Skip to main content

Posts

Showing posts with the label Karmugilu novel written by K.T.Gatti no more

Blog number 1958. ಅಸ್ತಂಗತರಾದ ಖ್ಯಾತ ಸಾಹಿತಿ ಕೆ.ಟಿ.ಗಟ್ಟಿ ಬರೆದ ಕಾದಂಬರಿ ಸಿನಿಮಾ ಮಾಡಿದ ಕೋಣಂದೂರು ವೆಂಕಪ್ಪ ಗೌಡರು ... ಈ ಕಥೆಯ ನಿಜ ಕಥಾ ನಾಯಕ ನಮ್ಮ ಊರಿನ ಹಯಾತ್ ಸಾಹೇಬರು,

#ಖ್ಯಾತ_ಸಾಹಿತಿ_ಕೆಟಿ_ಗಟ್ಟಿ_ಇಹಲೋಕ_ಯಾತ್ರೆ_ಮುಗಿಸಿದ್ದಾರೆ #ಅವರ_ಕಾರ್ಮುಗಿಲು_ಕಾದಂಬರಿ_ಸಿನಿಮಾ_ಆಗಿದೆ #ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲುಕಿನ_ರಾಮಚಂದ್ರಪುರ_ಮಠದಲ್ಲಿ_ನಡೆದ_ಸತ್ಯಕಥೆ #ಆ_ಕಾಲದಲ್ಲಿ_ದಾರಾವಾಹಿಯಂತೆ_ಇದು_ಪ್ರಜಾವಾಣಿಯಲ್ಲಿ_ಸುದ್ದಿಯಾಗಿತ್ತು #ಈ_ಘಟನೆ_ಆದರಿಸಿ_ಕೆ_ಟಿ_ಗಟ್ಟಿ_ಪ್ರಜಾವಾಣಿ_ದೀಪಾವಳಿ_ವಿಶೇಷಾಂಕದ #ಕಥಾ_ಸ್ಪದೆಗೆ_ಬರೆದ_ಕಥೆ_ಅವರಿಗೆ_ಪ್ರಥಮ_ಬಹುಮಾನ_ತಂದಿತ್ತು #ನಮ್ಮ_ಜಿಲ್ಲೆಯ_ಖ್ಯಾತ_ಸಮಾಜವಾದಿ_ಲೇಖಕ_ಕೋಣಂದೂರು_ವೆಂಕಪ್ಪಗೌಡರು #ಇದನ್ನು_ಸಿನೆಮಾ_ಮಾಡಿದ್ದರು #ಅವತ್ತು_ರಾತ್ರಿ_ಕಾರ್ಮುಗಿಲು_ಕಾದಂಬರಿಯ_ನಿಜ_ಕಥಾನಾಯಕನನ್ನ_ಅವರಿಗೆ_ಬೇಟಿ_ಮಾಡಿಸಿದ್ದೆ.     ನನ್ನ ಬಾಲ್ಯದ ನೆನಪು ಬಹುಶಃ 1972-73 ನಾನು ಎರಡನೆ ತರಗತಿ ಓದುವಾಗ ಹೊಸನಗರ ತಾಲೂಕಿನ ರಾಮಚಂದ್ರಪುರ ಮಠದಲ್ಲಿ ನಡೆದ ಒಂದು ಘಟನೆ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಕಂತುಗಳಾಗಿ ಸುದ್ದಿ ಪ್ರಕಟವಾಗುತ್ತಿತ್ತು.    ಇದು ಆ ಕಾಲದ ವೈರಲ್ ಸುದ್ದಿ, ನಮ್ಮ ಹಳ್ಳಿಗೆ ನಮ್ಮ ಮನೆಗೆ ಮಾತ್ರ ಬರುತ್ತಿದ್ದ ಏಕೈಕ ಪತ್ರಿಕೆ ಪ್ರಜಾವಾಣಿ ಆದ್ದರಿಂದ ಈ ಸುದ್ದಿ ಓದಲು ಅನೇಕರು ನಮ್ಮ ಮನೆಗೆ ಬರುತ್ತಿದ್ದರು, ಓದಿ ಚರ್ಚಿಸುತ್ತಿದ್ದರು.    ಸಂಜೆ ನಂತರ ಈ ಪತ್ರಿಕೆ ನನ್ನ ತಾಯಿ ಮತ್ತು ಅವರ ಗೆಳತಿಯರ ನಡುವೆ ಚರ್ಚಾ ವೇದಿಕೆ ಆಗುತ್ತಿತ್ತು.    ಅದೇನೆಂದರೆ ಈ ಮಠದಲ್ಲಿ ಆನೆ ಕುದುರೆಗಳ ಸಾಕಲು ...