ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ Rowdy list ಪರಿಷ್ಕರಣೆ 1420 ಜನರನ್ನು ಪಟ್ಟಿಯಿಂದ ವಿಮುಕ್ತಿ ಮಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದರ ಅಭಿನಂದನೀಯ ಕಾಯ೯
#ಬಹು_ದಶಕದ_ಬೇಡಿಕೆ #ಜಿಲ್ಲೆಯ_ROWDY_ಲಿಸ್ಟ್_ಪರಿಷ್ಕರಣೆ. #ಅಭಿನಂದನೆಗಳು_ಜಿಲ್ಲಾ_ಕ್ಷಣಾಧಿಕಾರಿಗಳಿಗೆ_ಗೃಹ_ಸಚಿವರಾದ_ಆರಗಜ್ಞಾನೇಂದ್ರರಿಗೆ #ಪರಿಷ್ಕರಣೆಯಲ್ಲಿ_ಪಟ್ಟಿಯಿಂದ_ಒಂದು_ಸಾವಿರದ_ನಾಲ್ಕುನೂರ_ಇಪ್ಪತ್ತು_ಜನ_ಹೊರಗೆ. ROWDY LIST ಅನ್ನೋದು ಸಮಾಜವನ್ನು ಕ್ರಿಮಿನಲ್ ಗಳ ಕಿರುಕುಳದಿಂದ ತಪ್ಪಿಸಲು ಮತ್ತು ಕ್ರಿಮಿನಲ್ ಗಳ ಮೇಲೆ ಕಣ್ಣಿಡಲು ಪೋಲಿಸ್ ಇಲಾಖೆಯ ಕಾನೂನು ಸುವ್ಯವಸ್ಥೆಯ ಆಚರಣೆಯ ಅಂಗವಾಗಿದೆ. ಸಂವಿದಾನದಲ್ಲಿ ನ್ಯಾಯಾಂಗ ವ್ಯವಸ್ಥೆ ಇರುವಾಗ ಕಾರ್ಯಾಂಗದಲ್ಲಿ ಈ ವ್ಯವಸ್ಥೆ ಬೇಕಾ ಅಥವ ಬೇಡವೇ ಅನ್ನುವ ಚರ್ಚೆ ಇದೆ ಆದರೆ ಪೋಲಿಸರಿಗಿಂತ ಇದನ್ನು ದುರ್ಬಳಕೆ ಮಾಡುತ್ತಿರುವುದು ಮಾತ್ರ ಆಡಳಿತರೂಢ ರಾಜಕಾರಣಿಗಳು. ನಿನ್ನೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಯ Rowdy list ಪರಿಷ್ಕರಣೆ ಮಾಡಿ 1420 ಜನರನ್ನು ಈ ಪಟ್ಟಿಯಿಂದ ಹೊರ ಹಾಕಲಾಗಿದೆ ಎಂದಿದ್ದಾರೆ ಬಹುಶಃ ರಾಜ್ಯದ ಪೋಲಿಸ್ ಇಲಾಖೆಯಲ್ಲಿಯೇ ಇಷ್ಟು ಪ್ರಮಾಣದ ಪಟ್ಟಿ ಪರಿಷ್ಕರಣೆ ಇದೆ ಮೊದಲಾಗಿರಬಹುದು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಾದ ಬಿ.ಎಂ.ಲಕ್ಷ್ಮೀ ಪ್ರಸಾದರ ಸರ್ವಿಸ್ ನಲ್ಲಿ ಸರ್ವಕಾಲಿಕ ದಾಖಲೆ ಆಗಿ ಉಳಿಯಲಿದೆ. ಪೋಲಿಸ್ ಇಲಾಖೆಯಲ್ಲಿರುವವರಿಗೆ ಗೊತ್ತೇ ಇದೆ ನಿಜ ಕ್ರಿಮಿನಲ್ ಗಳು ಯಾವಾಗಲೂ ಈ ಪಟ್ಟಿಯಲ್ಲಿರುವುದಿಲ್ಲ ಮತ್ತು ರಾಜಕೀಯ ದ್ವೇಷಕ್ಕಾಗಿ ಸೇರಿಸಿದವರು, ಸಣ್ಣ ಕ್ರೈ...