Blog number 844. ಇಂಗ್ಲೀಷ್ ವಿಶ್ವ ದಿನ ಪ್ರತಿ ವರ್ಷ ಏಪ್ರಿಲ್ 23 ರಂದು ಆಚರಿಸುತ್ತಾರೆ ಇದು ಪ್ರಖ್ಯಾತ ಇಂಗ್ಲೀಷ್ ನಾಟಕಕಾರ ಶೇಕ್ಸ್ ಪಿಯರ್ ರ ಹುಟ್ಟಿದ ಮತ್ತು ಕಾಲವಾದ ದಿನ ಮತ್ತು ನನ್ನ ಇಂಗ್ಲೀಷ್ ಮೀಡಿಯಂ ಪ್ರೌಡ ಶಾಲಾ ಅನುಭವ.
#ಮಕ್ಕಳು_ಇಂಗ್ಲೀಷ್_ಕಲಿಯಲಿ_ಎಂಬ_ಪೋಷಕರ_ಆಸೆ.
#ಉತ್ತಮ_ಅಂಕ_ಪಡೆದು_ಶಿವಲಿಂಗಪ್ಪ_ಶಾಲೆಗೆ_ಸೇರುವ_ಅಹ೯ತೆ_ಇದ್ದರೂ_ಅದನ್ನು_ತಪ್ಪಿಸಿದ_ಶಿಕ್ಷಕರು.
#ಅವರ_ಮಗನನ್ನ_ಮಾತ್ರ_ಅಲ್ಲಿಗೆ_ಸೇರಿಸಿದ_ಅವರ_ಮನೋಭಾವ.
#ಹಳ್ಳಿಯಿಂದ_ಬಂದವರನ್ನು_ಗಮಾರರಂತೆ_ಅವಮಾನಿಸುತ್ತಿದ್ದ_ಶಿಕ್ಷಕರು_ಪೇಟೆ_ವಿದ್ಯಾರ್ಥಿಗಳು.
#ಕನ್ನಡ_ಹೋರಾಟಗಾರರ_ಮಕ್ಕಳನ್ನು_ಕಾನ್ವೆಂಟ್_ಸೇರಿಸುವ_ಪರಿ
ಏಳನೆ ತರಗತಿಯಲ್ಲಿ ನಾನು ಅತ್ಯಂತ ಹೆಚ್ಚು ಮಾರ್ಕ್ಸ್ ಪಡೆದಿದ್ದೆ, ಮೆರಿಟ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲೂ ಪಾಸಾಗಿದ್ದೆ ಆಗ ನಮ್ಮ ತಂದೆ ನನ್ನನ್ನು ಸಾಗರದ ಮುನ್ಸಿಪಲ್ ಹೈಸ್ಕೂಲ್ ಗೆ 8ನೇ ತರಗತಿಗೆ ಇಂಗ್ಲೀಷ್ ಮೀಡಿಯಂ ಗೆ ಸೇರಿಸಿದ್ದರು.
ಆಗ ಸಾಗರದಲ್ಲಿ ಎಲ್ಲಾ ಕಾನ್ವೆಂಟ್ ಗಳು ಗಂಡು ಮಕ್ಕಳಿಗೆ 7 ನೇ ತರಗತಿ ತನಕ ಮಾತ್ರ ಇಂಗ್ಲೀಷ್ ಮೀಡಿಯಂ ಕ್ಲಾಸ್ ಮಾಡುತ್ತಿದ್ದರು ನಂತರ 8ನೇ ತರಗತಿಗೆ ಶಿವಲಿಂಗಪ್ಪ ಪ್ರೌಡ ಶಾಲೆಗೆ ಅಥವ ಸರ್ಕಾರದ ಮುನ್ಸಿಪಲ್ ಹೈಸ್ಕೂಲ್ ಗೆ ಸೇರಬೇಕಿತ್ತು.
ಶಿವಲಿಂಗಪ್ಪ ಪ್ರೌಡ ಶಾಲೆಯಲ್ಲಿ ಮೆರಿಟ್ ಇದ್ದವರಿಗೆ ಮಾತ್ರ ಸೀಟು ಸಿಗುತ್ತಿತ್ತು, ನಾನು ಪಡೆದ 7ನೇ ತರಗತಿ ಅಂಕಗಳು ನನಗೆ ಅಲ್ಲಿ ಸೇರಲು ಸುಲಭ ಇತ್ತು.
ನಮ್ಮ ಊರಿನ ಪ್ರೌಡ ಶಾಲೆಯ ಹಿಂದಿ ಪಂಡಿತರು ನಮ್ಮ ತಂದೆಗೆ ನನ್ನನ್ನು ಮುನ್ಸಿಪಲ್ ಹೈಸ್ಕೂಲಿಗೆ ಸೇರಿಸಲು ತಾಕೀತು ಮಾಡಿದ್ದರಿಂದ ಇಲ್ಲಿಗೆ ಸೇರಿಸಿದರು.
ಆದರೆ ಆ ಪಂಡಿತರು ಅವರ ಮಗನನ್ನು ಮಾತ್ರ ಶಿವಲಿಂಗಪ್ಪ ಪ್ರೌಡ ಶಾಲೆಗೆ ಸೇರಿಸಿದ್ದು ತುಂಬಾ ದಿನದ ನಂತರ ಗೊತ್ತಾಯಿತು.
ಸರ್ಕಾರಿ ಶಾಲೆ ಆದ್ದರಿಂದ 8 ನೇ ತರಗತಿಗೆ ನಾಲ್ಕು ಸೆಕ್ಷನ್ ಇತ್ತು ಮತ್ತು ಈ ಶಾಲೆಗೆ ದೊಡ್ಡಿ ಎಂಬ ಅನ್ವರ್ಥವೂ ಇತ್ತು.
25 ಕಿ.ಮಿ.ದೂರದ ಹಳ್ಳಿಯಿಂದ ರೈಲಿನಲ್ಲಿ ಮದ್ಯಾಹ್ನದ ಊಟ ಇಟ್ಟುಕೊಂಡು ಹವಾಯಿ ಚಪ್ಪಲಿ, ಚಡ್ಡಿ ಅಂಗಿಯಲ್ಲಿ ಹೋಗುತ್ತಿದ್ದ ನಾವೆಲ್ಲ ಪೇಟೆಯ ಉದ್ಯೋಗವಂತರ ಪುಂಡು ಮಕ್ಕಳ ಅಪಹಾಸ್ಯಕ್ಕೆ ವಸ್ತು ಆಗಿಬಿಟ್ಟಿದ್ದೆವು.
ಇದೇ ಸಂದರ್ಭದಲ್ಲಿ ಪಾಠ ಮಾಡಲು ಬರುವ (ಇಂಗ್ಲೀಷ್ ಮಾಧ್ಯಮ) ಶಿಕ್ಷಕರು ಈ ಪುಂಡು ಮಕ್ಕಳಿಗೆ ಪ್ರೋತ್ಸಾಹಿಸುವಂತೆ ಬೋರ್ಡ್ ಮೇಲೆ Z ಬರೆದು ಓದಲು ಹೇಳುತ್ತಿದ್ದರು ಕನ್ನಡ ಮಿಡಿಯ೦ ನಿಂದ ಬಂದ ನಮಗೆಲ್ಲ ಸರಿಯಾಗಿ ಪ್ರನೌನ್ಸ್ ಮಾಡಲು ಬರದೆ ಜಡ್ ಅಂದಾಗ ಶಿಕ್ಷಕರು ಪುಂಡರೊಡನೆ ಸೇರಿ ಗೊಳ್ಳಂತ ನಗುತ್ತಿದ್ದರು, ನಮಗೆ ಅಥ೯ವೇ ಆಗದೆ ಪೆಚ್ಚಾಗಿ ಕೀಳರಿಮೆ ಹೆಚ್ಚಾಗುತ್ತಿತ್ತು.
ನಂತರ ನಮಗೆ ನಾವೇ ಸುದಾರಿಸಿಕೊಂಡು SSLC ನಂತರ ಡಿಪ್ಲೋಮಕ್ಕೆ ಸೇರಿದಾಗ ಹೊರ ರಾಜ್ಯದ ಮಕ್ಕಳ ಜೊತೆ ಇಂಗ್ಲೀಷ್ ಒಂದೇ ಸಂಪರ್ಕ ಭಾಷೆ ಆಗಿ ಇಂಗ್ಲೀಷ್ ನಲ್ಲಿ ಸ೦ವಹನ ಮಾಡಲು ಸುಲಭ ಆಯಿತು, ಈಗ ಅನೇಕ ದೇಶದಲ್ಲಿ ಗೆಳೆಯರೊಡನೆ ಮಾತಾಡಲು ಕಷ್ಟ ಇಲ್ಲ.
ಕನ್ನಡ ಬಾಷೆ -ಜಲ- ನೆಲ ಗಳ ಬಗ್ಗೆ ಹೋರಾಟ ಮಾಡುವವರ ಪ್ರಬಾವದಿಂದ ನನ್ನ ಮಕ್ಕಳನ್ನು ನಮ್ಮ ಹಳ್ಳಿಯಲ್ಲೇ ಸರ್ಕಾರಿ ಕನ್ನಡ ಶಾಲೆಯಲ್ಲೇ ಓದಿಸುವ ಶಪಥ ಮಾಡಿದೆ.
ನನ್ನ ಮಕ್ಕಳನ್ನು ಸಕಾ೯ರಿ ಅಂಗನವಾಡಿಯಿಂದ ಪದವಿ ತನಕ ಕನ್ನಡ ಮಾಧ್ಯಮದಲ್ಲಿ ಓದಿಸುತ್ತಾ ಅವರಿಗೆ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, ಇಂಗ್ಲೀಷ್ ಮತ್ತು ಹಿಂದಿ ನ್ಯೂಸ್ ಟೀವಿಯಲ್ಲಿ ನೋಡಲು, ನಿತ್ಯ ಕನ್ನಡ ಪತ್ರಿಕೆ ಜೊತೆ ಇಂಗ್ಲೀಷ್ ಪತ್ರಿಕೆ ಓದಲು ಕಡ್ಡಾಯ ಮಾಡಿದ್ದರಿಂದ ಇವತ್ತು ಅವರೆಲ್ಲ ಹಿಂದಿ ಇಂಗ್ಲೀಷ್ ನಲ್ಲಿ ಸುರಳಿತವಾಗಿ ಮಾತಾಡಿ ವ್ಯವಹರಿಸುಂತಾಯಿತು, ಕನ್ನಡದ ಎಲ್ಲಾ ಸಾಹಿತ್ಯದ ಜೊತೆ ಇಂಗ್ಲೀಷ್ ಸಾಹಿತ್ಯವೂ ಓದುವಂತಾಯಿತು.
ಆದರೆ ಕನ್ನಡದ ಬಗ್ಗೆ ಪುಂಖಾನುಪುಂಕ ಭಾಷಣ ಉಗುಳುತ್ತಿದ್ದ ಓರಾಟಗಾರರು ಇಂತಹ ಪ್ರಯತ್ನ ಮಾಡಲಿಲ್ಲ, ಕೇಳಿದರೆ ಮಕ್ಕಳಿಗೆ ಸರ್ಕಾರಿ ಶಾಲೆ, ಕನ್ನಡ ಶಾಲೆಯಲ್ಲಿ ಪ್ರೊಜೆಕ್ಷನ್ ಸಿಗುವುದಿಲ್ಲ ಅನ್ನುತ್ತಿದ್ದರು ಆದರೆ ನನ್ನ ಅನುಭವ ಇದು ಸುಳ್ಳು.
Comments
Post a Comment