Skip to main content

Posts

Showing posts with the label This two photos same day of 4 years witnessing obesity reduction of my own experience

Blog number 1559. ನಾಲ್ಕು ವರ್ಷಗಳಲ್ಲಿ ನನ್ನ ದೇಹದ ಸ್ಥೂಲಕಾಯ ಬದಲಾಯಿಸಿ ಕೊಂಡ ಈ ಎರೆಡು ಚಿತ್ರಗಳ ಸಾಕ್ಷಿ ನೋಡಿ.

#ನಾಲ್ಕು_ವರ್ಷದ_ಹಿಂದೆ_ಇದೇ_ದಿನದ_ಚಿತ್ರ. #ನಾಲ್ಕು_ವರ್ಷದ_ನಂತರ_ಇವತ್ತಿನ_ನನ್ನ_ಚಿತ್ರ. #ಮನಸ್ಸು_ಮಾಡಿದರೆ_ಎಲ್ಲದೂ_ಸಾಧ್ಯ_ಅನ್ನುತ್ತಿದೆ.         ನಾಲ್ಕು ವರ್ಷಗಳ ಹಿಂದೆ ಇದೇ ದಿನ ಅಂದರೆ ದಿನಾಂಕ 26-ಮೇ -2019 ರಂದು ಉಡುಪಿಯಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಆಗಿದ್ದ ಮಂಜುನಾಥ ಬಂದಿದ್ದರು ಅವರು ಉಡುಪಿಗೆ ವರ್ಗಾವಣೆ ಮೊದಲು ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಟಿಪ್ ಕಾಪ್ ಎಂಬ ಬಿರುದು ಪಡೆದವರು.   ಮಲ್ಪೆಯ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟು ಅಪಘಾತ ಅದರಲ್ಲಿದ್ದವರೆಲ್ಲ ನಾಪತ್ತೆ ಪ್ರಕರಣದಲ್ಲಿ ಇವರು ತನಿಖಾಧಿಕಾರಿ ಆಗಿದ್ದರು, ನಂತರ ರಾಷ್ಟ್ರಪತಿ ಪ್ರಶಸ್ತಿ ಹಾಗೂ ಪದೋನ್ನತಿ ಪಡೆದಿದ್ದಾರೆ ಅವತ್ತು ಅವರ ಜೊತೆ ಪೋಟೋ ತೆಗೆದು ಬರೆದ ಲೇಖನ ಪೇಸ್ ಬುಕ್ ನೆನಪಿಸಿದೆ ಅವತ್ತಿನ ಲೇಖನದ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ನೋಡಿ https://arunprasadhombuja.blogspot.com/2023/05/blog-number-1558_25.html    ಅವತ್ತು ನನ್ನ ತೂಕ 140 ಕೆ.ಜಿ. ದಾಟಿ ದಾಪುಗಾಲು ಹಾಕುತ್ತಾ ಹೋಗುತ್ತಿತ್ತು, ಹತ್ತು ಹೆಜ್ಜೆ ಹಾಕಲು ಅಸಾಧ್ಯ ಅನ್ನಿಸಿ ಬಿಟ್ಟಿತ್ತು, ಮಲಗಿದ ತಕ್ಷಣ ಘೋರ ಗೊರಕೆಯೊಂದಿಗೆ   ಗಾಡ ನಿದ್ದೆ, ಹೊಟ್ಟೆ ಹೊಕ್ಕುಳಲ್ಲಿ ಹರ್ನಿಯಾ, ಅನಿಯಂತ್ರಿತ ಬಿಪಿ -ಶುಗರ್ ಒಟ್ಟಾರೆ ಜೀವನೋತ್ಸವ ಸತ್ತೇ ಹೋಗಿದ್ದ ನರಕವಾಗಿತ್ತು.    ಈ...