Skip to main content

Blog number 1507. ಆನಂದಪುರಂ_ ಇತಿಹಾಸ ಭಾಗ 11. ಶಾಂತವೇರಿ ಗೋಪಾಲಗೌಡರ ಸೋಲು, ಬದರಿನಾರಾಯಣ ಅಯ್ಯಂಗಾರರ ಗೆಲುವು.

#ಆನಂದಪುರಂ ಇತಿಹಾಸ ಭಾಗ_11.

#ಎರಡನೆ_ವಿಧಾನಸಭಾ_ಚುನಾವಣೆಯಲ್ಲಿ_ಬದರಿನಾರಾಯಣಅಯ್ಯಂಗಾರ್_ಗೆಲವು

#ಮೊದಲ_ಮಹಾಚುನಾವಣೆಯಲ್ಲಿ_ಗೆದ್ದಿದ್ದ_ಶಾಂತವೇರಿ ಗೋಪಾಲಗೌಡರ_ಸೋಲು

#ಕಾಂಗ್ರೇಸ್_ಸಮಾಜವಾದಿ_ಹೋರಾಟ


   1952 ರ ಮೊದಲ ಮಹಾ ಚುನಾವಣೆಯಲ್ಲಿ ಸಾಗರ - ಹೊಸನಗರ- ತೀಥ೯ಹಳ್ಳಿ ಸೇರಿ ಒಂದು ವಿದಾನ ಸಭಾ ಕ್ಷೇತ್ರವಾಗಿತ್ತು ಈ ಕ್ಷೇತ್ರದಿಂದ ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರರ ಪುತ್ರ ಸ್ವಾತಂತ್ರ್ಯ ಹೋರಾಟಗಾರ, ಶಿವಮೊಗ್ಗ ನ್ಯಾಯಾಲಯದ ಖ್ಯಾತ ವಕೀಲ ಯುವಕ ಬದರಿನಾರಾಯಣ ಅಯ್ಯಂಗಾರ್ ಕಾಂಗ್ರೇಸ್ ನಿಂದ ಸ್ಪರ್ದಿಸಿದಾಗ ಅವರ ವಿರುದ್ದ ಆಗಷ್ಟೇ ಇಡೀ ರಾಷ್ಟ್ರದ ಗಮನ ಸೆಳೆದ "ಉಳುವವನೇ ಹೊಲದೊಡೆಯ " ಎಂಬ ಘೋಷಣೆಯೊಂದಿಗೆ ಕಾಗೋಡು ರೈತ ಹೋರಾಟದ ರೂವಾರಿ ಹೆಚ್.ಗಣಪತಿಯಪ್ಪನವರು ಪ್ರಾರಂಬಿಸಿದ ಕಾಗೋಡು ರೈತ ಹೋರಾಟವನ್ನು ಮುನ್ನಡಿಸಿ ಅದರಲ್ಲಿ ರಾಷ್ಟ್ರೀಯ ನಾಯಕರಾದ ರಾಮ ಮನೋಹರ ಲೋಹಿಯಾ ಭಾಗವಹಿಸುವಂತೆ ಮಾಡಿದ ನಂತರ ಲೋಕಮಾನ್ಯ ಜಯಪ್ರಕಾಶ್ ನಾರಾಯಣರು ಬಂದು ಬೆಂಬಲಿಸುವಂತೆ ರಾಷ್ಟ್ರೀಯ ಸಮಾಜವಾದಿ ಆಯಮ ನೀಡಿದ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಕ್ಷದಿಂದ ಸ್ಪರ್ದಿಸಿ ಬದರಿನಾರಾಯಣರನ್ನು ಸೋಲಿಸಿದ್ದು ಇದರಿಂದ ಅಘಾತಕ್ಕೆ ಒಳಗಾದ ರಾಮಕೃಷ್ಣ ಅಯ್ಯಂಗಾರರು ಹೃದಯಾಘಾತದಿಂದ ಮರಣ ಹೊಂದಿದ್ದು ಅಯ್ಯಂಗಾರರ ಕುಟುಂಬಕ್ಕೆ ಮತ್ತು ಕಾಂಗ್ರೇಸ್ ಪಕ್ಷಕ್ಕೆ ದೊಡ್ಡ ಆಘಾತ ಆಗಿತ್ತು.
   ಮೊದಲ ಚುನಾವಣಾ ಸೋಲು ಮತ್ತು ತಂದೆಯ ಸಾವಿಂದ ಬದರಿನಾರಾಯಣರು ವಿಚಲಿತರಾಗಿದ್ದು ಸಹಜವಾಗಿದ್ದರೂ ಅಯ್ಯಂಗಾರರ ಕುಟುಂಬದ ಯಜಮಾನಿಕೆ ಅನಿವಾರ್ಯವಾಗಿ ಹೊತ್ತುಕೊಂಡ ಅವರ ಸಹೋದರ ವೆಂಕಟಚಲ ಅಯ್ಯಂಗಾರರು ಮಾತ್ರ ಚುನಾವಣಾ ಸೋಲು ಪ್ರತಿಷ್ಟೆ ಆಗಿ ತೆಗೆದುಕೊಂಡರು.
   1957 ರಲ್ಲಿ ಪುನಃ ಎರಡನೇ ವಿಧಾನ ಸಭೆ ಚುನಾವಣೆ ಘೋಷಣೆ ಆಯಿತು, ತಮ್ಮ ಮೊದಲ ಶಾಸನ ಸಭೆಯಲ್ಲಿ ಇಡೀ ರಾಜ್ಯದ ಗಮನ ಸೆಳೆಯುವಂತೆ ತಮ್ಮ ವಾಗ್ಜರಿಯಿಂದ ಚರ್ಚೆ, ಶಾಸನ ರಚನೆಗೆ ಕಾರಣರಾದ ಶಾಂತವೇರಿ ಗೋಪಾಲಗೌಡರು ಅನೇಕೆ ಚಳವಳಿಗಳನ್ನು ನಡೆಸಿ ಪ್ರಖ್ಯಾತರಾಗಿದ್ದರಿಂದ ಎರಡನೇ ಅವಧಿಗೂ ಅವರ ಗೆಲುವು ನಿಶ್ಚಯ ಎಂಬಂತಾಗಿತ್ತು.
   ಆದರೆ ವೆಂಕಟಾಚಲ ಅಯ್ಯಂಗಾರರು ಶಾಂತವೇರಿ ಗೋಪಾಲ ಗೌಡರ ಗೆಲುವಿಗೆ ಕಾರಣ ಆಗಿದ್ದ ದೀವರ ಸಮಾಜದ ಓಟು ಬ್ಯಾಂಕ್ ಒಡೆಯಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದರು, ಇದಕ್ಕಾಗಿ ಈ ಕ್ಷೇತ್ರದ ಜಮೀನ್ದಾರರ ಸಂಘಟನೆ ಕೂಡ ಗುಪ್ತವಾಗಿ ಮಾಡುತ್ತಾರೆ ಈ ಕೆಲಸಕ್ಕೆ ಆ ಕಾಲದ ಚಾಣಕ್ಕರಾದ ಸಾಗರ ಎಡಜಿಗಳೇ ಮನೆ ಸಮೀಪದ ತುಂಬೆ ಸುಬ್ರಾಯ ಹೆಗಡೆಯವರ ಮತ್ತು ತಾಳಗುಪ್ಪದ ಮೂಗಿಮನೆ ಹೆಗ್ಗಡೆಯವರ ಹೆಚ್ಚಿನ ಬೆಂಬಲ ಪಡೆಯುತ್ತಾರೆ.
   ದೀವರ ಸಮಾಜಕ್ಕೆ ಸೇರಿದ್ದ ಹೊಸನಗರ ತೀಥ೯ಹಳ್ಳಿ ಭಾಗದ ಶ್ರೀಮಂತ ರೈತರ ಮತ್ತು ಅಯ್ಯಂಗಾರರ ಕುಟುಂಬದ ಜೊತೆ ಹಿಂದಿನಿಂದ ಹಣದ ವ್ಯವಹಾರ ಇರುತ್ತದೆ ಆಗೆಲ್ಲ ಬ್ಯಾಂಕ್ ಸೊಸೈಟಿಗಳು ಸಾಲ ನೀಡುತ್ತಿರಲಿಲ್ಲ ಆದರೆ ಆಯಾ ಕುಟುಂಬದ ಅಭಿವೃದ್ದಿಗೆ ಬೇಕಾದ ಸಾಲ ನೀಡಿ ಬಡ್ಡಿಯೊಂದಿಗೆ ವಾಪಾಸ್ ಪಡೆಯುವ ಶ್ರೀಮಂತ ಜಮೀನ್ದಾರರೇ ಆಗಿನ ಬ್ಯಾಂಕ್ ಆಗಿದ್ದರು.
   ಅಡಿಕೆ ತೋಟ ಹಾಕಲು, ಬಾವಿ ತೆಗೆಯಲು, ಮನೆ ಕಟ್ಟಲು, ಮದುವೆಗೆ ಹೀಗೆ ಸಾಲ ಪಡೆದು ತೀರಿಸುತ್ತಿದ್ದ ದೀವರ ಸಮಾಜದ ಮುಖಂಡರು ಆನಂದಪುರದ ಜಮೀನ್ದಾರರಾದ ರಾಮಕೃಷ್ಣ ಅಯ್ಯಂಗಾರರು ತಮ್ಮ ಪುತ್ರ ಮೊದಲ ಚುನಾವಣೆಯಲ್ಲಿ ಸೋತಾಗ ಅಘಾತದಿಂದ ಮೃತರಾದ ಅನುಕಂಪವನ್ನು ಮತಗಳಾಗಿ ಪರಿವತಿ೯ಸುವ ಕೆಲಸ ವೆಂಕಟಾಚಲ ಆಯ್ಯಂಗಾರರ ತಂಡ ಯಶಸ್ವಿ ಆಗಿ ನೆರವೇರಿಸಿತು.
   ಖ್ಯಾತ ಸಮಾಜವಾದಿ ಲೇಖಕ ಕೋಣಂದೂರು ವೆಂಕಪ್ಪ ಗೌಡರು ಬರೆದ #ಕಾಗೋಡು_ಹೋರಾಟದ_ರೂವಾರಿ ಎಂಬ ಹೆಚ್.ಗಣಪತಿಯಪ್ಪರ ಆತ್ಮಚರಿತ್ರೆಯಲ್ಲಿ ಒ0ದು ಘಟನೆ  ಉಲ್ಲೇಖಿಸಿದ್ದಾರೆ ಅದರಲ್ಲಿ ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರ ಸಮೀಪದ ಕೊಡಸೆಯಲ್ಲಿ ನಡೆಯುವ ಮದಲೆ ಚೌಡಿ ಹಬ್ಬದಲ್ಲಿ 50- 60 ಕುರಿ ಬಾಡು ಊಟದ ಔತಣದಲ್ಲಿ ಸಾವಿರಾರು ಜನ ದರ್ಮಸ್ಥಳದ ದೇವರ ಮೇಲೆ ಆಣೆ ಮಾಡಿ ಬದರಿನಾರಾಯಣ ಅಯ್ಯಂಗಾರರಿಗೆ ಮತ ನೀಡುವ ಪ್ರಮಾಣ ವಚನ ಪಡೆಯುತ್ತಾರೆ ಇದು ಒಂದು ಸಂಘಟಿತ ಗೇಣಿದಾರ ದೀವರ ಮತಗಳನ್ನು ಒಡೆದು ಸಮಾಜವಾದಿ ಪಾರ್ಟಿಯ ಗೋಪಾಲಗೌಡರ ಸೋಲಿಗೆ ಕಾಂಗ್ರೇಸ್ ಪಕ್ಷದ ಬದರಿನಾರಾಯಣ್ ಅಯ್ಯಂಗಾರರ ಗೆಲುವಿಗೆ ಕಾರಣ ಆಯಿತು.
    ಸ್ವಾತಂತ್ರ್ಯ ಹೋರಾಟದಲ್ಲಿ ಬದರಿನಾರಾಯಣ್ ಅಯ್ಯಂಗಾರ್ ಜೊತೆ ಒಂದಾಗಿದ್ದ ಹೆಚ್. ಗಣಪತಿಯಪ್ಪನವರು ಅನಿವಾಯ೯ವಾಗಿ ತಮ್ಮ ಕಾಗೋಡು ಹೋರಾಟದಲ್ಲಿ ಜೊತೆ ಇದ್ದ ಶಾಂತವೇರಿ ಗೋಪಾಲಗೌಡರ ಪರವಾಗಿ ಈ ಎರೆಡೂ ಚುನಾವಣೆಯಲ್ಲಿ ಬದರಿನಾರಾಯಣ್ ಆಯ್ಯಂಗಾರ್ ವಿರುದ್ದ ಚುನಾವಣೆ ಮಾಡುತ್ತಾರೆ.
  ಈ ಚುನಾವಣೆ ನಂತರ ಬದರಿನಾರಾಯಣ್ ಅಯ್ಯಂಗಾರ್ ರಾಜಕಾರಣದ ಉತ್ತುಂಗಕ್ಕೆ ಏರುತ್ತಾರೆ ಆನಂದಪುರಂ ಎಂದರೆ ರಾಜ್ಯದಲ್ಲಿ ಬದರಿನಾರಾಯಣ್ ಆಯ್ಯಂಗಾರ್ ಎಂದೇ ಪ್ರಖ್ಯಾತಿ ಆಗುತ್ತದೆ.
(ನಾಳೆ ಭಾಗ- 12)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...