ಕೊರಾನಾ ಲಾಕ್ ಡೌನ್ ಡೈರಿ -2020
ಲೆಟರ್ ನಂಬರ್- 40
ದಿನಾ೦ಕ: 24 -ಮೇ -2020
#ಮನೇಯಲ್ಲೇ_ನಮಾಜ್_ಮಾಡಿ_ರಮ್ಜಾನ್_ಆಚರಿಸಿದ_ಮುಸ್ಲಿಂ_ಸಮೂದಾಯ.
ಕೊರಾನಾ ವೈರಸ್ ಮನುಷ್ಯ ಜೀವನದ ಎಲ್ಲಾ ಕೋನಗಳಲ್ಲೂ ತನ್ನ ಅಸ್ತಿತ್ವ ತೋರಿಸಿದೆ ಮತ್ತು ಪರಿವತ೯ನೆ ಜಗದ ನಿಯಮ ಎಂಬ ಶ್ರೀಕೃಷ್ಣ ಪರಮಾತ್ಮನ ಭಗವದ್ಗೀತಾ ಉವಾಚ ಸತ್ಯವಾಗಿದೆ.
ಹಿಂದೂ ದಮಿ೯ಯರ ಹೊಸ ವಷ೯ದಲ್ಲೇ (ಯುಗಾದಿ) ಕೊರಾನಾ ವೈರಸ್ ಒಕ್ಕರಿಸಿದ್ದರಿಂದ ಯುಗಾದಿ ಸಂಭ್ರಮವಾಗಿ ಆಚರಿಸಲಾಗಲಿಲ್ಲ ಹಾಗಾಗಿ ಯುಗಾದಿ ಖರೀದಿಗಳು ನಡೆಯಲಿಲ್ಲ.
ಅಕ್ಷಯ ತದಿಗೆಗೆ ಚಿನ್ನದ ಅಂಗಡಿಗಳು ತೆರೆಯಲೇ ಇಲ್ಲ ಮತ್ತು ವಿವಾಹಗಳಿಗೆ ಅನುಮತಿಯೆ ಇರಲಿಲ್ಲ.
ಮುಸ್ಲಿಂ ಸಮಾಜದ ಒಂದು ತಿಂಗಳ ಕಾಲ ನಡೆಯುವ ರಮ್ಜಾನ್ ಉಪವಾಸದ ತಿಂಗಳು ಇವತ್ತಿಗೆ ಮುಗಿದು ನಾಳೆ ರಮ್ಜಾನ್ ಹಬ್ಬ ಆಚರಿಸುತ್ತಿದ್ದಾರೆ.
ಭಕ್ತಿಯಿ೦ದ ಮಸೀದಿಯಲ್ಲಿ 5 ಬಾರಿ ದೇವರನ್ನ ಪ್ರಾಥಿ೯ಸುವ ನಮಾಜ್ ಮನೇಲೇ ಮಾಡಬೇಕಾದ ಅನಿವಾಯ೯ತೆ ಪ್ರಕಾರ ನಡೆಯಿತು.
ರಮ್ಜಾನ್ ಸಾಮೂಹಿಕ ಪ್ರಾಥ೯ನೆ, ಮೆರವಣಿಗೆಗಳಿಗೆ ಈ ಬಾರಿ ತಿಲಾ೦ಜಲಿ ನೀಡಲಾಗಿದೆ.
ಹೊಸ ಬಟ್ಟೆ, ಅದ್ದೂರಿ ಆಚರಣೆ, ಹಬ್ಬದ ಪ್ರಯುಕ್ತ ರಜಾ ಮಾಡಿ ಸಂಬಂದಿಗಳ ಬೇಟಿ ಮಾಡುವುದು ರದ್ದಾಗಿದೆ.
ಪ್ರಾರ೦ಭದಲ್ಲಿ ಇದನ್ನೆಲ್ಲ ಕಟ್ಟರ್ ದಮ೯ವಾದಿಗಳು ವಿರೋದಿಸಿದ್ದರು ಇದರಿಂದ ವೈರಸ್ ಸಾಮೂಹಿಕವಾಗಿ ಹರಡುವ ಭಯ ಉಂಟಾಗಿತ್ತು.
ನಂತರ ಈ ಸಮಾಜದ ವಿದ್ಯಾವಂತ ಜನತೆ ಸಕಾ೯ರದ ಮನವಿಯ ಉದ್ದೇಶದ ಅಥ೯ ತಮ್ಮ ಸಮಾಜಕ್ಕೆ ಮನನ ಮಾಡಿದ್ದರಿ೦ದ ಅವರಿಗೂ ಕೊರಾನ ವೈರಸ್ ನ ತೀವ್ರತೆ ಅರಿವಾಗಿ ಸಹಕರಿಸಿದರು.
ಹಿಂದೂ ದಮಿ೯ಯರ ಯುಗಾದಿ ಮತ್ತು ಮುಸ್ಲಿಂ ದಮಿ೯ಯರ ರಮ್ಜಾನ್ ಹಬ್ಬ ದೇಶದ ಆಥಿ೯ಕ ವ್ಯವಹಾರದಲ್ಲಿ ದೊಡ್ಡ ವಹೀವಾಟು ಸಾವಿರಾರು ಕೋಟಿಯ ಈ ವಹಿವಾಟು ಈ ವಷ೯ ಇಲ್ಲವಾಗಿದೆ.
ಈ ಮಾರಣಾ೦ತಿಕ ವೈರಸ್ ಅವರವರ ದಮ೯ ಆಚರಿಸಿ ಪರದಮ೯ ಗೌರವಿಸುವ ಉನ್ನತ ಆದಶ೯ ನೆನಪಿಸಿದೆ.
ಭಾರತೀಯರೆಲ್ಲಾ ಒಂದೇ ದೇಶದ ಕಾನೂನು ಎಲ್ಲರೂ ಗೌರವಿಸುವೊಣ ಎಂಬ ಸಂದೇಶ ನೀಡಿದೆ.
ಕೊರಾನ ವೈರಸ್ ಗೆ ಜಾತಿ ದಮ೯ವಿಲ್ಲ, ದೇಶದ ಗಡಿ ಇಲ್ಲ ಎಂಬುದು ಎಲ್ಲರಿಗೂ ಗೊತ್ತು ಮಾಡಿದೆ.
ಎಲ್ಲದರಲ್ಲೂ ಕಿಡಿಗೇಡಿತನ ಮಾಡುವವರಿಗೂ ಈ ಬದಲಾವಣೆ ಸೋಜಿಗ ಉ೦ಟು ಮಾಡಿದೆ.
ದೇವರು ಒಬ್ಬನೆ ನಾಮ ಹಲವು ಎಂಬ ಗಾದೆ ಮಾತು ಎಲ್ಲರಿಗೂ ಅರಿವಾಗಿದ್ದು 2020ರ ಕರೋನಾ ಮಹಿಮೆ ಅಲ್ಲವೇ?
Comments
Post a Comment