Skip to main content

Posts

Showing posts with the label Historian Ramesh Hirejamburu

Blog number 3418. ಇತಿಹಾಸ ಸಂಶೋದಕ ರಮೇಶ್ ಹಿರೇಜಂಬೂರು

#ನಿನ್ನೆಯ_ಸಂಜೆ_ಅವಿಸ್ಮರಣೀಯಗೊಳಿಸಿದ #ಇತಿಹಾಸ_ಸಂಶೋಧಕ_ರಮೇಶ್_ಹಿರೇಜಂಬೂರ್ #ನಾನು_ಇವರ_ಅಭಿಮಾನಿ. #historian #rameshhirejamburu #kadamba #talagunda #kannada #shilashasana   ನಿನ್ನೆ ಸಂಜೆ ರಮೇಶ್ ಹಿರೇಜಂಬೂರ್ ನನ್ನ ಕಛೇರಿಗೆ ಬಂದಿದ್ದರು ಇದು ನನ್ನ ಅವರ ಮೊದಲ ಮುಖತಃ ಬೇಟಿ.    ಶಿವಮೊಗ್ಗ ಜಿಲ್ಲೆಯ ಖ್ಯಾತ ಇತಿಹಾಸ ಸಂಶೋದಕರಾದ  ಇವರ ಪೇಸ್ ಬುಕ್ ನ ಎಲ್ಲಾ ಲೇಖನ ತಪ್ಪದೆ ಓದುತ್ತೇನೆ ನಾನು ಇವರ ಸಂಶೋದನಾ ಲೇಖನಗಳ ಅಭಿಮಾನಿ.    ರಮೇಶ್ ಹಿರೇಜಂಬೂರ್ ಮತ್ತು ನವೀನ್ ಶಿರಾಳಕೊಪ್ಪ ಇವರಿಬ್ಬರು ತಾಳಗುಂದದ ಮೊದಲ ಕನ್ನಡ ಶಾಸನದ ಸಂಶೋಧನೆಯಲ್ಲಿ ಹೆಚ್ಚು ಶ್ರಮವಹಿಸಿದವರು ಇದಕ್ಕಾಗಿ ರಾಜ್ಯದ ಕನ್ನಡಿಗರು ಇವರನ್ನು ಅಭಿನಂದಿಸಬೇಕು.    ನಿನ್ನೆಯ ಸಂಜೆ ನನ್ನ ಕಛೇರಿಯಲ್ಲಿ ಜಿಲ್ಲೆಯ ಇತಿಹಾಸದ ವಿಚಾರವಾಗಿ ತುಂಬಾ ಹೊತ್ತು ಮಾತಾಡಿದೆವು ಇವರ ಪತ್ನಿ ತವರೂರು ಹೊಸನಗರದ ಸೋನಲೆಗೆ ಹೊರಡುವ ತನಕ.      ನನ್ನ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ಹಿಂದೆಯೇ  ಓದಿದ್ದಾರೆ, ಆ ಪುಸ್ತಕದ ವಿಚಾರವಾಗಿ ಕೆಲವು ಕಂತುಗಳ ನನ್ನ ಸಂದರ್ಶನ ಪೇಸ್ ಬುಕ್ ನಲ್ಲಿ ಪ್ರಕಟಿಸಲಿದ್ದಾರೆ.    ಚಹಾ ಮತ್ತು ಮಿರ್ಚಿ ಬೊಂಡದ ಆತಿಥ್ಯ ನೀಡಿದೆ ಹೊರಡುವಾಗ ನನ್ನ ಸಣ್ಣ ಕಥೆಗಳ #ಬಿಲಾಲಿ_ಬಿಲ್ಲಿ_ಅಭ್ಯಂಜನ ಕಥಾ ಸಂಕಲನ ನೀಡಿ ಸೆಲ್ಪಿ ತೆಗೆದುಕೊಂಡು ಬಿಳ್ಕೊಟ್ಟೆ. ...