ಕೊರಾನಾ ಲಾಕ್ ಡೌನ್ ಡೈರಿ -2020
ಲೆಟರ್ ನಂಬರ್- 41.
ದಿನಾ೦ಕ: 27-ಮೇ -2020
#ಕೊರಾನಾ_ಬರಲಿ_ಬಿಡಲಿ
#ಸತ್ತರೂ_ಚಿOತೆಯಿಲ್ಲ_ಊರು_ಮುಟ್ಟಬೇಕು.
ಇದು ಹೊಟ್ಟೆಪಾಡಿಗಾಗಿ ಹುಟ್ಟೂರಿನಿ೦ದ ದೂರ ದೂರ ಹೋದ ಕಾಮಿ೯ಕರ ಮನಸ್ಸಲ್ಲಿ ದೃಡವಾಗಿರುವ ನಿಧಾ೯ರ.
Homesickness ಯಾವ ರೀತಿ ಮನುಷ್ಯನನ್ನ ಮಾಡುತ್ತದೆ ಎಂಬುದಕ್ಕೆ ಮನಶಾಸ್ತ್ರದಲ್ಲಿ ಹೆಚ್ಚಿನ ವಿವರ ಇರಬಹುದು.
ಎಲ್ಲಾ ವ್ಯವಸ್ಥೆ ಇದ್ದಾಗ ಈ ಭಯ ಇದ್ದಿರಲಿಲ್ಲ, ವಷ೯ಕೋಮ್ಮೆ ಊರಿಗೆ ಹೋಗಿ ಬಂದರಾಯಿತೆಂಬ ಉದಾಸೀನ ಎಲ್ಲರಿಗೂ.
ಪ್ರತಿ ತಿಂಗಳ ದುಡಿಮೆ ಊರಿನಲ್ಲಿನ ಕುಟುಂಬಕ್ಕೆ ಈಗಿನ ಬ್ಯಾ೦ಕ್ ವ್ಯವಸ್ಥೆಯಲ್ಲಿ ಕೆಲ ನಿಮಿಷದಲ್ಲಿ ವಗಾ೯ಯಿಸಿ ವಿಡಿಯೋ ಕಾಲ್ ನಲ್ಲಿ ಪರಸ್ಪರ ಸ೦ಬಾಷಣೆ ನಡೆಸುವುದರಿಂದ ಅಂತಹ ಪದೇ ಪದೇ ಊರಿಗೆ ಹೋಗ ಬೇಕೆನ್ನುವ ತುಡಿತ ಇರುವುದಿಲ್ಲ.
ಆದರೆ ಕೊರಾನಾದ ಪ್ರಾರಂಭದ ದಿನಗಳಲ್ಲಿ ಟಿವಿ ಮಾಧ್ಯಮ ಉoಟು ಮಾಡಿದ ಭಯದ ಸಂಚಲನ ಎಲ್ಲಾ ರಾಜ್ಯದ ಎಲ್ಲಾ ಬಾಷೆಯಲ್ಲಿ ಒಂದೇ ತರ ಆಗಿತ್ತು.
ಉದ್ಯೋಗ ನಿಮಿತ್ತ ಬೇರೆ ಊರಲ್ಲಿದ್ದವರಿಗೆ ಊರಲ್ಲಿದ್ದ ಕುಟುಂಬದ ರಕ್ಷಣೆ ಬಗ್ಗೆ ಭಯ ಉoಟಾದರೆ, ಊರಲ್ಲಿರುವವರಿಗೆ ತಮಗಾಗಿ ದುಡಿಯಲು ದೂರ ಹೋದವರ ಆರೋಗ್ಯದ ಬಗ್ಗೆ ಆತಂಕ.
ಜೀವ ಇದ್ದರೆ ಬೇಡಿ ತಿನ್ನ ಬಹುದು ಆದಷ್ಟು ಬೇಗ ಊರು ಸೇರಿ ಜೀವ ಉಳಿಸಿಕೊಳ್ಳಬೇಕು ಎಂಬ ತುಡಿತ ಹೆಚ್ಚಾಯಿತು, ಇದೇ ಸಂದಭ೯ದಲ್ಲಿ ರೈಲು, ಬಸ್ ಸಂಚಾರ ರದ್ದು, ಲಾಕ್ ಡೌನ್, 144 ಕಪ್ಯೂ೯, ಕೆಲಸ ಇಲ್ಲ, ಊಟಕ್ಕಿಲ್ಲ, ಕೊರಾ೦ಟೈನ್ ಗಳು ಮನೆಯಿಂದ ದೂರ ಇರುವವರಿಗೆ ಅಸಹನೆ ಹೆಚ್ಚಾಗಲು ಕಾರಣ ಆಯಿತು.
ಸ್ವಲ್ಪ ದಿನದಲ್ಲಿ ಪರಿಸ್ಥಿತಿ ನಿಯOತ್ರಣಕ್ಕೆ ಬರುತ್ತದೆ, ಸಕಾ೯ರ ಊರು ಮುಟ್ಟಿಸಲು ವ್ಯವಸ್ಥೆ ಮಾಡುತ್ತದೆ ಎಂದರೆ ನಂಬುವ ಸ್ಥಿತಿ ಯಾರಿಗೂ ಇರಲಿಲ್ಲ.
ನಡೆದವರು, ಸೈಕಲ್ / ಬೈಕ್ ನಲ್ಲಿ ಪ್ರಯಾಣಿಸಿದವರು, ಸರಕು ಸಾಗಿಸುವ ಲಾರಿಯಲ್ಲಿ ಕದ್ದು ಪ್ರಯಾಣಿಸಿದವರು ಲಕ್ಷಾ೦ತರ ಜನ.
ನಮ್ಮ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುವ ಒಬ್ಬ ಯಾರಿಗೂ ತಿಳಿಯದಂತೆ ಅವನ ಊರಾದ ಹೊಳೆ ಹೊನ್ನೂರಿಗೆ ನಡೆದೇ ಬಿಟ್ಟ ಮಾಗ೯ ಮದ್ಯದಲ್ಲಿ ಪೋಲಿಸರು ಹಿಡಿದಾಗಲೇ ಗೊತ್ತಾಗಿದ್ದು.
ನಮ್ಮ ಕಟ್ಟಡದಲ್ಲಿ ಗ್ರಾನೈಟ್ ಕೆಲಸದ ರಾಜಸ್ಥಾನದ ಕೆಲಸಗಾರರು ಕೆಲಸಕ್ಕೆ ಬಂದಿಲ್ಲ ಅಂತ ಇವತ್ತು ಪೋನ್ ಮಾಡಿದರೆ ಅವರೆಲ್ಲ ಊರು ತಲುಪಿದ್ದಾರೆ! ಹೇಗೆ ಪ್ರಯಾಣ ಅಂದರೆ ಲಾರಿಯಲ್ಲಿ ಒಟ್ಟು 82 ಜನ 3 ದಿನದ ಅತಿ ಪ್ರಾಯಾಸದ ಪ್ರಯಣದಿಂದ ಮನೆ ಮುಟ್ಟಿದ್ದಾರೆ.
ಕೊರಾ೦ಟೈನ್ ಎಲ್ಲಾ ಅವರು ತಪ್ಪಿಸಿ ಕೊ೦ಡಿದ್ದಾರೆ ಯಾರಿಗಾದರೂ ಸೋ೦ಕು ಇದ್ದರೆ!? ಅದು ಗೊತ್ತಿಲ್ಲ.
ಇನ್ನೊ೦ದು ತಿಂಗಳಲ್ಲಿ ಮತ್ತೆ ದುಡಿಮೆಗೆ ಬರುವ ಮನಸ್ಸು ಅವರದ್ದು, ಕೊರಾನಾ ಜೊತೆಗೆ ಜೀವನ ಮಾಡುವ ದೈಯ೯ ಅವರ ಮಾತಿನಲ್ಲಿದೆ.
3 ದಿನ ಒಂದು ಲಾರಿಯಲ್ಲಿ ಗುಪ್ತವಾಗಿ ಪ್ರಯಾಣಿಸುವಾಗ ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇಲ್ಲ ದೇವರೇ ಕಾಪಾಡಬೇಕು.
ಮನೆ ಸೇರಿ ನಿರಾಳರಾದವರ ಮಾತಲ್ಲಿ ಸ್ವಗ೯ ಸೇರಿದ ಸಂತೃಪ್ತಿ ಕೇಳಿಸಿತು.
ಮುಂದೆ ಮತ್ತೆ ಕರೋನ ಬಂದರೆ ಈಗಿನ ಭಯ ಆತಂಕಗಳು ಈ ರೀತಿ ಮರುಕಳಿಸಲಾರದು ಆದರೂ ಅವರೆಲ್ಲ ಅಪಾಯಕಾರಿ ಮಾಗ೯ ಆಯ್ಕೆ ಮಾಡಿಕೊಂಡು ಊರು ಮುಟ್ಟಿದ್ದನ್ನ ನೆನಪಿಸಿಕೊಂಡರೆ ವಿಷಾದ ಎನ್ನಿಸುತ್ತೆ.
Comments
Post a Comment