Skip to main content

Posts

Showing posts with the label We should keep all Gift in proper way that is the real respect to your friends

Blog number 1004. ಉಡುಗೊರೆಗೆ ಬೆಲೆ ಕಟ್ಟಲಾಗದಂತ ಅಮೂಲ್ಯ ವಸ್ತು ಅದನ್ನು ನೀಡಿದವರ ಸ್ಮರಣೆಗಾಗಿ ನೆನಪಿನ ಕಾಣಿಕೆ ಸಂರಕ್ಷಿಸಿಟ್ಟರೆ ಅದೇ ನಾವು ಗೆಳೆತನಕ್ಕೆ ನೀಡುವ ದೊಡ್ಡ ಗೌರವ.

#ಉಡುಗೊರೆಗೆ_ಮೌಲ್ಯ_ಬರುವುದು_ಯಾವಾಗ? #ನಾವು_ನೀಡಿದ_ಉಡುಗೊರೆಗೆ_ಸ್ವೀಕರಿಸಿದವರು_ಯಾವ_ಗೌರವ_ನೀಡಿದ್ದಾರೆಂಬ_ಕುತೂಹಲ_ಇದ್ದಿದ್ದೇ #ಉಡುಗೊರೆ_ನೀಡುವವರ_ಸ್ವೀಕರಿಸುವರ_ಮನಸ್ಥಿತಿ #ನೆನಪಿನಲ್ಲಿ_ಸದಾ_ಉಳಿಯುವಂತೆ_ಇರಲಿ_ನೆನಪಿನ_ಕಾಣಿಕೆ #ನನ್ನಲ್ಲಿರುವ_ನೆನಪಿನ_ಕಾಣಿಕೆ_ನನ್ನ_ಆಫೀಸಿನಲ್ಲಿ_ಸುರಕ್ಷಿತ      ನೆನಪಿನ ಕಾಣಿಕೆ - ಉಡುಗೊರೆ ಅಂತೆಲ್ಲ ಕರೆಯುವ ಇಂಗ್ಲೀಷ್ ನ Gift ನನಗೆ ಕೊಡುವವರು ತುಂಬಾ ಕಡಿಮೆ ಮತ್ತು ನಾನು ಸ್ವೀಕರಿಸುವುದೂ ಇಲ್ಲ ಆದರೆ ಪುಸ್ತಕ ಮಾತ್ರ ಸ್ಟೀಕರಿಸುತ್ತೇನೆ ಯಾಕೆಂದರೆ ನನ್ನ ಮದುವೆ ಕೂಡ ಆಪ್ತ 15 ರಿಂದ 20 ಜನರ ಮಧ್ಯದಲ್ಲಿ, ಹುಟ್ಟುಹಬ್ಬ, ಆ್ಯನಿವರ್ಸರಿಗಳು ಇಲ್ಲ, ಸನ್ಮಾನ ಸ್ವೀಕರಿಸುವುದಿಲ್ಲ ಮತ್ತು ಅತ್ಯಂತ ಅತ್ಯಾಪ್ತರು ಹೆಚ್ಚಿನವರು ಬಡವರು ಹೀಗಾಗಿ ನನಗೆ ನೆನಪಿನ ಕಾಣಿಕೆ ಬರುವುದೂ ಇಲ್ಲ.    ಆದರೂ ಕೆಲ ಸಂದರ್ಭದಲ್ಲಿ ನೆನಪಿನ ಕಾಣಿಕೆ ನೀಡಿದ್ದು ಮಾತ್ರ ನಾನು ಹಾಳಾಗದಂತೆ ಸಂರಕ್ಷಿಸಿಡಲು ಹೆಚ್ಚು ಶ್ರಮ ಹಾಕುತ್ತೇನೆ.     ನನ್ನ ನಿತ್ಯ ಕಾಯಕದ ಕಛೇರಿಯಲ್ಲಿ ಇಟ್ಟಿರುವ ನೆನಪಿನ ಕಾಣಿಕೆಗಳು ಅದನ್ನು ನೀಡಿದವರು ಯಾರು? ಯಾವಾಗ ನೀಡಿದರೆಂಬ ಕಥೆ ಹೇಳುತ್ತದೆ.     ನನ್ನ ಎದುರಿನ ಕಿಟಕಿ ಮೇಲಿನ ರಾಧಕೃಷ್ಣರ ಲೋಹದ ವಿಗ್ರಹ ನೀಡಿದವರು ನಮ್ಮ ಊರಿನ ಶಾಲಾ ಶಿಕ್ಷಕಿ ಅನುರಾಧಾ ಟೀಚರ್ ಮತ್ತು ಚಂದ್ರಕಲಾ ಟೀಚರ್ ಇವರು ನಮ್ಮೆಲ್ಲ ...