Skip to main content

Blog number 841.ಆನಂದಪುರಂ ಇತಿಹಾಸ ಭಾಗ-74, ಮಂತ್ರಿಗಳಾಗಿದ್ದ ಬದರಿನಾರಾಯಣ ಅಯ್ಯಂಗಾರರ ತಂದೆ ಕೊಡುಗೈ ದಾನಿ ಜಮೀನ್ದಾರರಾದ ರಾಮಕೃಷ್ಣ ಅಯ್ಯಂಗಾರ್ ಅವರ ಪತ್ನಿ ಸ್ಮರಣಾರ್ಥ ಕಟ್ಟಿಸಿದ ಕನಕಮ್ಮಳ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದ ಡಾ. ಸಣ್ಣಪ್ಪರ ಸ್ಮರಣೆ.

#ಆನಂದಪುರಂ_ಇತಿಹಾಸ_ಭಾಗ_74.

#ಆನಂದಪುರಂ_ಕನಕಮ್ಮಾಳ್_ಆಸ್ಪತ್ರೆಯ_ಪ್ರಸಿದ್ಧ_ಸರ್ಜನ್_ಆಗಿದ್ದ_ಡಾಕ್ಟರ್_ಸಣ್ಣಪ್ಪನವರು.

#ಆನಂದಪುರಂ_ರೋಟರಿ_ಕ್ಲಬ್_ಮೊದಲ_ಅಧ್ಯಕ್ಷರು 

#ನಿವೃತ್ತರಾದ_ಮೇಲೆ_ಕರ್ನಾಟಕ_ರಾಜ್ಯ_ಈಡಿಗರ_ಸಂಘದ_ಅಧ್ಯಕ್ಷರಾಗಿದ್ದರು.

#ಇವರ_ಪತ್ನಿ_ಶ್ರೀಮತಿನಳಿನಾಕ್ಷಿಸಣ್ಣಪ್ಪ_ಕೂಡ_ರಾಜ್ಯ_ಮಹಿಳಾ_ಈಡಿಗ_ಸಮಾಜದ_ಅಧ್ಯಕ್ಷರಾಗಿದ್ದರು.

   ಡಾಕ್ಟರ್ ಸಣ್ಣಪ್ಪ ಚೆನ್ನಗಿರಿ ತಾಲ್ಲೂಕಿನ ನಲ್ಲೂರಿನ ರುದ್ರಪ್ಪರ ಪುತ್ರ, ನಿವೃತ್ತಿ ನಂತರ ಬೆಂಗಳೂರಲ್ಲಿ ನೆಲೆಸಿದರು.
    ಇವರು ಆನಂದಪುರಂನ ಕನಕಮ್ಮಳ್ ಆಸ್ಪತ್ರೆಗೆ ವೈದ್ಯರಾಗಿ ಬಂದಾಗ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಮಾಡಬೇಕೆಂಬ ಹುಮ್ಮಸ್ಸು ತುಂಬಿದ ಬಿಸಿ ರಕ್ತದ ಯುವಕರು.
  ಆನಂದಪುರಂನ ಕೊಡುಗೈ ದಾನಿ, ಇನಾಂದಾರರೂ ಸುಮಾರು ಎರೆಡು ಸಾವಿರ ಎಕರೆ ಜಮೀನು ಹೊಂದಿದ್ದ ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರರ ಪತ್ನಿ ಶ್ರೀ ಮತಿ ಕನಕಮ್ಮಾಳ್ ಇಹಲೋಕ ತ್ಯಜಿಸಿದಾಗ ಅವರ ಆಭರಣಗಳನ್ನು ಮಾರಾಟ ಮಾಡಿ ಹೊಸನಗರ ತಾಲ್ಲೂಕಿನ ಹುಣಸಳ್ಳಿಯಲ್ಲಿ ಅಡಿಕೆ ತೋಟ, ಜಮೀನು ಖರೀದಿಸುತ್ತಾರೆ.
  ಆದರೆ ರಾಮಕೃಷ್ಣ ಆಯ್ಯಂಗಾರರಿಗೆ ತಮ್ಮ ಪತ್ನಿಯ ಹೆಸರು ಅಜರಾಮರ ಆಗಬೇಕು ಎಂಬ ಅದಮ್ಯ ಆಸೆಯಿಂದ ಹುಣಸಳ್ಳಿಯ ತೋಟ, ಜಮೀನು ಮನೆಗಳನ್ನು ಮಾರುತ್ತಾರೆ (ಇದನ್ನು ಖರೀದಿಸಿದವರು ಹೊಸನಗರ ತಾಲ್ಲೂಕಿನ ಮಾಜಿ ತಾಲ್ಲೂಕ್ ಬೋರ್ಡ್ ಅದ್ಯಕ್ಷರಾಗಿದ್ದ ಹುಣಸಳ್ಳಿ ಚಂದ್ರಶೇಖರ ಗೌಡರ ತಂದೆ).
  ಆ ಹಣದಲ್ಲಿ ಆನಂದಪುರಂ ಬಸ್ ನಿಲ್ದಾಣದ ಪಕ್ಕದಲ್ಲಿನ ಅವರು ಖರೀದಿಸಿದ ವಿಶಾಲವಾದ ಜಮೀನಿನಲ್ಲಿ ತಮ್ಮ ಪತ್ನಿ ನೆನಪಿಗಾಗಿ  ಶ್ರೀಮತಿ ಕನಕಮ್ಮಾಳ್ ಆಸ್ಪತ್ರೆ ಕಟ್ಟಿ ಸಾರ್ವಜನಿಕರಿಗೆ ವಹಿಸಿಕೊಡುತ್ತಾರೆ.
 ಇದೇ ರೀತಿ ಅಕಾಲ ಮೃತ್ಯು ಹೊಂದಿದ ಮಗ ಜಗನ್ನಾಥ ಅಯ್ಯಂಗಾರ್ ಹೆಸರಲ್ಲಿ ಪಶು ವೈದ್ಯ ಶಾಲೆ, ಪ್ರೌಡ ಶಾಲೆಗಳನ್ನೂ ನಿರ್ಮಿಸುತ್ತಾರೆ.
  ಕೆಳದಿ ಅರಸರಾದ ರಾಜವೆಂಕಟಪ್ಪ ನಾಯಕ ಮತ್ತು ರಾಣಿ ಚಂಪಕಳ ದುರಂತ ಪ್ರೇಮ ಕಥೆ ಇದಕ್ಕಾಗಿ ಚಂಪಕಳ ಸ್ಮಾರಕವಾಗಿ ರಾಜ ಆನಂದಪುರಂನಲ್ಲಿ ಚಂಪಕ ಸರಸ್ಸು ನಿರ್ಮಿಸಿ ಈ ಪ್ರದೇಶಕ್ಕೆ ಆನಂದಪುರಂ ಅಂತ ನಾಮಕರಣ ಮಾಡಿದ 300 ವರ್ಷದ ನಂತರ ಜಮೀನ್ದಾರ್ ರಾಮಕೃಷ್ಣ ಆಯ್ಯಂಗಾರರು ತಮ್ಮ ಪತ್ನಿಯ ಹೆಸರಲ್ಲಿ ಆಸ್ಪತ್ರೆ ನಿಮಿ೯ಸಿರುವುದರಿಂದ ಆನಂದಪುರಂ ಇತಿಹಾಸದಲ್ಲಿ ಈ ಇಬ್ಬರು ಮಹಾನ್ ಸ್ತ್ರೀಯರ ಹೆಸರು ಶಾಶ್ವತವಾಗಿ ಉಳಿದಿದೆ.
  ರಾಮಕೃಷ್ಣ ಅಯ್ಯಂಗಾರರ ಪುತ್ರ ಬದರಿನಾರಾಯಣ ಅಯ್ಯಂಗಾರ್ ಶಾಸಕರು, ಮಂತ್ರಿಗಳು ಮತ್ತು ಸಂಸದರೂ ಆಗಿದ್ದರು.
  ದೇವರಾಜ ಅರಸರು ಮುಖ್ಯಮಂತ್ರಿ ಆದಾಗ ಬದರಿನಾರಾಯಣ ಅಯ್ಯಂಗಾರರರು ಶಿಕ್ಷಣ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಮಂತ್ರಿ ಆಗಿದ್ದರು ಆದ್ದರಿಂದ ಕರ್ನಾಟಕ ಎಂಬ ಹೆಸರು ಘೋಷಣೆಗೆ ಬದರಿನಾರಾಯಣ ಅಯ್ಯಂಗಾರರೂ ದೇವರಾಜ ಅರಸರಷ್ಟೆ ಕಾರಣ ಕತ೯ರು, ಇಬ್ಬರೂ ಜೊತೆಯಾಗಿ ಕರ್ನಾಟಕ ನಾಮಕರಣ ಮಾಡಿದ್ದು ಈಗ ಇತಿಹಾಸ.
  ಬದರಿನಾರಾಯಣ ಅಯ್ಯಂಗಾರರ ಅಣ್ಣ ವೆಂಕಟಾಚಲಯ್ಯ0ಗಾರರು ದೀರ್ಘಕಾಲ ಆನಂದಪುರಂ ವಿಲೇಜ್ ಪಂಚಾಯಿತಿ ಅಧ್ಯಕ್ಷರಾಗಿರುತ್ತಾರೆ.
  ಇಂತಹ ಹಿನ್ನೆಲೆಯ ಆನಂದಪುರಂ ಆಸ್ಪತ್ರೆಯಲ್ಲಿ ವೈದ್ಯರಾಗಿ ಬಂದ ಡಾಕ್ಟರ್ ಸಣ್ಣಪ್ಪನವರು ಈ ಹಿಂದುಳಿದ ಭಾಗದ ಜನರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿದವರು ಆಗ ಆನಂದಪುರಂನಲ್ಲಿ ಶಸ್ತ್ರಚಿಕಿತ್ಸೆ ಕೂಡ ನಡೆಯುತ್ತಿತ್ತು.
  ಡಾ. ಸಣ್ಣಪ್ಪರಂತೆ ಅವರ ಪತ್ನಿ ನಳಿನಾಕ್ಷಿ ಕೂಡ ಸ್ಥಳಿಯ ಮಹಿಳಾ ಸಂಘಗಳಲ್ಲಿ ಜನಪರವಾಗಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪತಿಯಂತೆಯೆ ಪ್ರಸಿದ್ದಿ ಪಡೆದಿದ್ದರು ಅವರು ಸ್ಥಾಪಿಸಿದ ಮಹಿಳಾ ಮಂಡಳಿಗೆ ಈಗ 50ನೇ ವರ್ಷಾಚಾರಣೆ.
  ಈ ಕಾಲದಲ್ಲೇ ಡಾ. ಸಣ್ಣಪ್ಪನವರು ಆನಂದಪುರಂನ ಪ್ರಮುಖರನ್ನು ಸೇರಿಸಿಕೊಂಡು ಆನಂದಪುರಂ ನಲ್ಲಿ ರೋಟರಿ ಕ್ಲಬ್ ಸ್ಥಾಪಿಸುತ್ತಾರೆ, ಆನಂದಪುರಂನ ಉಪನ್ಯಾಸಕರಾಗಿದ್ದ ವೆಂಕಟೇಶ್ ಮೂರ್ತಿ, ಸನಾವುಲ್ಲಾ ಷರೀಪ್, ಸದಾನಂದ ಮೂರ್ತಿ ಮತ್ತು ಪಶುವೈದ್ಯರಾದ ಡಾಕ್ಟರ್ ಜಯರಾಂ ಇವರಿಗೆ ಕೈ ಜೋಡಿಸುತ್ತಾರೆ.
  ರೋಟರಿ ಕ್ಲಬ್ ನ ಸ್ಥಾಪಕ ಅಧ್ಯಕ್ಷರಾಗಿ ಎಲ್ಲರೂ ಡಾ. ಸಣ್ಣಪ್ಪರಿಗೆ ಜವಾಬ್ದಾರಿ ವಹಿಸುತ್ತಾರೆ.
  ಆನಂದಪುರಂ ನ ರೋಟರಿ ಕ್ಷಬ್ ಮೂಲಕ ಅನೇಕ ಕಾಯ೯ಕ್ರಮ ಡಾ. ಸಣ್ಣಪ್ಪ ನಡೆಸುತ್ತಾರೆ, ಸ್ಥಳಿಯ ಇತಿಹಾಸ ಪ್ರಸಿದ್ದ ಕೆಳದಿ ರಾಜ ನಿರ್ಮಿಸಿದ ರಾಣಿ ಚಂಪಕಾ ಸ್ಮಾರಕವಾದ ಚಂಪಕ ಸರಸ್ಸು ಸ್ವಚ್ಚತೆಗಾಗಿ ರೋಟರಿ ಕ್ಲಬ್ ನಿಂದ ಶ್ರಮದಾನ ಕೂಡ ಮಾಡುತ್ತಾರೆ ಆದರೆ ಇವರು ವಗಾ೯ವಣೆ ಆದ ನಂತರ ರೋಟರಿ ಕ್ಲಬ್ ಯಾರು ಮುಂದುವರಿಸುವುದಿಲ್ಲ ಆದ್ದರಿಂದ ಆನಂದಪುರಂನ ರೋಟರಿ ಕ್ಲಬ್ ನ ಮೊದಲ ಮತ್ತು ಕೊನೆಯ ಅಧ್ಯಕ್ಷರು ಡಾ. ಸಣ್ಣಪ್ಪನವರೇ ಆಗಿದ್ದರು.
  ಡಾ. ಸಣ್ಣಪ್ಪನವರು ಬಿದನೂರು ನಗರ ಆಸ್ಪತ್ರೆಯಲ್ಲೂ ಕೆಲ ಕಾಲ ಸೇವೆ ಸಲ್ಲಿಸಿದ್ದರು ನಂತರ ಕಡೂರಿನ ಸರ್ಕಾರಿ ಆಸ್ಪತ್ರೆಯಲ್ಲೂ ಸೇವೆ ಸಲ್ಲಿಸಿದರು ಅವರು ಹೋದಲ್ಲೆಲ್ಲ ಜನಾನುರಾಗಿಗಳಾಗಿ ಜನ ಮೆಚ್ಚುಗೆಯ ವೈದ್ಯರಾಗಿದ್ದರು.
  ನಿವೃತ್ತರಾದ ನಂತರ ರಾಜ್ಯದಲ್ಲಿ ವಿವಿದ ಜಾತಿ ಹೆಸರಲ್ಲಿದ್ದ ಈಡಿಗ ಸಮಾಜವನ್ನು ಈಡಿಗ ಎನ್ನುವ ಜಾತಿ ಸಂಘಟನೆ ಏಕ ನಾಮದಲ್ಲಿ ಇರಬೇಕೆಂದು ಸಂಘಟನೆ ಮೂಲಕ ಹೋರಾಟವೂ ಮಾಡುತ್ತಾರೆ.
  ಕರ್ನಾಟಕ ರಾಜ್ಯ ಈಡಿಗ ಸಮಾಜದ ರಾಜ್ಯ ಅಧ್ಯಕ್ಷರೂ ಆಗಿದ್ದರು.
   ಇವರ ಪತ್ನಿ ಕೂಡ ಕರ್ನಾಟಕ ರಾಜ್ಯ ಮಹಿಳಾ ಈಡಿಗ ಸಮಾಜದ ಅಧ್ಯಕ್ಷೆ ಆಗಿದ್ದರು ಇವರು ಉಡುಪಿ ಸಮೀಪದ ಮಣಿಪುರದವರು, ಇವರ ತಂದೆ ಮದ್ರಾಸ್ ಸರ್ಕಾರದಲ್ಲಿ ರೆವಿನ್ಯೂ ಇನ್ಸಸ್ಪೆಕ್ಟರ್ ಆಗಿದ್ದರು, ಇವರು ಸ್ಥಳಿಯವಾಗಿ ಮಣಿಪುರ ರಂಗಾ ಎಂದೆ ಪ್ರಸಿದ್ಧರು.
  ಡಾಕ್ಟರ್ ಸಣ್ಣಪ್ಪ ದಂಪತಿಗಳಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರರಿದ್ದಾರೆ.
  ಆನಂದಪುರಂ ಇತಿಹಾಸದಲ್ಲಿ ಡಾಕ್ಟರ್ ಸಣ್ಣಪ್ಪ ಮತ್ತು ಅವರ ಪತ್ನಿ ಶ್ರೀಮತಿ ನಳಿನಾಕ್ಷಿ ಸಣ್ಣಪ್ಪರ ಹೆಸರು ಸದಾ ಸ್ಮರಣೆಯಲ್ಲಿದೆ.
 (ಪೋಟೋ ಸಂಗ್ರಹಿಸಿ ನೀಡಿದ ಖ್ಯಾತ ಪತ್ರಕರ್ತರು ನಮ್ಮ ಜಿಲ್ಲೆಯವರೇ ಆದ ಶ್ರೀ ಲಕ್ಷ್ಮಣ ಕೊಡಸೆಯವರಿಗೆ ಕೃತಜ್ಞತೆ ಅರ್ಪಿಸುತ್ತಾ)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...