#ನಾಲ್ಕು_ವರ್ಷದ_ಹಿಂದೆ_ಇದೇ_ದಿನದ_ಚಿತ್ರ.
#ನಾಲ್ಕು_ವರ್ಷದ_ನಂತರ_ಇವತ್ತಿನ_ನನ್ನ_ಚಿತ್ರ.
#ಮನಸ್ಸು_ಮಾಡಿದರೆ_ಎಲ್ಲದೂ_ಸಾಧ್ಯ_ಅನ್ನುತ್ತಿದೆ.
ನಾಲ್ಕು ವರ್ಷಗಳ ಹಿಂದೆ ಇದೇ ದಿನ ಅಂದರೆ ದಿನಾಂಕ 26-ಮೇ -2019 ರಂದು ಉಡುಪಿಯಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಆಗಿದ್ದ ಮಂಜುನಾಥ ಬಂದಿದ್ದರು ಅವರು ಉಡುಪಿಗೆ ವರ್ಗಾವಣೆ ಮೊದಲು ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಟಿಪ್ ಕಾಪ್ ಎಂಬ ಬಿರುದು ಪಡೆದವರು.
ಮಲ್ಪೆಯ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟು ಅಪಘಾತ ಅದರಲ್ಲಿದ್ದವರೆಲ್ಲ ನಾಪತ್ತೆ ಪ್ರಕರಣದಲ್ಲಿ ಇವರು ತನಿಖಾಧಿಕಾರಿ ಆಗಿದ್ದರು, ನಂತರ ರಾಷ್ಟ್ರಪತಿ ಪ್ರಶಸ್ತಿ ಹಾಗೂ ಪದೋನ್ನತಿ ಪಡೆದಿದ್ದಾರೆ ಅವತ್ತು ಅವರ ಜೊತೆ ಪೋಟೋ ತೆಗೆದು ಬರೆದ ಲೇಖನ ಪೇಸ್ ಬುಕ್ ನೆನಪಿಸಿದೆ ಅವತ್ತಿನ ಲೇಖನದ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ನೋಡಿ https://arunprasadhombuja.blogspot.com/2023/05/blog-number-1558_25.html
ಅವತ್ತು ನನ್ನ ತೂಕ 140 ಕೆ.ಜಿ. ದಾಟಿ ದಾಪುಗಾಲು ಹಾಕುತ್ತಾ ಹೋಗುತ್ತಿತ್ತು, ಹತ್ತು ಹೆಜ್ಜೆ ಹಾಕಲು ಅಸಾಧ್ಯ ಅನ್ನಿಸಿ ಬಿಟ್ಟಿತ್ತು, ಮಲಗಿದ ತಕ್ಷಣ ಘೋರ ಗೊರಕೆಯೊಂದಿಗೆ ಗಾಡ ನಿದ್ದೆ, ಹೊಟ್ಟೆ ಹೊಕ್ಕುಳಲ್ಲಿ ಹರ್ನಿಯಾ, ಅನಿಯಂತ್ರಿತ ಬಿಪಿ -ಶುಗರ್ ಒಟ್ಟಾರೆ ಜೀವನೋತ್ಸವ ಸತ್ತೇ ಹೋಗಿದ್ದ ನರಕವಾಗಿತ್ತು.
ಈ ನಾಲ್ಕು ವರ್ಷಗಳಲ್ಲಿ ರಾತ್ರಿ ಊಟ ಬಿಟ್ಟೆ, ಬೆಳಿಗ್ಗೆ ಒಂದು ಗಂಟೆ ವಾಕಿಂಗ್ ಗಳಿಂದ ಸುಮಾರು 30 ಕೆ.ಜಿ ತೂಕ ಇಳಿಯಿತು, ಗೊರಕೆ ನಾಪತ್ತೆ ಆಯಿತು, ಹರ್ನಿಯಾ ಇಲ್ಲವಾಯಿತು, ಬಿಪಿ - ಶುಗರ್ ನಾರ್ಮಲ್ ಆಯಿತು ಪುನಃ ಜೀವನೋತ್ಸವ ಪುಟಿದೇಳಿತು.
ಅವತ್ತಿನ ನನ್ನ ಪೋಟೋ ನೋಡಿ ಡೊಳ್ಳು ಹೊಟ್ಟೆ, ತಾಮ್ರದ ತೊಪ್ಪಲೆಯಂತ ಮುಖ ಇವತ್ತಿನ ಪೋಟೋದಲ್ಲಿ ಇಲ್ಲವಾಗಿದೆ.
ಮನಸ್ಸು ಮಾಡಿದರೆ ಸ್ಥೂಲ ಕಾಯ ನಿವಾರಣೆ ಯಾರಿಗೂ ಅಸಾಧ್ಯವಲ್ಲ ಎನ್ನುವುದಕ್ಕೆ ನಾನೇ ಉದಾಹರಣೆ.
Comments
Post a Comment