Blog number 840.ಶೃಂಗೇಷರ ಜನ ಹೋರಾಟ ದಿನಪತ್ರಿಕೆ ಮತ್ತು ಪ್ರಿ೦ಟಿಂಗ್ ಉದ್ಯಮದ ಸ್ವಂತದ್ದಾದ ನೂತನ ಕಟ್ಟಡದ ಕಛೇರಿ ಬೇಟಿ ನಿನ್ನೆ ಪುಟ್ಟಯ್ಯರೊಂದಿಗೆ
#ಹಿರಿಯರಾದ_ಸಮಾಜವಾದಿ_ಪುಟ್ಟಯ್ಯರೊಂದಿಗೆ
#ಲೇ_ಔಟ್_ಮಾಲಿಕರಾದ_ಕಿಣಿರಾಯರು_ಜೊತೆಯಲ್ಲಿ.
ಪ್ರತಿಯೊಬ್ಬ ಉದ್ಯಮಿಯ ಕನಸು ತನ್ನ ಉದ್ಯಮ ಸ್ವಂತ ಕಟ್ಟಡದಲ್ಲಿ ಪ್ರಾರಂಬಿಸುವ ಕನಸು, ಗಟ್ಟಿ ತನ್ನ ಎರೆಡೂ ಕಾಲೂರಿ ಉಸಿರುಗಟ್ಟಿ ಸ್ವಯಂ ಉದ್ಯೋಗ ಮಾಡಿದರೂ ಕನಸು ನನಸಾಗಲು ಕಾಲವೇ ನಿಧ೯ರಿಸುವ ತನಕ ಈಡೇರುವುದಿಲ್ಲ.
ಸುಮಾರು 27 ವರ್ಷದ ಸತತ ಪರಿಶ್ರಮದಿಂದ ಶೃಂಗೇಶ್ ಈಗ ಹೊಸ ಕಟ್ಟಡದಲ್ಲಿ ಅವರ ಪತ್ರಿಕೆ ಮತ್ತು ಪ್ರಿಂಟಿಂಗ್ ಉದ್ಯಮ ಪ್ರಾರಂಬಿಸಿದ್ದಾರೆ, ಸ್ವಂತ ಜಾಗ ಕಟ್ಟಡಗಳು ಈಗ ಬ್ಯಾಂಕ್ ಸಾಲದ ಸಹಾಯದಿಂದ ಸುಲಭವಾದರು ಪ್ರತಿ ತಿಂಗಳು ಸಾಲದ ಮರುಪಾವತಿಯ ಕಂತು ಕಟ್ಟುವುದು ಸುಲಭವಲ್ಲ.
ಉದ್ಘಾಟನ ದಿನ ಹೋಗಲಾಗಲಿಲ್ಲ, ಪುಟ್ಟಯ್ಯನವರೂ ಒಟ್ಟಿಗೆ ಹೋಗೋಣ ಎಂದಿದ್ದರಿಂದ ನಿನ್ನೆ ಇಬ್ಬರೂ ಹೋಗಿದ್ದೆವು, ಹಿರಿಯರಾದ ಪುಟ್ಟಯ್ಯನವರು ಶೃಂಗೇಷರಿಗೆ ಶಾಲು-ಹಾರ - ಪೇಟದೊಂದಿಗೆ ಶುಭ ಹಾರೈಸಿದರು.
ನಾನು ಶಾಲು ಮತ್ತು ರಾಧಕೃಷ್ಣರ ನೆನಪಿನ ಪ್ರತಿಮೆ ನೀಡುವ ಮೂಲಕ ಶುಭ ಹಾರೈಕೆ ಮಾಡಿದೆ.
ಈ ಸಂದರ್ಭದಲ್ಲಿ ಈ ಲೇಔಟ್ ನ ಮಾಲಿಕರಾದ ಕಿಣಿಯವರ ಬೇಟಿ ಮತ್ತು ಪರಿಚಯ ಆಯಿತು, ಅತ್ಯಂತ ಚುರುಕು ಸ್ವಬಾವದ ನೇರ ನಡೆ ನುಡಿಯ ಅವರ ಪರಿಚಯ ಈ ಸಂದರ್ಭದ ವಾತಾವರಣ ಇನ್ನೂ ಸುಂದರಗೊಳಿಸಿತ್ತು.
Comments
Post a Comment