# ಒರಿಸಾ ಬೀಕರ ಚಂಡಮಾರುತದ ವಿವರ ನೀಡಿದ ಭಾನು ಪ್ರತಾಪ್ ರಾಯ್ ಚೌದುರಿ.
ಇವತ್ತು ನಮ್ಮಲ್ಲಿ ತ0ಗಿದ್ದ ಇವರು ಈ ಬಾರಿಯ ಚಂಡಮಾರುತದ ಬಗ್ಗೆ ತಾವು ತೆಗೆದ ಫೋಟೋ ವಿಡಿಯೋ ತೋರಿಸಿದರು.
ಇವರು ಒರಿಸಾದ ಕಟಕ್ ಪಕ್ಕದ ಜಗದ್ ಸಿಂಗ್ ಪುರ ಜಿಲ್ಲೆಯ ಬಿರಿಡಿ ತಾಲ್ಲೂಕಿನ ಕೋಸಲ್ ಗ್ರಾಮದವರು, ಇವರ ಗ್ರಾಮದಲ್ಲಿ ಯಾವುದೇ ಸಾವು ನೋವು ಆಗಲಿಲ್ಲ ಕಾರಣ ಸಕಾ೯ರ ಎಲ್ಲರನ್ನ ಸ್ಥಳಾಂತರಿಸಿತು ಮತ್ತು ಹಿಂದೆ ನಡೆದ ಚಂಡಮಾರುತದ ಪರಿಣಾಮ ಶೇಕಡಾ 90% ಮನೆಗಳು ಈಗ ಮಜಬೂತವಾಗಿ ನಿಮಿ೯ಸಿಕೊಂಡಿದ್ದಾರೆ ಎಂದರು.
ರೈತರು ಈಗ ಹೆಸರುಕಾಳು ಬೆಳೆದಿದ್ದರು ಕಟಾವು ಕಾಲದಲ್ಲಿ ಈ ಚಂಡಮಾರುತದಿಂದ ಎಲ್ಲಾ ಕಳೆದು ಕೊಂಡರಂತೆ.
ಈ ಸಾರಿಯ ಚಂಡಮಾರುತಕ್ಕೆ ಜನ ಕೂಡ ಸೂಕ್ತ ತಯಾರಿ ಮಾಡಿಕೊಂಡರು ತಿಂಗಳಿಗೆ ಆಗುವಷ್ಟು ಆಹಾರ, ಎಲ್.ಪಿ.ಜಿ ಸಂಗ್ರಹಿಸಿದರoತೆ.
ಸದ್ಯ ರಸ್ತೆಗಳಲ್ಲಿ ಬಸ್ ಸಂಚಾರ ಪ್ರಾರಂಭ ಆಗಿದೆ, ರೈಲು ಸಂಚಾರ ಪ್ರಾರಂಭ ಆಗಿದೆ ಮತ್ತು ವಿಮಾನ ಹಾರಾಟ ಪ್ರಾರ೦ಭ ಆಗಿದೆ ಆದರೆ ವಿದ್ಯುತ್ ಬರಲು ಇನ್ನು 15 ದಿನ ಬೇಕೆ ಬೇಕ೦ತೆ.
ಇವರ ಮನೆಯಲ್ಲಿ ಸೋಲಾರ್ ಅಳವಡಿಸಿದ್ದರಿಂದ ಪ್ರತಿ ನಿತ್ಯ 50 ರಿಂದ 60 ಜನ ಮೊಬೈಲ್ ಚಾಜ್೯ಗೆ ಬತಾ೯ರೆ ಅಂದರು.
ಸಕಾ೯ರ ಸಾವಿರಾರು ಕೋಟಿ ಪರಿಹಾರ ನೀಡುವುದಾಗಿ ಪತ್ರಿಕೆ ಟೀವಿಯಲ್ಲಿ ನೋಡುತ್ತೇವೆ ಆದರೆ ಎಕರೆಗೆ 2000 ಮಾತ್ರ ಸಹಾಯ ಲಭ್ಯವಂತೆ, ಮನೆ ಆಸ್ತಿ ನಷ್ಟಕ್ಕೆ ಯಾವುದೇ ಪರಿಹಾರ ಇಲ್ಲ ಅಂದರು.
ಏನೇ ಆಗಲಿ ಕಳೆದ ಸಾರಿಯಂತೆ ಸಾವು ನೋವು ಆಗಲಿಲ್ಲವಲ್ಲ ! ಇಲ್ಲಿರುವ ನಮಗೆ ಹೆದರಿಕೆ ಆಗುತ್ತಿತ್ತು ಅಂದೆ.
ಅದಕ್ಕೆ ಅವರು ಹೇಳಿದ್ದು ಈ ಬಾರಿ ಚಂಡಮಾರುತದ ವೇಗ ಕಳೆದ ಬಾರಿಗಿಂತ ಕಡಿಮೆ, ಅವಾಗ ಸಮುದ್ರದ ನೀರು 30km ಒಳಗಿನವರೆಗೆ 10 ಅಡಿ ಎತ್ತರದಲ್ಲಿ ಬಂದಿತ್ತು ಅಂತ ಅವತ್ತಿನ ಬೀಕರತೆ ನೆನಪಿಸಿಕೊಂಡರು ಆಗ ಇವರ ಊರಲ್ಲಿ ಸಾವಿರಾರು ಜನ ಮೃತರಾಗಿದ್ದರಂತೆ.
Comments
Post a Comment