ಕೊರಾನಾ ಲಾಕ್ ಡೌನ್ ಡೈರಿ -2020
ಲೆಟರ್ ನಂಬರ್- 38
ದಿನಾ೦ಕ: 20 -ಮೇ -2020
#ಸಕಾ೯ರ_ಅನುಮತಿ_ನೀಡಿದರೂ_ಸಲೂನ್_ಮಾಲಿಕರು_ಸಲೂನ್_ಸೀಲ್_ಡೌನ್_ಮಾಡಿದ್ದಾರೆ.
*ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸವಿತಾ ಸಮಾಜದ ಈ ತೀಮಾ೯ನ ಶ್ಲಾಘನೀಯ.
*ತಾಲ್ಲೂಕಿನ ಎಲ್ಲಾ ಸಲೂನ್ ಗಳು ಮೇ 31ರ ವರೆಗೆ ತೆರೆಯುವುದಿಲ್ಲ.
* ಎಲ್ಲಾ ಸಲೂನ್ ಸಲಕರಣೆಗಳನ್ನ ಒಂದು ಕಡೆ ಇಟ್ಟು ಸೀಲ್ ಮಾಡಿದ್ದಾರೆ.
* ಸಂಘದ ಆದೇಶ ಮೀರಿ ಮನೆಗಳಿಗೆ ಹೋಗಿ ಕೆಲಸ ಮಾಡಿದರೆ 2000 ದ೦ಡ.
ಸಣ್ಣ ಸಮಾಜ ಮತ್ತು ಸಮಾಜದಲ್ಲಿ ಅತ್ಯವಶ್ಯಕ ವೃತ್ತಿಯವರು ಇವರ ಆದಾಯವೂ ಸಣ್ಣದೆ ಆದರೆ ದೇಶದ ಆರೋಗ್ಯ ತುತು೯ ಪರಿಸ್ಥಿತಿ ತಂದಿರುವ ಕರೋನಾ ಸಂಕಪ್ಟ ಕಾಲದಲ್ಲಿ ಇವರ ತೀಮಾ೯ನ ಮಾತ್ರ ಬೆಲೆ ಕಟ್ಟಲಾಗದು.
ಅತಿ ಹೆಚ್ಚು ಲಾಭದ ದಂದೆಯವರು ಲಾಕ್ಡೌನ್ ಮುಗಿದರೆ ಸಾಕು ನಮ್ಮ ವ್ಯವಹಾರ ಪ್ರಾರಂಬಿಸೋಣ ಎಂದು ಹಾತೊರೆಯುತ್ತಿದ್ದರೆ ಈ ಸಲೂನ್ ಮಾಲಿಕರ ಸಂಘದವರು ಸಕಾ೯ರ ಅನುಮತಿ ನೀಡಿದರೂ ಸಲೂನ್ ತೆರೆಯಲು ಮನಸ್ಸು ಮಾಡಿಲ್ಲ ಮತ್ತು ಇಡೀ ತಾಲ್ಲೂಕಿನಲ್ಲಿ ಯಾರೂ ಸಲೂನ್ ತೆರೆಯದಂತೆ ಅವರ ಪರಿಕರ ಸಾಮಗ್ರೀ ಒಂದು ಕಡೆ ತರಿಸಿ ಸೀಲ್ ಮಾಡಿದ್ದಾರೆ ಮತ್ತು ಯಾರಾದರೂ ಸಂಘಟನೆ ಆದೇಶ ಉಲ್ಲಂಘನೆ ಮಾಡಿದರೆ 2000 ದಂಡ ಹಾಕುತ್ತಾರೆ.
ಸಲೂನ್ ಗಳಲ್ಲಿ ಸಾ೦ಕ್ರಮಿಕ ರೋಗ ಪ್ರಸಾರಣ ಆಗುವ ಸಾಧ್ಯತೆ ಯಾವಾಗಲೂ ಹೆಚ್ಚು ಇದಕ್ಕೆ ಕಾರಣ ಸಲೂನ್ ಗಳು ಶುಭ್ರತೆ ಕೊರತೆ ಕಾರಣ ಒ೦ದಾದರೆ ರೋಗ ಪೀಡಿತರಿಗೆ ಬಳಸಿದ ಪರಿಕರ, ಬಟ್ಟೆ ಆರೋಗ್ಯವಂತರಿಗೂ ಬಳಸುವ ಸಂದಭ೯ದಲ್ಲಿ ಹರಡುವ ಸಾಧ್ಯತೆ ಹೆಚ್ಚು.
ಬೇರೆ ಕಾಯಿಲೆಗಳಾದರೆ ಮನಷ್ಯನ ಬಾಹ್ಯ ಚಹರೆಯಿOದ ಗೊತ್ತಾಗುತ್ತದೆ ಆದರೆ ಕೊರಾನಾ ವೈರಸ್ ಯಾವ ಕಾರಣಕ್ಕೂ ಅಗೋಚರ ಮತ್ತು ಅದು ಸಲೂನ್ ಕಾಮಿ೯ಕರಿಗೆ ಹರಡುವ ಸಂದಭ೯ ಕೂಡ ಹೆಚ್ಚು.
ಈಗ ಕೊರಾನಾ ಸೊ೦ಕು ಪೀಡಿತರ ಸಂಖ್ಯೆ ಕೂಡ ಹೆಚ್ಚಾಗಿದೆ.
ಸಲೂನ್ ಗಳು ವೈದ್ಯರ ಶಸ್ತ್ರ ಚಿಕಿತ್ಸಾ ಕೇಂದ್ರದಷ್ಟೇ ಹೈಜನ್ ಆಗಿ ಮಾಪ೯ಡಿಸುವ ಅನಿವಾಯ೯ತೆ ಇದೆ ಇದಕ್ಕಾಗಿ ಅವರಿಗೆ ಆಥಿ೯ಕ ಸಹಾಯ ಮತ್ತು ಸೂಕ್ತ ತರಬೇತಿಯ ಅವಶ್ಯವಿದೆ ಇದರಿಂದ ಸಮೂದಾಯದ ಆರೋಗ್ಯ ಕಾಪಾಡಬಹುದು.
ಸವಿತಾ ಸಮಾಜದ ಸಂಘಟನೆಗಳ ಮುಖಾಂತರ ಸಲೂನ್ ಗಳ ಆದೂನಿಕರಣ ಮತ್ತು ತರಬೇತಿ ಕೂಡ ಸುಲಭ ಸಾಧ್ಯವಿದೆ.
ಈ ಮೇಲ್ಕಂಡ ಮುಂಜಾಗೃತೆ ಮಾಡದೆ ಸಲೂನ್ಗಳನ್ನ ಪ್ರಾರಂಭಿಸಲು ಸಕಾ೯ರ ನೀಡಿದ ಆದೇಶ ಸಮಂಜಸವಲ್ಲ ಎಂಬುದು ಆ ವೃತ್ತಿ ಬಾ೦ದವರ ಈ ತೀಮಾ೯ನದಿಂದ ವ್ಯಕ್ತವಾಗಿದೆ.
Comments
Post a Comment