ನನಗೆ ಸಕಾ೯ರಿ ವಿದ್ಯಾಥಿ೯ ನಿಲಯ ಅಂದಾಗ ಕಿವಿ ನಿಮಿರುತ್ತದೆ ಕಾರಣ 1978ನೆ ಸಾಲಿನಲ್ಲಿ ಸಾಗರದ ಸೊರಬ ರಸ್ತೆಯ 0BC ವಿದ್ಯಾಥಿ೯ ನಿಲಯದಲ್ಲಿದ್ದೆ, ಕಾಲೇಜು ಹಾಸ್ಟೇಲು ಪಕ್ಕದಲ್ಲೇ ಇತ್ತು, ಮಂತ್ರಿ ಶಾಸಕರಾಗಿದ್ದ ಹರತಾಳು ಹಾಲಪ್ಪ ಅಲ್ಲಿದ್ದರು.
ಹಾಸ್ಟೇಲ್ಗಳ ಮೇಲ್ವಿಚಾರಕರಿಗೆ ಲಾಭ ಇದೆ ಆದರೆ ನಿರಂತರ ಲಾಭಕ್ಕಾಗಿ ಅವರು ಅವರ ಮೇಲಿನವರಿಗೆ ಮಾಮೂಲಿ ಕೊಡಬೇಕು, ಅವರನ್ನ ಬ್ಲಾಕ್ ಮೇಲ್ ಮಾಡುವವರೂ ಇದ್ದಾರೆ ಅವರನ್ನೂ ಸಂಬಾಳಿಸಬೇಕು ಇದು ವ್ಯವಸ್ಥೆ.
ನಾನು ಇದನ್ನೆಲ್ಲ ಸ್ವತಃ ನೋಡಿದ ಅನುಭವಿಸಿದ ವಿಚಾರ ಆದ್ದರಿಂದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಹಾಸ್ಟೆಲ್ ವಿದ್ಯಾಥಿ೯ಗಳ ಪರವಾಗಿಯೇ ಇದ್ದೆ.
ಸಾಗರದ ವಿದ್ಯಾಥಿ೯ ನಿಲಯಗಳ ಅಕ್ರಮ ಬಯಲಿಗೆಳೆಯಲು ಆಗಿನ ಜಿಲ್ಲಾ ಪಂಚಾಯತ್ ನ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿದ್ದ ಜಿ.ಪಂ ಉಪಾಧ್ಯಕ್ಷ ರಾಗಿದ್ದ ತಿಪ್ಪಾ ನಾಯಕ್ರೊಂದಿಗೆ ತಪಾಸಣೆಗೆ ಹೋಗಿದ್ದೆ, ಬಾಳೆಹಣ್ಣು ಮತ್ತು ಮೊಟ್ಟೆ ಖರೀದಿಸಿದ ದಾಖಲೆ ಇತ್ತು ಆದರೆ ವಿದ್ಯಾಥಿ೯ ನಿಲಯದ ವಿದ್ಯಾಥಿ೯ಗಳಿಗೆ ಕೊಡುತ್ತಿರಲಿಲ್ಲ.
ನಾವು ಜೊಗದ ವರೆಗೆ ಹೋಗಿ ವಾಪಾಸು ಬರುವುದರಲ್ಲಿ ನನ್ನ ಮೇಲೆ ವಾಡ್೯ನ್ ಮೇಲೆ ಹಲ್ಲೆ ಮಾಡಿದ FIR ರಿಜಿಸ್ಟರ್ ಆಗಿತ್ತು, ತಾಲ್ಲೂಕ ಪಂಚಾಯತ್ ಕಾಯ೯ ನಿವಾ೯ ಹಕ ಅಧಿಕಾರಿ ಸ್ಥಳ ಪರಿಶೀಲನೆಗೆ ಹೋದಾಗ ಅಲ್ಲಿನ ವಿದ್ಯಾಥಿ೯ಗಳು ಯಾವುದೇ ಗಲಾಟೆ ಆಗಿಲ್ಲ ಅಂದರೂ ದೂರು ದಾಖಲಿಸಿದ್ದರು.
ಆಗಿನ ಶಾಸಕರು ನನ್ನ ವಿರೋಧ ಮಾಡುತ್ತಿದ್ದರು.
ಈಗಿನ ಜಿಲ್ಲಾಧಿಕಾರಿಗಳ ಕ್ರಮ ಸ್ವಾಗತಾಹ೯.
Comments
Post a Comment