#ದೊಂಡಿಯಾ_ವಾಘ್_ಭಾಗ_1 #ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತ #ಚೆನ್ನಗಿರಿಯ_ವೀರ_ಸೇನಾನಿ #ಶಿಕಾರಿಪುರದ_ಕಾಡಿನಲ್ಲಿ_ಸ್ಥಳೀಯ_ಬಂಜಾರ_ಜನರಿಂದ #ಶಶ್ರೂಸೆ_ಸಹಕಾರ_ಪಡೆದು_ಶಿಕಾರಿಪುರದ #ಪುರದೈವ_ಹುಚ್ಚರಾಯ_ಸ್ವಾಮಿಗೆ_ತನ್ನ_ವೀರಕತ್ತಿ_ಅರ್ಪಿಸುವ_ದೊಂಡಿಯಾ_ವಾಘ್ #ವಿಜಯದಶಮಿಯಲ್ಲಿ_ತಾಲ್ಲೂಕು_ದಂಡಾದಿಕಾರಿ_ಈ_ಕತ್ತಿಯಿಂದ_ಬನ್ನಿಯ_ಬಾಳೆಕಂದು_ಕಡಿಯುತ್ತಾರೆ. https://youtu.be/6YyzSKZKai0?si=1R0jZIS_fBOYARZV ಧೊಂಡಿಯ ಚೆನ್ನಗಿರಿಯಲ್ಲಿ ೧೮ನೇ ಶತಮಾನದ ಉತ್ತರ ಭಾಗದಲ್ಲಿ ಹುಟ್ಟಿದ. ಮರಾಠಿ ಪವಾರ್ ಪಂಗಡದ ಒಂದು ಸಾಮಾನ್ಯ ಪರಿವಾರದಲ್ಲಿ ಅಥವ ಬಂಜಾರ ಸಮಾಜದಲ್ಲಿ ಇವರ ಜನನ. ಆ ಕಾಲ ಘಟ್ಟದಲ್ಲಿ ಚೆನ್ನಗಿರಿಯು ಕೆಳದಿಯ ಸಂಸ್ಥಾನದ ಅಡತಕ್ಕೆ ಒಳಪಟ್ಟಿತ್ತು. ಧೊಂಡಿಯ ಕೆಳದಿಯ ಚೆನ್ನಮ್ಮನ ಕಥೆಗಳನ್ನು ಕೇಳುತ್ತಾ ಬೆಳದವನು,ಗುರು ಸಿದ್ದಪ್ಪ ಶೆಟ್ಟರ ಗರಡಿಯಲ್ಲಿ ಅಶ್ವಾರೋಹಣ, ಕತ್ತಿ ವರಸೆ, ಮಲ್ಲಯುದ್ಧಗಳ ಅಭ್ಯಾಸವನ್ನು ಮಾಡಿ ಇಡೀ ಚೆನ್ನಗಿರಿ ಸೀಮೆಗೆ ಉದಯೋನ್ಮುಖ ಯೋಧನೆನಿಸಿಕೊಂಡಿದ್ದ. ಆ ಸಮಯದಲ್ಲಿ ಕೆಳದಿಯ ರಾಜಮನೆತನದಲ್ಲಿ ಅಂತಃಕಲಹಗಳು ಏರ್ಪಟ್ಟಿತ್ತು. ಇವೆಲ್ಲದರ ನಡುವೆ ಎತ್ತರದ ನಿಲುವಿನ, ಶಕ್ತಿಶಾಲಿ, ಯುವ ಪ್ರಭಾವಿ ವ್ಯಕ್ತಿತ್ವದ ಧೊಂಡಿಯನಿಗೆ ಕೆಳದಿಯ ಸಂಸ್ಥಾನದ ಸೈನ್ಯ ಸೇರಲು ಊರಿನ ಜನ ಹುರಿದುಂಬಿಸಿದರು. ಧೊಂಡಿಯ ಕೆಳದಿಯ ಸಂಸ್ಥಾನ...