https://youtu.be/xz0Rix0baiM
#ನನ್ನ_ಕೈ_ತೋಟದ_ಹೊಸ_ಗೆಳೆಯ
#ಮಾರ್ಚ್_24ಕ್ಕೆ_ಮೊದಲ_ಪರಿಚಯ
#ಮುಂಗಾರಿನ_ನಿರೀಕ್ಷೆಯಲ್ಲಿ_ಮುಂದಿನ_ಪ್ರಯಾಣ
#ಶ೦ಭೂರಾಮನಿಗೂ_ಗೆಳೆಯ.
ನಾನು ಮತ್ತು ನನ್ನ ರಾಟ್ ವೀಲರ್ ಶಂಭೂರಾಮನ ನಿತ್ಯ ವಾಕಿಂಗ್ ಟ್ರ್ಯಾಕ್ ಮನೆ ಹಿಂಬಾಗ ಮತ್ತು ನಮ್ಮ ಹೊಂಬುಜ ಗಾರ್ಡನೀಯ ಲಾಡ್ಜ್ ಪಾರ್ಶ್ವದ ಮದ್ಯದ ಓಣಿ ಅಲ್ಲಿಗೆ ಸಾವ೯ಜನಿಕರ ಪ್ರವೇಶ ಇರದಂತೆ ಗೇಟುಗಳನ್ನು ಅಳವಡಿಸಿ ಸಣ್ಣ ಗಾರ್ಡನ್ ಮಾಡಿದ್ದೇನೆ.
ನಿತ್ಯ ಬೆಳಿಗ್ಗೆ 4 ರಿಂದ 5 ಬಕೇಟ್ ನೀರುಣಿಸಿ ಒಂದು ಗಂಟೆ ನಮ್ಮದೇ ಪ್ರಪಂಚದಲ್ಲಿ ವಾಕಿಂಗ್ ಮಾಡುವಾಗ ಮಾರ್ಚ್ 24 ಕ್ಕೆ ಒ0ದು ಪಾಟ್ ನಲ್ಲಿ ಹೊಸ ಗೆಳೆಯ ಸಿಕ್ಕಿದ್ದ ಅವನಿಗಾಗಿ ಹೆಚ್ಚುವರಿ ನೀರು ತುಂಬಿಸಿ ಪೋಟೋ ತೆಗೆಯುವಾಗ ಶಂಭೂರಾಮನ ಶಿಕಾರಿ ಮನಸ್ಸು ಜಾಗೃತಿ ಆಗಿತ್ತು ಆದರೆ ಅವನ ಸುದ್ದಿಗೆ ಹೋಗದಂತೆ ತಾಕೀತು ಮಾಡಿದ್ದರಿಂದ ಶಂಭೂರಾಮ ಅವನನ್ನು ಗೆಳೆಯ ಎಂದೇ ಬಾವಿಸಿದ್ದಾನೆ.
ಮಳೆ ಬಂದಾಗ ಗೆಳೆಯ ಹೋಗಬಹುದೆಂದು ಬಾವಿಸಿದ್ದೆ ಅದೇ ರೀತಿ ಮುಂಗಾರು ಪೂರ್ವದ ಮೂರು ಮಳೆ ಆದರೂ ಗೆಳೆಯ ನಮ್ಮ ಅತಿಥ್ಯ ಮುಂದುವರಿಸಿದ್ದಾನೆ ಬಹುಶಃ ಅವನು ಮುಂಗಾರು ಮಳೆಗಾಗಿ ಕಾಯುತ್ತಿರ ಬೇಕು, ನಿತ್ಯ ಬೇರೆ ಬೇರೆ ಹೂವಿನ ಕು೦ಡಕ್ಕೆ ಸ್ಥಳ ಬದಲಿಸುತ್ತಾನೆ ಅವನ ನಿತ್ಯ ಆಹಾರವಾದ ಸಣ್ಣ ಸಣ್ಣ ಸೊಳ್ಳೆ ನೊಣಗಳಿಗಾಗಿ ಮತ್ತು ಹೇಗಿದ್ದರು ಪ್ರತಿನಿತ್ಯ ನೀರುಣಿಸುವ ನನ್ನ ಕಾಯುತ್ತಿರ ಬಹುದು.
ಗೆಳೆತನ ಪ್ರಾರಂಭವಾಗಿದ್ದ ಪೋಟೋ ಮತ್ತು ಇವತ್ತಿನ 51 ನೇ ದಿನದಲ್ಲಿ ಗೆಳೆಯನ ಪೋಟೋ ನೋಡಿ ತುಂಬಾ ಬದಲಾಗಿದ್ದಾನೆ, ಸೃಷ್ಟಿಯ ಮೂಲ ರೂಪದಲ್ಲಿ ಶತೃಗಳಿಂದ ಬದುಕಿ ಉಳಿಯಲು ಆಯಾ ಗಿಡದ ಹೂವಿನ ಬಣ್ಣದ ಜೊತೆ ತನ್ನ ಬಣ್ಣವು ಹೊಂದಿಸುಕೊಳ್ಳುವ ಪ್ರಕೃತಿ ವಿಸ್ಮಯ ಕೂಡ.
ನಾನು, ಶಂಭೂರಾಮ, ಹೂ ತೋಟದ ಜೊತೆ ಮುಂಗಾರಿನಲ್ಲಿ ನಿರ್ಗಮಿಸುವ ಈ ಗೆಳೆಯ ಹೀಗೆ ಸಾಗಿದೆ ನಿತ್ಯದ ಬೆಳಗು.
Comments
Post a Comment