾದ_ಏಪ್ರಿಲ್_23_ವಿಶ್ವ_ಇಂಗ್ಲೀಷ್_ದಿನ. #ಮಕ್ಕಳು_ಇಂಗ್ಲೀಷ್_ಕಲಿಯಲಿ_ಎಂಬ_ಪೋಷಕರ_ಆಸೆ. #ಉತ್ತಮ_ಅಂಕ_ಪಡೆದು_ಶಿವಲಿಂಗಪ್ಪ_ಶಾಲೆಗೆ_ಸೇರುವ_ಅಹ೯ತೆ_ಇದ್ದರೂ_ಅದನ್ನು_ತಪ್ಪಿಸಿದ_ಶಿಕ್ಷಕರು. #ಅವರ_ಮಗನನ್ನ_ಮಾತ್ರ_ಅಲ್ಲಿಗೆ_ಸೇರಿಸಿದ_ಅವರ_ಮನೋಭಾವ. #ಹಳ್ಳಿಯಿಂದ_ಬಂದವರನ್ನು_ಗಮಾರರಂತೆ_ಅವಮಾನಿಸುತ್ತಿದ್ದ_ಶಿಕ್ಷಕರು_ಪೇಟೆ_ವಿದ್ಯಾರ್ಥಿಗಳು. #ಕನ್ನಡ_ಹೋರಾಟಗಾರರ_ಮಕ್ಕಳನ್ನು_ಕಾನ್ವೆಂಟ್_ಸೇರಿಸುವ_ಪರಿ    ಏಳನೆ ತರಗತಿಯಲ್ಲಿ ನಾನು ಅತ್ಯಂತ ಹೆಚ್ಚು ಮಾರ್ಕ್ಸ್ ಪಡೆದಿದ್ದೆ, ಮೆರಿಟ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲೂ ಪಾಸಾಗಿದ್ದೆ ಆಗ ನಮ್ಮ ತಂದೆ ನನ್ನನ್ನು ಸಾಗರದ ಮುನ್ಸಿಪಲ್ ಹೈಸ್ಕೂಲ್ ಗೆ 8ನೇ ತರಗತಿಗೆ ಇಂಗ್ಲೀಷ್ ಮೀಡಿಯಂ ಗೆ ಸೇರಿಸಿದ್ದರು.   ಆಗ ಸಾಗರದಲ್ಲಿ ಎಲ್ಲಾ ಕಾನ್ವೆಂಟ್ ಗಳು ಗಂಡು ಮಕ್ಕಳಿಗೆ 7 ನೇ ತರಗತಿ ತನಕ ಮಾತ್ರ ಇಂಗ್ಲೀಷ್ ಮೀಡಿಯಂ ಕ್ಲಾಸ್ ಮಾಡುತ್ತಿದ್ದರು ನಂತರ 8ನೇ ತರಗತಿಗೆ ಶಿವಲಿಂಗಪ್ಪ ಪ್ರೌಡ ಶಾಲೆಗೆ ಅಥವ ಸರ್ಕಾರದ ಮುನ್ಸಿಪಲ್ ಹೈಸ್ಕೂಲ್ ಗೆ ಸೇರಬೇಕಿತ್ತು.   ಶಿವಲಿಂಗಪ್ಪ ಪ್ರೌಡ ಶಾಲೆಯಲ್ಲಿ ಮೆರಿಟ್ ಇದ್ದವರಿಗೆ ಮಾತ್ರ ಸೀಟು ಸಿಗುತ್ತಿತ್ತು, ನಾನು ಪಡೆದ 7ನೇ ತರಗತಿ ಅಂಕಗಳು ನನಗೆ ಅಲ್ಲಿ ಸೇರಲು ಸುಲಭ ಇತ್ತು.   ನಮ್ಮ ಊರಿನ ಪ್ರೌಡ ಶಾಲೆಯ ಹಿಂದಿ ಪಂಡಿತರು ನಮ್ಮ ತಂದೆಗೆ ನನ್ನನ್ನು ಮುನ್ಸಿಪಲ್ ಹೈಸ್ಕೂಲಿಗೆ ಸೇರಿಸಲು ತಾಕ

Blog number 843. ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿಯವರ ನೂತನ ಗೃಹ ಪ್ರವೇಶಕ್ಕೆ ಶುಭ ಹಾರೈಕೆಗಳು

#ಪದ್ಮಶ್ರೀ_ಮಂಜಮ್ಮಜೋಗತಿಯವರ_ಸ್ವಂತ_ಮನೆಯ_ಕನಸು_ನನಸಾಗಿದೆ. #ಮುಂದಿನ_ತಿಂಗಳು_ಮೇ_3ಕ್ಕೆ_ಗೃಹಪ್ರವೇಶ #ನಾವೆಲ್ಲರೂ_ಅವರಿಗೆ_ಶುಭ_ಹಾರೈಸೋಣ.   ರಾಜ್ಯ ಜಾನಪದ ಅಕಾಡಮಿ ಅಧ್ಯಕ್ಷೆ, ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ಪಡೆದ ಮಾತಾ ಮಂಜಮ್ಮ ಜೋಗತಿಯವರ ಜೀವನದ ಬಗ್ಗೆ ತಿಳಿಯಬೇಕಾದರೆ ಅರುಣ್ ಜೋಳದಕೂಡ್ಲಿಗಿ ಬರೆದ "ನಡುವೆ ಸುಳಿವ ಹೆಣ್ಣು" ಪುಸ್ತಕ ಓದಲೇ ಬೇಕು ಓದಿದವರೆಲ್ಲರ ಹೃದಯ ಕಲಕಿ ಕಣ್ಣೀರಾಗದೆ ಇರುವುದಿಲ್ಲ.   ಕಲ್ಲು ಮುಳ್ಳಿನ ಜೀವನದ ಹಾದಿಯಲ್ಲಿ ಯಾವುದೇ ನಿರೀಕ್ಷೆ ಇಲ್ಲದೆ, ತನ್ನವರೆಂಬುವವರೆಲ್ಲ ದೂರವಾಗಿದ್ದ ಮಂಜಮ್ಮ ಜೋಗತಿ ಹೊಟ್ಟೆಪಾಡಿಗಾಗಿ ಜಾನಪದ ನೃತ್ಯ ಒಂದೇ ಕಸುಬಾಗಿತ್ತು, ದೈವ ಕೃಪೆಯಿಂದ ಜಾನಪದ ಅಕಾಡೆಮಿ ಸದಸ್ಯರಾಗಿ ಸರ್ಕಾರ ನೇಮಿಸಿತ್ತು ನಂತರ ಮುಖ್ಯಮಂತ್ರಿ ಆಗಿದ್ದ ಯಡೂರಪ್ಪ ಸರ್ಕಾರ ಇವರನ್ನು ಅಧ್ಯಕ್ಷರಾಗಿಸಿತು.    ಪದ್ಮಶ್ರೀ ಪ್ರಶಸ್ತಿಯ ಸಮ್ಮಾನವೂ ಆಗಿ ಮಂಜಮ್ಮ ಜೋಗತಿ ಕನ್ನಡಿಗರ ಅಚ್ಚುಮೆಚ್ಚಿನ ಪದ್ಮಶ್ರೀ ಮಾತಾ ಮಂಜಮ್ಮ ಜೋಗಿ ಆದರು, ಅವರಂತೆಯೇ ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾದವರಿಗೆ ತಲೆ ಎತ್ತಿ ಜೀವಿಸಲು ಮತ್ತು ಅವರ ಹಕ್ಕುಗಳ ಕೇಳಲು ಇವರು ಪ್ರೇರಕರಾಗಿದ್ದಾರೆ.   ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಸು ಕಾಣುವುದು ಸ್ವಂತದ್ದಾದ ಮನೆ ಮಾಡಿಕೊಳ್ಳಬೇಕೆಂದು ಅದರಂತೆ ಮಂಜಮ್ಮ ಜೋಗತಿ ಅವರ ಕನಸು ನನಸಾಗಿದೆ ಇದೇ ಮುಂದಿನ ತಿಂಗಳು 3 ರಂದು (3 - ಮೇ -

Blog number 842. ಕೇಂದ್ರಿಕೃತ ಪೇಟೆ ಮಾರ್ಕೆಟ್ ವ್ಯವಸ್ಥೆಯಲ್ಲಿ ಕಳೆದು ಹೋದ ಹಳ್ಳಿಯ ದಂಟು ಹರಿವೆ ತಳಿಯ ಬೀಜಗಳು, ಹುಲ್ಲು ತಿಂದಂತ ಬೇಕಾರ್ ರುಚಿಯ ಕೆಮಿಕಲ್ ತುಂಬಿರುವ ಕೊಳಚೆ ನೀರಲ್ಲಿ ಬೆಳೆಸುವ ಹರಿವೆ ಸೊಪ್ಪು ಲೋಕದ ತುಂಬಾ ವ್ಯಾಪಿಸಿದೆ.

#ಇವತ್ತು_ಕೃಷ್ಣಪ್ರಸಾದ್_ಗೋವಿಂದಯ್ಯ_ದಂಟು_ಹರಿವೆ_ಬೀಜ_ಬೇಕೆಂದು_ಪೋಸ್ಟ್_ಮಾಡಿದ್ದರು. #ನನಗೆ_ಈಗಿನ_ತರಕಾರಿ_ಮಾರುಕಟ್ಟೆ_ಹರಿವೆ_ಕಂಡರಾಗುವುದಿಲ್ಲ. #ಹೊನ್ನಾವರ_ಅಂಕೋಲ_ಕುಮಟಾದಲ್ಲಿ_ಬೆಳಿಗ್ಗೆ_ಸೂಯೋ೯ದಯಕ್ಕೆ_ಮೊದಲೇ_ಹಾಲಕ್ಕಿಯವರು_ಮಾರಾಟ_ಮಾಡುವ_ದಂಟು_ಹರಿವೆ. #ನಿತ್ಯ_ಮಲೆನಾಡು_ಗಿಡ್ಡ_ದನದ_ಹಾಲುಕೊಡುವ_ಹುಲಿಮರಡಿ_ಮಂಜುಶೆಟ್ಟರು_ಹರಿವೆ_ಬೆಳೆದು_ಕೊಡುತ್ತಿದ್ದಾರೆ.    ಒಂದು ಕಾಲದಲ್ಲಿ ಅಂದರೆ 1980-90ರ ತನಕ ಈ ದಂಟು ಹರಿವೆ ಹಸಿರು ಕೆಂಪು ಬಣ್ಣದ್ದು ಎಲ್ಲಾ ರೈತರ ಕಬ್ಬಿನ ಗದ್ದೆಯಲ್ಲಿ ಮತ್ತು ಹಳ್ಳಿಯ ಎಲ್ಲರ ಮನೆಯ ಹಿತ್ತಲಲ್ಲಿ ಬೇಸಿಗೆ ತರಕಾರಿ ಆಗಿರುತ್ತಿತ್ತು.   ಇದನ್ನು ಹಣಕ್ಕಾಗಿ ಮಾರಾಟ ಮಾಡುತ್ತಿರಲಿಲ್ಲ ಮಾಡಿದರೂ ಖರೀದಿಸುವವರಿರಲಿಲ್ಲ ಮತ್ತೆ ಇದರ ರುಚಿ ಎಲ್ಲರಿಗೂ ಗೊತ್ತಿರಲಿಲ್ಲ.   ಒಂದಾಳು ಎತ್ತರ ಬೆಳೆಯುತ್ತಿದ್ದ ರಟ್ಟೆ ಗಾತ್ರದ ಒಂದು ದಂಟು ಹರಿವೆ ಗಿಡದಿಂದ ಎರೆಡು ದಿನ ಸಾಂಬಾರ್ ಮಾಡಬಹುದಿತ್ತು, ಬೆಳೆದರೂ ದಂಟಿನ ಒಳಗೆ ಮೃದುವಾಗಿರುತ್ತಿದ್ದ  ದಂಟನ್ನು ಜಗಿದು ಆಸ್ವಾದಿಸುತ್ತಿದ್ದ ಕಾಲ ಈಗ ನೆನಪಾಗಿ ಬಾಯಿಯಲ್ಲಿ ನೀರು ಬರುತ್ತದೆ.  ಬೀಜಕ್ಕಾಗಿ ಕೆಲ ಗಿಡ ಹಾಗೇ ಬಿಡುತ್ತಿದ್ದರು ನಂತರ ಅದರಲ್ಲಿ ಹೂವಾಗಿ ಬೀಜವಾದಾಗ ಒಣಸಿ ತೆಗೆದಿಡುತ್ತಿದ್ದರು.   ದಂಟು ಹರಿವೆ ಮಳೆಗಾಲದಲ್ಲಿ ನೀರು ತುಂಬಿ ಸವಳು ಸವಳು ಆಗುವುದರಿಂದ ಬೇಸಿಗೆಯಲ್ಲಿಯೇ ದಂಟು ಹರಿವೆ ರುಚಿಕರ.   ಈಗೆಲ್ಲ ಕೆಮಿಕಲ್ ಗೊಬ್ಬರದಿಂದ ಕೊಳಚೆ ನೀರ

Blog number 841.ಆನಂದಪುರಂ ಇತಿಹಾಸ ಭಾಗ-74, ಮಂತ್ರಿಗಳಾಗಿದ್ದ ಬದರಿನಾರಾಯಣ ಅಯ್ಯಂಗಾರರ ತಂದೆ ಕೊಡುಗೈ ದಾನಿ ಜಮೀನ್ದಾರರಾದ ರಾಮಕೃಷ್ಣ ಅಯ್ಯಂಗಾರ್ ಅವರ ಪತ್ನಿ ಸ್ಮರಣಾರ್ಥ ಕಟ್ಟಿಸಿದ ಕನಕಮ್ಮಳ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದ ಡಾ. ಸಣ್ಣಪ್ಪರ ಸ್ಮರಣೆ.

#ಆನಂದಪುರಂ_ಇತಿಹಾಸ_ಭಾಗ_74. #ಆನಂದಪುರಂ_ಕನಕಮ್ಮಾಳ್_ಆಸ್ಪತ್ರೆಯ_ಪ್ರಸಿದ್ಧ_ಸರ್ಜನ್_ಆಗಿದ್ದ_ಡಾಕ್ಟರ್_ಸಣ್ಣಪ್ಪನವರು. #ಆನಂದಪುರಂ_ರೋಟರಿ_ಕ್ಲಬ್_ಮೊದಲ_ಅಧ್ಯಕ್ಷರು  #ನಿವೃತ್ತರಾದ_ಮೇಲೆ_ಕರ್ನಾಟಕ_ರಾಜ್ಯ_ಈಡಿಗರ_ಸಂಘದ_ಅಧ್ಯಕ್ಷರಾಗಿದ್ದರು. #ಇವರ_ಪತ್ನಿ_ಶ್ರೀಮತಿನಳಿನಾಕ್ಷಿಸಣ್ಣಪ್ಪ_ಕೂಡ_ರಾಜ್ಯ_ಮಹಿಳಾ_ಈಡಿಗ_ಸಮಾಜದ_ಅಧ್ಯಕ್ಷರಾಗಿದ್ದರು.     ಡಾಕ್ಟರ್ ಸಣ್ಣಪ್ಪ ಚೆನ್ನಗಿರಿ ತಾಲ್ಲೂಕಿನ ನಲ್ಲೂರಿನ ರುದ್ರಪ್ಪರ ಪುತ್ರ, ನಿವೃತ್ತಿ ನಂತರ ಬೆಂಗಳೂರಲ್ಲಿ ನೆಲೆಸಿದರು.     ಇವರು ಆನಂದಪುರಂನ ಕನಕಮ್ಮಳ್ ಆಸ್ಪತ್ರೆಗೆ ವೈದ್ಯರಾಗಿ ಬಂದಾಗ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಮಾಡಬೇಕೆಂಬ ಹುಮ್ಮಸ್ಸು ತುಂಬಿದ ಬಿಸಿ ರಕ್ತದ ಯುವಕರು.   ಆನಂದಪುರಂನ ಕೊಡುಗೈ ದಾನಿ, ಇನಾಂದಾರರೂ ಸುಮಾರು ಎರೆಡು ಸಾವಿರ ಎಕರೆ ಜಮೀನು ಹೊಂದಿದ್ದ ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರರ ಪತ್ನಿ ಶ್ರೀ ಮತಿ ಕನಕಮ್ಮಾಳ್ ಇಹಲೋಕ ತ್ಯಜಿಸಿದಾಗ ಅವರ ಆಭರಣಗಳನ್ನು ಮಾರಾಟ ಮಾಡಿ ಹೊಸನಗರ ತಾಲ್ಲೂಕಿನ ಹುಣಸಳ್ಳಿಯಲ್ಲಿ ಅಡಿಕೆ ತೋಟ, ಜಮೀನು ಖರೀದಿಸುತ್ತಾರೆ.   ಆದರೆ ರಾಮಕೃಷ್ಣ ಆಯ್ಯಂಗಾರರಿಗೆ ತಮ್ಮ ಪತ್ನಿಯ ಹೆಸರು ಅಜರಾಮರ ಆಗಬೇಕು ಎಂಬ ಅದಮ್ಯ ಆಸೆಯಿಂದ ಹುಣಸಳ್ಳಿಯ ತೋಟ, ಜಮೀನು ಮನೆಗಳನ್ನು ಮಾರುತ್ತಾರೆ (ಇದನ್ನು ಖರೀದಿಸಿದವರು ಹೊಸನಗರ ತಾಲ್ಲೂಕಿನ ಮಾಜಿ ತಾಲ್ಲೂಕ್ ಬೋರ್ಡ್ ಅದ್ಯಕ್ಷರಾಗಿದ್ದ ಹುಣಸಳ್ಳಿ ಚಂದ್ರಶೇಖರ ಗೌ