#
#ಎಣ್ಣೆಕೊಪ್ಪದ_ಮಲ್ಲಿಕಾರ್ಜುನ_ಗೌಡರು_ಬದರಿನಾರಾಯಣ್_ಅಯ್ಯಂಗಾರರಿಂದ
#ನಡೆದಾಡುವ_ಸಂತ_ವಿನೋಬಬಾವೆ_ಆನಂದಪುರಂಗೆ_ನಡೆದು_ಬರುತ್ತಾರೆ
#ಭೂದಾನ_ಮಾಡುವ_ಅಯ್ಯಂಗಾರ್_ಕುಟುಂಬದ_ಜೊತೆ_ಕೈಜೋಡಿಸಿದ_ಸ್ಥಳಿಯ_ಮಹನೀಯರು.
#ಹೊಸಕೊಪ್ಪದ_ಕೌತಿನಾಗಪ್ಪ_ಮತ್ತವರ_ತಂದೆಯ_ಶ್ರಮ.
#ಇರುವಕ್ಕಿ_ಕುಂಬಾರ_ಚೌಡಶೆಟ್ಟರಿಂದ_5_ಎಕರೆ_ನೀರಾವರಿ_ಜಮೀನು_ದಾನ.
ನಡೆದಾಡುವ ಸಂತರೆಂದೆ ಕರೆಯುವ ಆಚಾಯ೯ ವಿನೋಬಾ ಭಾವೆ ಆನಂದಪುರಂಗೆ ಬಂದಿದ್ದರು, ಭೂದಾನ ಚಳವಳಿಯಲ್ಲಿ ಆನಂದಪುರಂ ನ ಭೂ ಮಾಲಿಕರು ಭಾಗಿಯಾಗಿದ್ದರು ಅಂದರೆ ನಂಬಲಾಗದ ಸಂಗತಿ ಆದರೆ ಭೂದಾನ ಚಳವಳಿಯಲ್ಲಿ ಬದರಿನಾರಾಯಣ ಅಯ್ಯಂಗಾರ್ ಕುಟುಂಬ ಭಾಗಿ ಆಗುತ್ತದೆ.
ಇದಕ್ಕೆ ಮುಖ್ಯಕಾರಣ ಶಿವಮೊಗ್ಗ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಸೊರಬ ತಾಲ್ಲೂಕಿನ ಎಣ್ಣೆ ಕೊಪ್ಪದ ಮಲ್ಲಿಕಾರ್ಜುನ ಗೌಡರು, ಅವರಿಗೂ ಸ್ವಾತಂತ್ರ್ಯ ಹೋರಾಟಗಾರ ಕಾಂಗ್ರೇಸ್ ಮುಖಂಡ ಬದರಿನಾರಾಯಣ ಅಯ್ಯಂಗಾರರಿಗೂ ಇದ್ದ ಗಳಸ್ಯ ಕಂಠಸ್ಯ ಗೆಳೆತನ, ದೇಶಪ್ರೇಮ ಮತ್ತು ಮಹಾತ್ಮಾ ಗಾಂಧಿಯವರ ಪ್ರೇರಣೆ.
ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರ ಆ ಕಾಲದ ಓಡಾಟದ ವಾಹನ ಒಂಟೆತ್ತಿನ ಗಾಡಿ ಆಗಿತ್ತು.
ಗಾಂಧೀಜಿ ಜೊತೆ ಸಬರಮತಿ ಆಶ್ರಮವಾಸಿ ಆಗಿದ್ದ ಬಾವೆ ಅವರು ಗಾಂದೀಜಿ ಅವರ ಸವೋ೯ದಯ ಮತ್ತು ಗ್ರಾಮ ಸ್ವರಾಜ್ಯದಿಂದ ಪ್ರೇರೇಪಿತರಾಗಿ ಸ್ವಯಂ ಭೂ ಸುದಾರಣ ಚಳವಳಿ ಆದ ಶ್ರೀಮಂತ ಭೂಮಾಲಿಕರು ಅವರ ಕೆಲ ಭಾಗ ಭೂರಹಿತರಿಗೆ ದಾನ ನೀಡುವ ಭೂದಾನ ಚಳವಳಿಯನ್ನು 18 ಏಪ್ರಿಲ್ 1951ರಂದು ಆಗಿನ ಕಮ್ಯುನಿಸ್ಟ್ ಕೇಂದ್ರ ಆಗಿದ್ದ ಈಗಿನ ತೆಲಂಗಾಣ ರಾಜ್ಯದ ಪೊಚಂಪಲ್ಲಿಯಿಂದ ಪ್ರಾರಂಬಿಸುತ್ತಾರೆ.
ಸತತ 14 ವರ್ಷದಲ್ಲಿ ಈ ಸದುದ್ದೇಶ ಜಾರಿಗಾಗಿ ಸುಮಾರು 70 ಸಾವಿರ ಕಿ.ಮಿ. ಪಾದಯಾತ್ರೆ ಮಾಡಿದ್ದು ಒಂದು ಸರ್ವಕಾಲಿಕ ದಾಖಲೆ.
ಈ ಚಳವಳಿ ಲೋಕಮಾನ್ಯ ಜಯಪ್ರಕಾಶ್ ನಾರಾಯಣರಿಗೂ ಪ್ರಭಾವ ಬೀರುತ್ತದೆ ಅವರೂ ಕೂಡ ಸಕ್ರಿಯ ರಾಜಕಾರಣ ತೊರೆದು 1953 ರಲ್ಲಿ ಭೂದಾನ ಚಳವಳಿಯಲ್ಲಿ ಕೈ ಜೋಡಿಸುತ್ತಾರೆ.
ರಕ್ತರಹಿತ ಚಳವಳಿಯ ನೇತಾರ, ನಡೆದಾಡುವ ಸಂತರಾದ ವಿನೋಭಾ ಭಾವೆಯವರು ತಮ್ಮ ಶಿವಮೊಗ್ಗ ಜಿಲ್ಲೆಯಲ್ಲಿನ ಈ ಚಳವಳಿಯನ್ನು ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರ ನೇತೃತ್ವದಲ್ಲಿ ಕಾಂಗ್ರೇಸ್ ಮುಖಂಡರಾಗಿದ್ದ ಬದರಿನಾರಾಯಣ ಆಯ್ಯಂಗಾರ್ ಮತ್ತವರ ಸಂಗಾತಿಗಳ ಜೊತೆ ನಡೆಸುತ್ತಾರೆ.
ಎಣ್ಣೆಕೊಪ್ಪದ ಮಲ್ಲಿಕಾಜು೯ನ ಗೌಡರು ಮತ್ತು ಬದರಿನಾರಾಯಣ್ ಆಯ್ಯಂಗಾರ್ ಮತ್ತು ಅನೇಕ ಜಿಲ್ಲೆಯ ಸ್ವಾತಂತ್ರ ಹೋರಾಟಗಾರ ಗಾಂದೀ ಅನುಯಾಯಿಗಳು ಜಿಲ್ಲೆಯ ಭೂಮಾಲಿಕರ ಮನ ಒಲಿಸಿ ನೂರಾರು ಎಕರೆ ಭೂದಾನ ಮಾಡಿಸಲು ಕಾರಣರಾಗುತ್ತಾರೆ.
ಆನಂದಪುರದ ಮೆಸ್ಕಾಂ ಪಕ್ಕದ ಸುಳುಗೋಡು ರಸ್ತೆಯ ಸರ್ವೆ ನಂಬರ್ 118 ರಲ್ಲಿ ಸುಮಾರು 14 ಎಕರೆ ಜಮೀನು ಅಯ್ಯಂಗಾರರ ಕುಟುಂಬ ಮತ್ತು ಸುಳುಗೋಡಿನ ಮುತ್ರಿ ಗೌಡರ ಕುಟುಂಬ ವಿನೋಬ ಬಾವೆ ಅವರ ಭೂದಾನ ಚಳವಳಿಗೆ ದಾನವಾಗಿ ನೀಡುತ್ತಾರೆ, ಈಗ ಸದರಿ ಜಮೀನು ರಾಜ ಪ್ರಮುಖರ ಖಾತೆ ಹೆಸರಲ್ಲಿ ಆನಂದಪುರಂ ನ ಸರ್ಕಾರಿ ಪ್ರೌಡ ಶಾಲೆಯ ಸುಪರ್ದಿಯಲ್ಲಿದೆ, ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಸದರಿ ಜಮೀನು ಸವೆ೯ ಮಾಡಿಸಿ ತಂತಿ ಬೇಲಿ ನಿರ್ಮಿಸಿ ಗಿಡ ನೆಡಿಸಿ ಮಧ್ಯದಲ್ಲಿ ಕ್ರಿಕೆಟ್ ಆಟದ ಮೈದಾನ ಮಾಡಿದ್ದು ಈಗ ಅದು ಉಳಿದಿಲ್ಲ.
ಭೂದಾನ ಪಡೆದು ಜಮೀನು ಮಾರುವಂತಿಲ್ಲ, ಕೃಷಿ ಹೊರತು ಪಡಿಸಿ ಬೇರೆ ಉದ್ದೇಶಕ್ಕೆ ಬಳಸಿದರೆ ಸರ್ಕಾರ ತನ್ನ ವಶಕ್ಕೆ ಪಡೆಯಬಹುದೆಂಬ ಕಾಯ್ದೆ ಇದೆ.
ಅಯ್ಯಂಗಾರರ ಕುಟುಂಬದೊಡನೆ ಆ ಕಾಲದಲ್ಲಿ ವ್ಯವಹಾರ ಸಂಬಂದ ಇಟ್ಟುಕೊಂಡಿದ್ದ ಇರುವಕ್ಕಿಯ ಕುಂಬಾರ್ ಬಸಪ್ಪರ ತಂದೆ ಚೌಡ ಶೆಟ್ಟರು ಇರುವಕ್ಕಿಯ ಸುಮಾರು 5 ಎಕರೆ ನೀರಾವರಿ ಜಮೀನು ಭೂದಾನ ಮಾಡುತ್ತಾರೆ. ಇದು ಆನಂದಪುರಂ ನ ಸರ್ಕಾರಿ ಮಾದರಿ ಮಾಧ್ಯಮಿಕ ಶಾಲೆಗೆ ನೀಡಲಾಗಿತ್ತು, ಪ್ರತಿವರ್ಷ ಭತ್ತದ ಸುಗ್ಗಿಯಲ್ಲಿ ಕೆಲ ಚೀಲ ಭತ್ತ ತೆಗೆದು ಇಟ್ಟು ಮಾರಾಟ ಮಾಡಿ ಹಣವನ್ನು ಶಾಲಾ ಖಾತೆಗೆ ಸದರಿ ಕುಟುಂಬ 2000 ಇಸವಿ ತನಕ ಪಾವತಿ ಮಾಡುತ್ತಿತ್ತು.
ಹೊಸಕೊಪ್ಪದ ಕೌತಿ ನಾಗಪ್ಪರ ತಂದೆ ಅಯ್ಯಂಗಾರ್ ಕುಟುಂಬದ ಜೊತೆ ಭೂದಾನ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ನಂತರ ಕೌತಿ ನಾಗಪ್ಪನವರು ಭೂದಾನ ಚಳವಳಿಯ ಕಛೇರಿ ಎಂಬ ನಾಮಫಲಕ ತಮ್ಮ ಮನೆಯಲ್ಲಿ ಹಾಕಿ ಕೊಂಡು ಮುಂದುವರಿಸಿದ್ದರು.
ಆನಂದಪುರಂ ಭಾಗದಲ್ಲಿ ಭೂದಾನ ಚಳವಳಿ ಯಶಸ್ವಿ ಆಗಲು ಬದರಿನಾರಾಯಣ್ ಅಯ್ಯಂಗಾರರ ಸಹೋದರರಾದ ವೆಂಕಟಾಚಲ ಅಯ್ಯಂಗಾರರ ಪ್ರಯತ್ನ ಮತ್ತು ಶ್ರಮ ಸ್ಮರಣೀಯ.
ಆನಂದಪುರಂ ಭಾಗದಲ್ಲಿ ಎಷ್ಟು ಎಕರೆ ಭೂದಾನ ಚಳವಳಿಯಲ್ಲಿ ನೀಡಲಾಯಿತು, ಎಲ್ಲೆಲ್ಲಿ ಇದೆ, ಒತ್ತುವರಿ ಆಗಿದಿಯಾ? ಎಂಬ ಮಾಹಿತಿ ಆಸಕ್ತರು ಆನಂದಪುರಂ ನಾಡ ಕಛೇರಿಯಲ್ಲಿ ಪಡೆಯಬಹುದಾಗಿದೆ.
(ನಾಳೆ ಭಾಗ-14)
Comments
Post a Comment