Blog number 1498. ಐದು ವರ್ಷದ ಹಿಂದೆ ರಾಜ್ಯ ವಿದಾನ ಸಭಾ ಚುನಾವಣಾ 2018ರ ಪ್ರಚಾರಕ್ಕೆ ಪ್ರದಾನಿ ಮೋದಿ ಶಿವಮೊಗ್ಗಕ್ಕೆ ಬಂದಿದ್ದರು (6- ಮೇ -2018 ) .
₹ಮೋದಿ ಶಿವಮೊಗ್ಗದ ಬ್ರಾಂಡ್ ಅಂಬಾಸಡರ್.
#ಶಿವಮೊಗ್ಗದ ಇತಿಹಾಸ ಪ್ರದಾನ ಮಂತ್ರಿ ಮೋದಿಯವರಿಂದ ಉಲ್ಲೇಖ
ನಿನ್ನೆ ಪ್ರದಾನಿ ಮೋದಿ ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರದಲ್ಲಿ ಶಿವಮೊಗ್ಗ ಜಿಲ್ಲೆಯ ಇತಿಹಾಸ, ಪ್ರಸಿದ್ದ ಸ್ಥಳಗಳನ್ನ ಉಲ್ಲೇಖಿಸಿದ್ದು ಶಿವಮೊಗ್ಗ ಜಿಲ್ಲೆಯ ಬ್ರಾಂಡ್ ಇಮೇಜಿಗೆ ಪೂರಕವಾದ ಕಿರೀಟದ ಗರಿಗಳOತಾಯಿತು.
ಕೆಳದಿ ಅರಸರ ಆಡಳಿತ, ವಿಶ್ವವಿಖ್ಯಾತ ಜೋಗ ಜಲಪಾತ, ತುಂಗಾ ನದಿ ಮತ್ತು ತುಂಗಾ ಪಾನ ಗಂಗಾ ಸ್ನಾನ ಎಂಬ ನಾಣ್ಣುಡಿ, ಶರಾವತಿ ನದಿಗೆ (ತುಮರಿ) ಸೇತುವೆ, ಸಂಸ್ಕೃತ ಗ್ರಾಮ ಮತ್ತೂರು, ಸಮಾಜವಾದಿ ನೇತಾರ ಸ್ವಾತಂತ್ರ್ಯ ನಂತರದ ಮೊದಲ ಸಾವ೯ಜನಿಕ ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆದ ಶಾಂತವೇರಿ ಗೋಪಾಲಗೌಡರು, ರಾಷ್ಟ್ರಕವಿ ನಮ್ಮ ಹೆಮ್ಮೆಯ ಕುವೆಂಪು ಅವರ ಸಮ ಬಾಳು/ಸಮಪಾಲು ಘೋಷಣೆ ಪ್ರದಾನ ಮಂತ್ರಿಗಳಿಂದ ಪುನರುಚ್ಚಾರದಿಂದ ಜಿಲ್ಲೆಗೆ ರೋಮಾಂಚನವಾಯಿತು.
ಸ್ಥಳಿಯ ಅವರ ಪಕ್ಷದವರು ಈ ಎಲ್ಲಾ ಮಾಹಿತಿ ಒದಗಿಸಿದ್ದಕ್ಕೆ ಅಭಿನಂದಿಸಲೇ ಬೇಕು ಇದನ್ನೆಲ್ಲ ಒಪ್ಪಿ ತಮ್ಮ ಬಾಷಣದಲ್ಲಿ ಉಪಯೋಗಿಸಿ ಶಿವಮೊಗ್ಗ ಜಿಲ್ಲೆಯ ಗರಿಮೆ ಹಿರಿಮೆಗೆ ಕಾರಣರಾದ ಪ್ರಧಾನಿ ಕೂಡ ಅಭಿನಂದನಾಹ೯ರು.
ಶಿವಮೊಗ್ಗ ಜಿಲ್ಲೆಯಲ್ಲಿ 1952ರಲ್ಲಿ ನಡೆದ ಉಳುವವನೆ ಹೊಲದೊಡೆಯ ಘೋಷಣೆಯ ಕಾಗೋಡು ಭೂಮಿ ಹೋರಾಟ, ರೈತ ಮತ್ತು ದಲಿತ ಚಳವಳಿಯ ಹುಟ್ಟಿಗೆ ಕಾರಣವಾದ ವಿಚಾರ ಪ್ರಧಾನಿಗೆ ತಲುಪದಿರುವುದು ಒಂದು ಕೊರತೆ ಆಯಿತು.
ಮರಳು ಮಾಫಿಯ, ವಾಚ್ ಇದು ಅವರರವರ ಪಕ್ಷ ಚುನಾವಣೆ ವಿಚಾರ.
ಇವತ್ತು ನಮ್ಮ ಜೋಗ ಜಲಪಾತ ಸರಿಯಾದ ಪ್ರಚಾರವಿಲ್ಲದೆ, ಮೂಲ ಸೌಲಭ್ಯವಿಲ್ಲದೆ ಪ್ರವಾಸೋದ್ಯಮದಲ್ಲಿ ಸೊರಗಿದೆ, ಈ ಹಿಂದೆ ರಜನಿಕಾಂತ ಲಿಂಗಾ ಸಿನೆಮಾ ಶೂಟಿ೦ಗ್ ನಿಂದ ಜೋಗ ಜಲಪಾತಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿತ್ತು (ಆಗ ಅನೇಕರು ರಜನಿಕಾಂತ್ ಜೋಗ್ ಶೂಟಿಂಗ್ ವಿರೋದಿಸಿದ್ದರು)
ರಾಜಕರಣ ಏನೇ ಆಗಲಿ ಪ್ರಧಾನಿ ಮೋದಿ ನಿನ್ನೆಯ ಬೇಟಿ ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧಿಗೆ ಮಾತ್ರ ಲಾಭ ಆಯಿತು.
PRIME MINISTER MODI YESTERDAY 5TH MAY 2018 ADRESSIN ELECTION RALLY IN SHIMOGA,HE GLANCES PRIME AND PRIDE OF SHIMOGA DISTRICT AS KELADI KINGDOM,FAMOUS POET KUVEMPU,WELKNOWN SOCIALIST LEADER SHANTAVERI GOPALA GOWDA,TUNGA RIVER,SHARAVATHI RIVER PROPOSED LONGEST BRIDGE, SANSKRIT VILLAGE MATTUR AND WORLD FAMOUSE JOG FALLS ITS APPRECIATE PM AND ENCOURAGEMENT AND SUPPORT TO SHIMOGA DISTRICT TOURISM
Comments
Post a Comment