Skip to main content

Posts

Showing posts with the label His profession is snake catching by this income he is running orphanage his life style and story is misarable

Blog number 1023. ಹಾವು ಹಿಡಿದು ಅನಾಥ ಆಶ್ರಮ ನಡೆಸುವುದನ್ನು ಕೇಳಲು ಸಾಧ್ಯವೇ ಇಲ್ಲ ಆದರೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಜೇನಿ ಎಂಬಲ್ಲಿ ಪದ್ಮಶ್ರೀ ಅನಾಥ ಆಶ್ರಮ ನಡೆಸುವ ಸ್ನೇಕ್ ಪ್ರಭಾಕರ್ ವಿಶಿಷ್ಟ ವ್ಯಕ್ತಿ.

            Snake ಪ್ರಬಾಕರ್ ಹೊಸನಗರ ಜೀನಿ ಎಂಬಲ್ಲಿ ಅನಾಥ ಆಶ್ರಮ ನಡೆಸುತ್ತಿದ್ದಾರೆ, ವಿಷಪೂರಿತ ಹಾವು ಮನೆಯಲ್ಲಿ ಬಂದರೆ ಅದನ್ನ ಹಿಡಿದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಡುತ್ತಾರೆ.           ಅನಾಥರನ್ನ ಇವರು ಜೋಪಾನ ಮಾಡುತ್ತಾರೆ, ದಲಿತ ವಗ೯ಕ್ಕೆ ಸೇರಿದ ಇವರು ಮಾಡುವ ಸೇವೆಯನ್ನ ಅನೇಕರು ಟೀಕಿಸುತ್ತಾರೆ, ಇವರ ವೇಷ ಭೂಷಣ ನೋಡಿ ಗೇಲಿ ಮಾಡುತ್ತಾರೆ.       ಗೆಳೆಯರಾದ ಇವರು ಮೊನ್ನೆ ಬಂದಾಗ ಮದ್ಯಾಹ್ನ ಮನೆಗೆ ಊಟಕ್ಕೆ ಕರೆದೊಯ್ದಾಗ ಗೊತ್ತಾಗಿದ್ದು ಇವರು ಸಸ್ಯಹಾರಿ ಅಂತ, ಮದ್ಯ, ತಂಬಾಕು, ಸಿಗರೇಟು ಕೂಡ ಇಲ್ಲ.      ಊಟದ ಮಧ್ಯೆ ಜನರು ಇವರ ಬಗ್ಗೆ ಇವರ ಹಿಂದೆ ಆಡಿ ಕೊಳ್ಳುತ್ತಿದ್ದ ಕುಹಕದ ಸತ್ಯ ಅರಿಯಲು ಅನೇಕ ನನ್ನ ಪ್ರಶ್ನೆಗೆ ಅವರು ಉತ್ತರಿಸಿದರು.     ಅದೇನೆಂದರೆ ...... ಇವರಿಗೆ 7 ವಷ೯ ವಯಸ್ಸು ಆದಾಗ ಶೆಟ್ಟರು ಎಂಬ ಹೋಟೆಲ್ ಭಟ್ಟರು ಇವರನ್ನ ತೀಥ೯ಹಳ್ಳಿ ಸಮಿಪದ ಆರಗದ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದರಂತೆ ಒಂದೆರಡು ವಷ೯ದಲ್ಲಿ ಆ ಹೋಟೆಲ್ ಮಾಲಿಕರಿಗೂ ಶೆಟ್ಟರಿಗೂ ಜಗಳವಾದಾಗ ಆ ಹೋಟೆಲ್ ಬಿಟ್ಟು ಮಂಗಳೂರಿಗೆ ಶೆಟ್ಟರ ಜೊತೆ ಹೋದರಂತೆ.      ಇವರ 2 ವಷ೯ದ ದುಡಿಮೆ ಶೆಟ್ಟರು ಖಚು೯ ಮಾಡಿಕೊಂಡಿದ್ದರಂತೆ. ಮಂಗ...