ಸ್ವಾತ೦ತ್ರ್ಯ ಪೂರ್ವದಿಂದ ನ್ಯೂಯಾರ್ಕ್ ಕಾಟನ್ ಮಾರ್ಕೆಟ್ ಮು೦ಬೈ ಕಾಟನ್ ಮಾರ್ಕೆಟ್ ಗೆ ವಾರದಲ್ಲಿ 5 ದಿನ ತಲುಪುತ್ತಿದ್ದ ಹತ್ತಿ ಖರೀದಿ ಬೆಲೆಯ ಮೊದಲ ಮತ್ತು ಕೊನೆಯ ಅಂಕಿಯನ್ನು ಈ ಜೂಜಿಗೆ ಬಳಸುತ್ತಿದ್ದರಿಂದ ಓಪನ್ ಕ್ಲೋಸ್ ನಂಬರ್ ನಿಂದ ಓಸಿ ಎಂಬ ಹೆಸರಾಯಿತು.
ನಂತರ ನ್ಯೂಯಾರ್ಕ್ ಕಾಟನ್ ಮಾರ್ಕೆಟ್ ರದ್ದುಗೊಳಿಸಿದ್ದರಿಂದ ರತನ್ ಲಾಲ್ ಖತ್ರಿ ಮಡಕೆಯಲ್ಲಿ 0 ದಿಂದ 9 ರವರೆಗಿನ ನಂಬರ್ ಚೀಟಿ ಹಾಕಿ ಅದನ್ನು ಎತ್ತಿ ಡ್ರಾ ಮಾಡಲು ಪ್ರಾರಂಬಿಸಿದ ನಂತರ ಮಟ್ಕಾ ಎಂಬ ಹೆಸರು ಜನಪ್ರಿಯವಾಯಿತು.
ಹಳ್ಳಿ ಹಳ್ಳಿಗಳಲ್ಲೂ ಜನ ಒಸಿ ಮಟ್ಕಾ ಆಡುತ್ತಾರೆ, ಮೊದಲಿಗೆ ಒಪನ್ ನಂತರ ಕ್ಲೋಸ್ ಅಂಕೆ ಮುಂಬೈನಿ೦ದ ರತನ್ ಲಾಲ್ ಖತ್ರಿ ಪ್ರತಿದಿನ ನಿದಿ೯ಷ್ಟ ಸಮಯದಲ್ಲಿ ಡ್ರಾ ಮಾಡುತ್ತಿದ್ದ.
ಆ ನಂಬರ್ ಗೆ ಹಣ ಕಟ್ಟಿದವರಿಗೆ ಬಿಡ್ಡರ್ ಎಂಬ ಬುಕ್ಕಿಗಳು ಒಪನ್ ಅಥವ ಕ್ಲೋಸಿಗೆ ಏಕ ಅಂಕಿಗೆ 1 ರೂಪಾಯಿ ಕಟ್ಟಿದರೆ 7 ಅಥವ 8 ರೂಪಾಯಿ, ಎರಡು ಅ೦ಕೆ ಸೇರಿಸಿ ಆ ನಂಬರ್ ಗೆ 1 ರೂಪಾಯಿ ಕಟ್ಟಿದರೆ 80 ರೂಪಾಯಿ ತಪ್ಪದೆ ಪಾವತಿ ಮಾಡುತ್ತಾನೆ.
ಒಸಿ ಬರೆಯುವವರನ್ನ ಬರೆಸುವವರನ್ನ ಬಿಡ್ಡರ್ ಗಳನ್ನ ಫೋಲಿಸರು ಸದಾ ಬೇಟಿ ಆಡುತ್ತಿರುತ್ತಾರೆ ಇದು ನಮ್ಮ ಕಾನೂನಿಗೆ ವಿರುದ್ದವಾದ ಜೂಜು ಅಂತ ಆದರೆ ಇದು ಈ ವರೆಗೂ ಸಂಪೂಣ೯ ರದ್ದು ಮಾಡಲು ಸಾಧ್ಯವಾಗೇ ಇಲ್ಲ..
ಪ್ರತಿ ದಿನ ನಂಬರ್ ಡ್ರಾ ಮಾಡುವುದು ಮಾತ್ರ ರತನ್ ಲಾಲ್ ಖತ್ರಿ ಅನ್ನುವುದು ಸತ್ಯ ಇದರಿಂದ ಖತ್ರಿಗೇನು ಲಾಭ? ಅದು ಗೊತ್ತಿಲ್ಲ, ಖತ್ರಿಗೆ ಬೇಟಿ ಆದವರಿಲ್ಲ, ಇಡೀ ದೇಶದಾದ್ಯಂತ ಈ ವ್ಯವಹಾರ ಮಾತ್ರ ಖತ್ರಿ ಮೂಗಿನ ನೇರಕ್ಕೆ ನಡೆಯುವುದು ಮಾತ್ರ ವಿಸ್ಮಯ.
ಮಾಸಿಕ ಮುಂಬೈ ನಗರದಲ್ಲಿ 500 ಕೋಟಿಯ ವ್ಯವಹಾರ ಎನ್ನುವ ಓಸಿ/ಮಟ್ಕಾಕಿಂಗ್ ರತನ್ ಲಾಲ್ ಖತ್ರಿ ತುರ್ತು ಪರಿಸ್ಥಿತಿಯಲ್ಲಿ 19 ತಿಂಗಳು ಜೈಲು ವಾಸಿಗಳಾಗಿದ್ದರು.
ಇಂತಹ ನಿಗೂಡ ವ್ಯಕ್ತಿ, ಜನಪ್ರಿಯ ಓಸಿ ಕಿಂಗ್ ರತನ್ ಲಾಲ್ ಖತ್ರಿ 80ನೇ ವಯಸ್ಸಲ್ಲಿ ಮುಂಬೈನಲ್ಲಿ ಇಹಲೋಕ ತ್ಯಜಿಸಿದ್ದಾರೆ. (9 ಮೇ 2020).
ಇವರ ಜೀವನದ ಮೇಲೆ ಬಾಲಿವುಡ್ ನಲ್ಲಿ ಪ್ರೇಮನಾಥ್ ನಟಿಸಿದ ಹಿಂದಿ ಚಲನ ಚಿತ್ರ ದಮಾ೯ತ್ಮ ಪಿರೋಜ್ ಖಾನ್ ನಿರ್ಮಿಸಿದ್ದರು.
ಕೊಟ್ಯಾ೦ತರ ಜನ ಆಟಗಾರರು ಶ್ರದ್ದಾ೦ಜಲಿ ಸಲ್ಲಿಸುತ್ತಾರೆ ಜೊತೆಗೆ ಓಸಿ ಕಿಂಗ್ ಸತ್ತರೆ ಇಂತಹ ನಂಬರ್ ಗೆ ಲಕ್ ಅಂತ ಹೆಚ್ಚು ಹಣ ಪಣಕ್ಕೆ ಇಡುತ್ತಾರೆ.
Comments
Post a Comment