Skip to main content

Posts

Showing posts with the label BESTHARA RANI CHAMPAKA REVIEWS -7

ಬೆಸ್ತರ ರಾಣಿ ಚಂಪಕಾ ವಿಮಷೆ೯-8

ಮ. ರಾ. ಹೆಗ್ಗಡೆ ಸಂಪಾ ಎಂಬ ತಕ೯ದ ಕಾವ್ಯ ರಚನಾಕಾರರು ಬೆಸ್ತರ ರಾಣಿ ಚಂಪಕಾ ಓದಿ ಬರೆದ ಅಭಿಪ್ರಾಯಗಳು ಓದುಗರಿಗಾಗಿ.   ಮ.ರಾ. ಹೆಗ್ಗಡೆ ಮೂಲ ಸಾಗರ ತಾಲ್ಲೂಕಿನ ಅರಲುಗೋಡಿನವರು ಈಗ ಶಿರಾಳಕೊಪ್ಪದಲ್ಲಿ ನೆಲೆಸಿದ್ದಾರೆ, ಪ್ರಖ್ಯಾತ M N ಪಿಕಲ್ಸ್ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿದ್ದರು ಈಗ ಸ್ವಯ೦ ಉದ್ಯೋಗ ಮತ್ತು ಕೃಷಿ ಸಂಬಂದಿತ ಪಾರಂ ನಡೆಸುತ್ತಿದ್ದಾರೆ. ಸಾಗರ ತಾಲ್ಲೂಕು ಆನಂದಪುರದಲ್ಲಿ ನೆಲೆಸಿರುವ  ಉತ್ಸಾಹೀ ಉದ್ಯಮಿ ಹಾಗೂ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ   ಮಾನ್ಯಶ್ರೀ|| ಅರುಣ್ ಪ್ರಸಾದ ರವರು ಹತ್ತುವರ್ಷಗಳ ಹಿಂದೆಯೇ ಬರೆದು,  ಮೊನ್ನೆ ಮೊನ್ನೆಯಷ್ಟೇ ಮುದ್ರಿಸಿ ಪ್ರಕಾಶಿಸಿದ 'ಕಾಲ್ಪನಿಕ ಕಥಾಹಂದರ'ವೆಂಬ ಚೌಕಟ್ಟಿನ #ಬೆಸ್ತರ_ರಾಣಿ_ಚಂಪಕಾ ಹೆಸರಿನ ಐತಿಹಾಸಿಕ ಕಾದಂಬರಿ ಪುಸ್ತಕವನ್ನು   'ಗೌರವ ಪ್ರತಿ' ರೂಪದಲ್ಲಿ ಸ್ವೀಕರಿಸಿ ಓದಿದೆ. ಕೆಳದಿ ಸಾಮ್ರಾಜ್ಯದ ರಾಜಾ ವೆಂಕಟಪ್ಪ ನಾಯಕನ  ಸ್ವಚ್ಛ, ಜನಪರ, ನ್ಯಾಯಪರ, ಸುದೀರ್ಘ ಆಳ್ವಿಕೆಯ ಕಾಲದಲ್ಲಿ ಆಗಿಹೋಗಿರುವ  ಅತ್ಯವಶ್ಯಕವಾಗಿ ದಾಖಲಾಗಲೇಬೇಕಾದ ಐತಿಹಾಸಿಕ ಸತ್ಯವೊಂದು, ಕೇವಲ ಹುಟ್ಟು ಮತ್ತು ಆಹಾರಪದ್ಧತಿಯ ಕಾರಣದಿಂದ,  ಇತಿಹಾಸಕಾರರ  ಅವಗಣನೆಗೆ ಸಿಲುಕಿ,  ಸುಮಕೋಮಲ_ಮುಗ್ಧ ಮನಸ್ಸಿನ ನಿಷ್ಕಲ್ಮಶ ಹೃದಯದ ಹೆಣ್ಣೊಬ್ಬಳ 'ತ್ಯಾಗಸದೃಶ ಜೀವನ'ವು ಇತಿಹಾಸದ ಪುಟಗ...