#ನಾನು_ಬರೆದ_ಕಾದಂಬರಿ_ಇಂಗ್ಲೀಷ್_ಭಾಷೆಯಲ್ಲಿ_ಬರಲಿದೆ.
#ಕವರ್_ಮುಖಪುಟ_ಹೀಗಿದೆ.
ಕೆಳದಿ ಅರಸರಲ್ಲೇ ಅತ್ಯಂತ ದೀರ್ಘ ಕಾಲ ಆಡಳಿತ ಮಾಡಿದ ರಾಜ ವೆಂಕಟಪ್ಪ ನಾಯಕ ಅವರ ಸಾದನೆ ಇತಿಹಾಸದ ಪುಟಗಳಲ್ಲಿ ಅಳಿಸಲಾಗಿದೆ ಯಾಕೆ? ಈ ಬಗ್ಗೆ ಮುಂದಿನ ದಿನಗಳಲ್ಲಿ ಇತಿಹಾಸ ಆಸಕ್ತರು ಸಂಶೋದನೆ ಮಾಡಬಹುದು.
ರಾಜ ವೆಂಕಟಪ್ಪ ನಾಯಕರ ಕೋಟೆ ಊರು ಆನಂದಪುರಂ ಅನೇಕ ಇತಿಹಾಸದ ಹೆಜ್ಜೆ ಗುರುತುಗಳ ಊರು ಇಲ್ಲಿಯೇ ಅವರು ನಿರ್ಮಿಸಿದ ಚಂಪಕ ಸರಸ್ಸು 400 ವರ್ಷಗಳಿಂದ ಇಲ್ಲಿದೆ, ಇದೇ ಊರು ಆನಂದಪುರಂ ನನ್ನ ಹುಟ್ಟೂರು.
ರಾಜ ವೆಂಕಟಪ್ಪ ನಾಯಕರು ರಂಗೋಲಿ ಚಿತ್ರಗಳಿಂದ ಸುಂದರಿ ಚಂಪಕಾಳ ಪ್ರೇಮಾಂಕುರ ಆಗುವುದು ನಂತರ ಚಂಪಕಾಳನ್ನು ವಿವಾಹವಾಗಿ ಆನಂದಪುರಂ ಕೋಟೆ ಒಳಗಿನ ಅರಮನೆಯಲ್ಲಿ ಹೆಚ್ಚು ಸಮಯ ರಾಜ ಕಾಲ ಕಳೆಯುತ್ತಿರುತ್ತಾರೆ.
ಕೆಳಜಾತಿ ಕಾರಣದಿಂದ ರಾಣಿ ಭದ್ರಮ್ಮಾಜಿ ಇದನ್ನು ವಿರೋದಿಸುವುದು ನಂತರ ಅನ್ನಾಹಾರ ತ್ಯಜಿಸಿ ರಾಣಿ ಭದ್ರಮ್ಮಾಜಿ ಜೀವ ತ್ಯಾಗ ಮಾಡುವುದು ಆ ಸಂದರ್ಭದಲ್ಲಿ ರಾಣಿ ಚಂಪಕಾಳ ಬಗ್ಗೆ ಸುಳ್ಳು ಸುದ್ದಿಗಳು ಪ್ರಜೆಗಳಲ್ಲಿ ಹರಡಿರುತ್ತದೆ.
ಈ ಸಂದರ್ಭದಲ್ಲಿ ಇಟಲಿಯ ಪ್ರವಾಸಿ ಡೆಲ್ಲೋ ವಲ್ಲೆ ರಾಜ ವೆಂಕಟಪ್ಪ ನಾಯಕರ ಬೇಟೆಗಾಗಿ ಇಕ್ಕೇರಿಗೆ ಬಂದಿರುತ್ತಾರೆ ಅವರ ಪತ್ರಗಳಲ್ಲಿ ಈ ಘಟನೆ ನಮುದಾಗಿರುವುದು ಒ0ದು ಐತಿಹಾಸಿಕ ದಾಖಲೆ.
ಈಗಲೂ ಚಂಪಕಾಳ ವಂಶಸ್ಥರು ಆನಂದಪುರಂ ನಲ್ಲಿ ಇದ್ದಾರೆ, ಚಂಪಕಾಳ ಮನೆಯ ಜಾಗ ಬ್ರಿಟಿಷರ ಆಡಳಿತದಲ್ಲಿ ಶಾಲೆ ನಿಮಿ೯ಸಲು ನೀಡಿದ್ದಾರೆ, ದುರಂತ ಪ್ರೇಮ ಸ್ಮಾರಕ ಚಂಪಕ ಸರಸ್ಸು ಇಲ್ಲಿದೆ.
ಇದು ವಿಶ್ವ ಪ್ರಸಿದ್ಧ ಪ್ರೇಮ ಸ್ಮಾರಕ ತಾಜ್ ಮಹಲ್ ಗಿಂತ 36 ವರ್ಷ ಮೊದಲೇ ನಿರ್ಮಾಣವಾದ ಪ್ರೇಮ ಸ್ಮಾರಕ, ರಾಜ ವೆಂಕಟಪ್ಪ ನಾಯಕ ಮತ್ತು ರಂಗೋಲಿ ಕಲಾ ಪ್ರವೀಣೆ ಚಂಪಕಾರ ದುರಂತ ಪ್ರೇಮ ಕಥೆ ಜನಪದದಲ್ಲಿ ಲಾವಣಿಗಳಲ್ಲಿ ಇದ್ದ ಒಂದು ಕಥಾ ಹಂದರವನ್ನು ನಾನು ಕಾಲ್ಪನಿಕ ಕಾದಂಬರಿ ಆಗಿ ಬರೆದಿದ್ದೆ ಅದು ಈಗ ಇಂಗ್ಲೀಷ್ ಗೆ ಭಾಷಾಂತರವಾಗಿ ಮುದ್ರಣವಾಗುತ್ತಿದೆ.
ಅದರ ಮುಖ ಪುಟ ನಿಮಗಾಗಿ.
Comments
Post a Comment