#ಆನಂದಪುರಂ_ಇತಿಹಾಸ_ಭಾಗ_100.
https://youtu.be/-vztlvQjXJU
#ನಮ್ಮ_ಊರಿನಲ್ಲಿ_ಬೃಹತ್_ಶಿಲಾಮಯ_ಸೆಂಗೋಲ್_ಇದೆ.
#ಕೆಳದಿ_ಅರಸರು_ಉಂಬಳೆ_ನೀಡಿದ_ಹಳ್ಳಿಯಲ್ಲಿದೆ.
#ಇದನ್ನು_ನಿರ್ಮಿಸಿದವರು_ಕೆಳದಿ_ಅರಸರಾ ?
#ನಂದಿದ್ವಜ_ದರ್ಮದಂಡ_ಸೆಂಗೋಲ್_ಹೆಚ್ಚು_ಚರ್ಚೆಯ_ಕಾಲದಲ್ಲಿ.
ಹೊಸ ಪಾರ್ಲಿಮೆಂಟ್ ನಲ್ಲಿ ಸ್ಪೀಕರ್ ಬಲ ಬಾಗದಲ್ಲಿ ಪ್ರದಾನಿ ಮೋದಿಯವರು ಪ್ರತಿಷ್ಟಾಪಿಸಿದ ರಾಜ ಧಂಡ/ ಧರ್ಮ ಧಂಡ/ ನಂದಿಧ್ವಜ / ಸೆಂಗೋಲ್ ಬಗ್ಗೆ ಹೆಚ್ಚಿನ ಚಚೆ೯ ಆಗುವಾಗಲೇ ನನಗೆ ನೆನಪಾಗಿದ್ದು ನಮ್ಮ ಗ್ರಾಮ ಪಂಚಾಯಿತಿ ಯಡೇಹಳ್ಳಿಯ ಘಂಟಿನಕೊಪ್ಪದ ಸಮೀಪದ ಕೆರೆಕೊಪ್ಪದ ಖಾತೆ ಕಾನೂನಿನಲ್ಲಿ ಶಿಲಾಮಯ ನಂದಿ ಧ್ವಜ ಒಂದನ್ನು 1995 - 2000 ಇಸವಿಯಲ್ಲಿ ನೋಡಿದ ನೆನಪಾಯಿತು.
ಈ ಗ್ರಾಮ ಪಂಚಾಯಿತಿ ಸದಸ್ಯ - ಉಪಾಧ್ಯಕ್ಷ - ಈ ಭಾಗದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆಯಾ ಗ್ರಾಮದಲ್ಲಿ ವರ್ಷಕ್ಕೊಮ್ಮೆ ಪಾದಯಾತ್ರೆ ನಡೆಸುತ್ತಿದ್ದೆ ಅದರಿಂದ ಅನೇಕ ಹೊಸ ವಿಚಾರ ತಿಳಿಯಲು, ಸ್ಥಳಿಯರ ಸಮಸ್ಯೆ - ಬೇಡಿಕೆಗಳ ಪಟ್ಟಿ ಮಾಡಲು ಮತ್ತು ಸ್ಥಳಿಯರ ಜೊತೆ ಬೆರೆಯಲು ಸಹಕಾರಿ ಆಗುತ್ತಿತ್ತು.
ಆಗ ಊರಿನ ಪ್ರಮುಖರ ಜೊತೆ ಆ ಕಾಡಿನಲ್ಲಿ 10 ಅಡಿ ಎತ್ತರದ ಬೃಹತ್ ಶಿಲಾಮಯ ನಂದಿ ಧ್ವಜ ನೋಡಿದ್ದೆ , ಇದಕ್ಕೆ ವರ್ಷಕ್ಕೊಮ್ಮೆ ಗ್ರಾಮಸ್ಥರು ಪೂಜೆ ಮಾಡುತ್ತಾರೆ, ಇಪ್ಪತ್ತು ವರ್ಷಗಳ ಹಿಂದೆ ದಟ್ಟ ಅರಣ್ಯದ ಮಧ್ಯೆ ಸೂರ್ಯನ ಕಿರಣಗಳು ತಾಗದಂತ ಪ್ರದೇಶವಾಗಿತ್ತು ಈ ಸ್ಥಳ.
ಈ ಗ್ರಾಮಗಳು ಕೆಳದಿ ಅರಸರ ಕಾಲದಲ್ಲಿ ಉಂಬಳಿ ನೀಡಿದ ಗ್ರಾಮಗಳ ಪಟ್ಟಿಯಲ್ಲಿರುವುದರಿಂದ ಬಹುಶಃ 400 ವರ್ಷಗಳ ಹಿಂದಿನ ಕೆಳದಿ ಅರಸರಿಂದ ಸ್ಥಾಪಿಸಲ್ಪಟ್ಟಿರ ಬಹುದು ಅಥವ ಈ ಭಾಗದಲ್ಲಿ ಕ್ರಿ.ಶ.1000 ಇಸವಿಯ ಶಿಲಾ ಶಾಸನಗಳು ದೊರೆತಿರುವುದರಿಂದ ಒಂದು ಸಾವಿರ ವರ್ಷಗಳ ಹಿಂದಿನದ್ದೂ ಇರಬಹುದು ಸಂಶೋದನೆ ಮಾಡಿದರೆ ಗೊತ್ತಾಗಬಹುದು.
ಈ ಕಾಡಿನ ಅಂಚಿನಲ್ಲೇ ವಾಸ ಇರುವ, ಕೃಷಿ ಮತ್ತು ಟ್ರಾಕ್ಟರ್ ಹೊಂದಿರುವ ಪ್ರಜ್ಞಾವಂತ - ತಿಳುವಳಿಕೆಯ ಕಿರಿಯ ಗೆಳೆಯ ಗಜೇಂದ್ರರಿಗೆ ಈ ಶಿಲಾಮಯ ನಂದಿ ಧ್ವಜದ ವಿಡಿಯೋ ಪೋಟೋ ಕಳಿಸಲು ವಿನಂತಿಸಿದ ಕ್ಷಣ ಹೊತ್ತಿನಲ್ಲೇ ಘಂಟಿನಕೊಪ್ಪದ ಗಜೇಂದ್ರ ವಿಡಿಯೋ ಪೋಟೊ ವಾಟ್ಸಪ್ ಮಾಡಿದ್ದು ಇಲ್ಲಿದೆ.
ಈ ಸ್ಥಳ ನೋಡುವ ಆಸಕ್ತರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂಗೆ ಬಂದು ಇಲ್ಲಿಂದ ಯಡೇಹಳ್ಳಿ ಗ್ರಾಮ ಪಂಚಾಯತ್ ನ ಘಂಟಿನ ಕೊಪ್ಪದ (ಕೆಳಗಿನ ಘಂಟಿನ ಕೊಪ್ಪ) ಕೆರೆಕೊಪ್ಪ ಶಾಲೆ ಹತ್ತಿರದ ಖಾತೆ ಕಾನಿನಲ್ಲಿ ನೋಡ ಬಹುದು ಹೆಚ್ಚಿನ ಮಾಹಿತಿಗಾಗಿ ಸ್ಥಳಿಯ ಉತ್ಸಾಹಿ ಯುವಕ ಗಜೇಂದ್ರ ಅವರ ಸೆಲ್ ಫೋನ್ ನಂಬರ್ 990-118-5916ಗೆ ಸಂಪರ್ಕಿಸ ಬಹುದು.
ತಮಿಳುನಾಡಿನಲ್ಲಿ ಸೆಂಗೋಲ್ ಎಂಬ ಈ ನಂದಿ ಪ್ರತಿಷ್ಟಾಪಿತ ರಾಜ ದಂಡ ರಾಜರ ಅಧಿಕಾರ ಹಸ್ತಾಂತರದಲ್ಲಿ ಬಳಕೆ ಮಾಡುತ್ತಿದ್ದರಿಂದ ಸಿ.ರಾಜಗೋಪಾಲಾಚಾರಿ ಅವರ ಶಿಪಾರಸ್ಸಿನಂತೆ ತಮಿಳುನಾಡಿನಲ್ಲಿ 1947 ರಲ್ಲಿ ತಿರುವ ಮಾತುರೈ ಅಡೀನಮ್ ಅವರಿಂದ ತಯಾರಿಸಿ ವೈಸ್ ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ರಿಂದ ಪ್ರಧಾನ ಮಂತ್ರಿ ನೆಹರೂರವರಿಗೆ ಸ್ವರ್ಣ ಸೆಂಗೋಲ್ ಹಸ್ತಾಂತರ ಮಾಡುವ ಮೂಲಕ ಬ್ರಿಟಿಷರಿಂದ ಭಾರತೀಯರಿಗೆ ಸ್ವಾತಂತ್ರ್ಯ ದ ಅಧಿಕಾರ ವರ್ಗಾಯಿಸಲಾಯಿತು ನಂತರ ಪ್ರದಾನ ಮಂತ್ರಿ ನೆಹರೂರವರು ಅಲಹಾಬಾದಿನ (ಈಗ ಪ್ರಯಾಗ ರಾಜ್) ವಸ್ತು ಸಂಗ್ರಹಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇರಿಸುತ್ತಾರೆ.
ಇದನ್ನು ಅಲ್ಲಿಂದ ತರಿಸಿ ಹೊಸ ಸಂಸತ್ ಭವನದ ಸ್ಪೀಕರ್ ಆಸನದ ಬಲಭಾಗದಲ್ಲಿ ಪ್ರದಾನಿ ಮೋದಿ ಪ್ರತಿಷ್ಟಾಪಿಸಿದ ನಂತರ ಈ ಸೆಂಗೋಲ್ ಬಗ್ಗೆ ಪರ -ವಿರೋದ ಪ್ರಾರಂಭವಾಗಿ ಸೆಂಗೋಲ್ ಎಂದರೆ ಏನು? ಎಂಬ ಬಗ್ಗೆ ಸಾರ್ವಜನಿಕರ ಕುತೂಹಲಕ್ಕೆ ಕಾರಣ ಆಗಿದೆ.
ನಮ್ಮ ರಾಜ್ಯದ ಪಟ್ಟದಕಲ್ಲಿನ ವೀರೂಪಾಕ್ಷ ದೇವಾಲಯದ ದಕ್ಷಿಣ ಗೋಡೆಯಲ್ಲಿನ ಶಿಲಾ ವಿಗ್ರಹದಲ್ಲಿ ಈ ಸೆಂಗೋಲ್ ಅಥವ ರಾಜದಂಡವಾದ ನಂದಿ ಧ್ವಜ ನೋಡಬಹುದು.
ದಕ್ಷಿಣ ಭಾರತದ ರಾಜ ವಂಶಸ್ಥರಾದ ಚೋಳರು ಭಾದಾಮಿಯ ಚಾಲುಕ್ಯರು ಇದನ್ನು ಶಕ್ತಿಯ ಸಂಕೇತವಾಗಿ ಬಳಸುತ್ತಿದ್ದರಿಂದ ಕೆಳದಿ ಅರಸರಿಗೂ ಈ ಪದ್ಧತಿ ಮುಂದುವರಿದಿರಬಹುದು.
Comments
Post a Comment