#ನನ್ನ_ಅನುಭವದ_ಅತೀಂದ್ರಿಯ_ಶಕ್ತಿ_ಭಾಗ_2.
#ಬಸ್ಸಿನಲ್ಲಿ_ಗಾಜಿನ_ವಿಂಡ್_ಶೀಲ್ಡ್_ದಿಟ್ಟಿಸುತ್ತಾ_ಮೈ_ಮರೆತಿದ್ದೆ,
#ಗೆಳೆಯರು_ಎಚ್ಚರಿಸಿ_ಏನು_ಯೋಚಿಸುತ್ತಿದ್ದಿಯಾ_ಅಂತ_ಕೇಳಿದರು_ಹೇಳಿದೆ....
#ಆ_ಕ್ಷಣದಲ್ಲಿ_ಬಸ್ಸಿನ_ಗಾಜು_ಪುಡಿಪುಡಿ !!
#ಅತೀಂದ್ರೀಯ_ಶಕ್ತಿ_ಇದಿಯಾ_ನನ್ನ_ಜೀವನದ_ಹಲವು_ಘಟನೆಗಳು_ನನಗೆ_ಅತೀಂದ್ರಿಯ_ಶಕ್ತಿ_ನಂಬುವಂತೆ_ಮಾಡಿದೆ
#ಅಂತದರಲ್ಲಿ_ಈ_ಘಟನೆಯೂ_ಕೂಡ_ಒಂದು.
#ಅತೀಂದ್ರಿಯ_ಶಕ್ತಿ_ಇದೀಯಾ?
#ಇಲ್ಲದಿದ್ದರೆ_ಈರೀತಿ_ಘಟನೆಗೆ_ಕಾರಣ ?
#ಇಂತಹ_ಅನೇಕ_ಘಟನೆ_ನನ್ನ_ಜೀವನದಲ್ಲಿ_ಅನುಭವ_ಆಗಿದೆ.
#ಹಾಗಂತ_ಆ_ವಿಸ್ಮಯ_ಶಕ್ತಿ_ನನ್ನ_ನಿಯಂತ್ರಣದಲ್ಲಿಲ್ಲ.
ಮನುಷ್ಯನ ಮನಸ್ಸಿಗೆ ದೃಷ್ಟಿಗೆ ಎದುರಿನ ವಸ್ತು ಪುಡಿ ಮಾಡುವ ಶಕ್ತಿ ಇದಿಯಾ?...ಕೆಲವರಿಗೆ ನಿಸರ್ಗದಲ್ಲಿ ಹಿಂದಿನ ಜನ್ಮದ ಕೆಲ ಸನ್ನಿವೇಶಗಳು ಪುನಃ ಕಾಣುವಂತದ್ದು ಇರುತ್ತದೆ ಅನ್ನುತ್ತಾರೆ...ಇದೆಲ್ಲ ಸತ್ಯವಾ? ಕಾಕತಾಳಿಯನಾ?...
ನನ್ನ ಅನೇಕ ಅನುಭವದಲ್ಲಿ ಇದೂ ಒಂದು ಘಟನೆ ಕೇಳಿ...
1989 ರಲ್ಲಿ ಗಜಾನನ ಎಂಬ ನಮ್ಮ ಜಿಲ್ಲೆಯ ಪ್ರತಿಷ್ಠಿತ ಖಾಸಾಗಿ ಬಸ್ಸಿನಲ್ಲಿ ನಮ್ಮ ಊರು ಆನಂದಪುರಂನಿಂದ ಶಿವಮೊಗ್ಗಕ್ಕೆ ನಾನು ಮತ್ತು ಆಗಿನ ಸಾಗರದ ಪತ್ರಕರ್ತ ತೀ.ನಾ. ಶ್ರೀನಿವಾಸ್ (ನಂತರ ಸಾಗರ ಪುರ ಸಭಾ ಅಧ್ಯಕ್ಷರಾಗಿದ್ದರು ಮತ್ತು ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು) ಡ್ರೈವರ್ ಹಿಂದಿನ ಸೀಟಿನಲ್ಲಿ ಕುಳಿತಿದ್ದೆವು.
ಶಿವಮೊಗ್ಗ 30 km ಹಿಂದೆ ಇರುವಾಗ ನಾನು ಬಸ್ಸಿನ ಎಡ ಭಾಗದ ಗ್ಲಾಸ್ ದಿಟ್ಟಿಸುತ್ತಿದ್ದೆ....ಮನಸ್ಸಿನಲ್ಲಿ ಏನೋ ಒಂದು ರೀತಿ ಅನಿಸುತ್ತಿತ್ತು.
ಆಗ ಗೆಳೆಯರು "ಏನು ಮೌನವಾಗಿ ಆಕಡೆ ನೋಡುತ್ತಿದ್ದಿಯಾ?" ಅಂದಾಗ ನಾನು ಒಂದು ರೀತಿ ಎಚ್ಚೆತ್ತುಕೊಂಡು ನನಗೆ ಅನಿಸಿದ್ದು ಅವರು ಒತ್ತಾಯಿಸಿ ಕೇಳಿದಾಗ ಹೇಳಿದೆ, ಆದೇನೆಂದರೆ "ಈ ಬಸ್ಸಿನ ಡೈವರ್ರ ಎಡ ಬಾಗದ ಗ್ಲಾಸ್ (ವಿಂಡ್ ಶೀಲ್ಡ್) ಒಡೆದು ಪುಡಿ ಪುಡಿ ಆದರೆ ಅಂತ ಅನ್ನಿಸುತ್ತಿತ್ತು" ಅಂದೆ.
ತಕ್ಷಣ ಬಸ್ಸಿನ ಡ್ರೈವರ್ ತಿರುಗಿ ನನ್ನ ದುರುಗುಟ್ಟಿ ನೋಡಿದರು,ಅವರಿಗೆ ಅದು ಕೋಪ ತರಿಸಿರಬೇಕು ಹಾಗೆ ಹೇಳಿದ ಕ್ಷಣ ಮಾತ್ರದಲ್ಲಿ ಬಸ್ಸಿನ ಎಡ ಭಾಗದ ವಿಂಡ್ ಶೀಲ್ಡ್ ಪುಡಿ ಪುಡಿಯಾಗಿ ಬಿದ್ದು ಹೋಯಿತು... ಬಸ್ಸಿನ ತುಂಬಾ ಗಾಜಿನ ಪುಡಿಗಳು!!.
ಬಸ್ ಬದಿಗೆ ನಿಲ್ಲಿಸಿ ಡ್ರೈವರ್ ಮತ್ತು ನನ್ನ ಮಾತು ಕೇಳಿಸಿಕೊಂಡ ಸಹ ಪ್ರಯಾಣಿಕರು, ಜೊತೆಗಾರರು ಎಲ್ಲರೂ ನನ್ನನ್ನು ಭಯ ಬೀತರಾಗಿ ನೋಡಲು ಪ್ರಾರಂಬಿಸಿದರು.
ಇಡೀ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆಲ್ಲ ಡ್ರೈವರಿಂದ ಈ ವಿಚಾರ ಎಲ್ಲರಿಗೂ ಗೊತ್ತಾಗಿ ಅವರೆಲ್ಲ ನನ್ನನ್ನು ಬೂತ ಎ೦ದು ಬಾವಿಸಿ ಭಯದಿಂದ ನೋಡುತ್ತಿದ್ದರು.
ಈ ಘಟನೆಯ ಪ್ರತ್ಯಕ್ಷದರ್ಶಿ ಮಾಜಿ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ತೀನಾ ಶ್ರೀನಿವಾಸ್ 2023ರ ವಿದಾನ ಸಭಾ ಚುನಾವಣೆಯಲ್ಲಿ ಸಾಗರ - ಹೊಸನಗರ ಕ್ಷೇತ್ರದಿಂದ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ದಿಸಿದ್ದಾರೆ.
ಇಂತಹ ಅನೇಕ ಘಟನೆಗಳು ಜೀವನದಲ್ಲಿ ಆಗಿದೆ ಇದು ಅತೀಂದ್ರಿಯ ಶಕ್ತಿಯ? ಕಾಕತಾಳಿಯವಾ? ಗೊತ್ತಿಲ್ಲ ಇಂತಹ ಘಟನೆಗಳನ್ನು ನೆನಪಾದಾಗೆಲ್ಲ ಬರೆಯಬೇಕು ಅನ್ನಿಸಿದೆ.
Comments
Post a Comment