Blog number 1023. ಹಾವು ಹಿಡಿದು ಅನಾಥ ಆಶ್ರಮ ನಡೆಸುವುದನ್ನು ಕೇಳಲು ಸಾಧ್ಯವೇ ಇಲ್ಲ ಆದರೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಜೇನಿ ಎಂಬಲ್ಲಿ ಪದ್ಮಶ್ರೀ ಅನಾಥ ಆಶ್ರಮ ನಡೆಸುವ ಸ್ನೇಕ್ ಪ್ರಭಾಕರ್ ವಿಶಿಷ್ಟ ವ್ಯಕ್ತಿ.
Snake ಪ್ರಬಾಕರ್ ಹೊಸನಗರ ಜೀನಿ ಎಂಬಲ್ಲಿ ಅನಾಥ ಆಶ್ರಮ ನಡೆಸುತ್ತಿದ್ದಾರೆ, ವಿಷಪೂರಿತ ಹಾವು ಮನೆಯಲ್ಲಿ ಬಂದರೆ ಅದನ್ನ ಹಿಡಿದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಡುತ್ತಾರೆ.
ಅನಾಥರನ್ನ ಇವರು ಜೋಪಾನ ಮಾಡುತ್ತಾರೆ, ದಲಿತ ವಗ೯ಕ್ಕೆ ಸೇರಿದ ಇವರು ಮಾಡುವ ಸೇವೆಯನ್ನ ಅನೇಕರು ಟೀಕಿಸುತ್ತಾರೆ, ಇವರ ವೇಷ ಭೂಷಣ ನೋಡಿ ಗೇಲಿ ಮಾಡುತ್ತಾರೆ.
ಗೆಳೆಯರಾದ ಇವರು ಮೊನ್ನೆ ಬಂದಾಗ ಮದ್ಯಾಹ್ನ ಮನೆಗೆ ಊಟಕ್ಕೆ ಕರೆದೊಯ್ದಾಗ ಗೊತ್ತಾಗಿದ್ದು ಇವರು ಸಸ್ಯಹಾರಿ ಅಂತ, ಮದ್ಯ, ತಂಬಾಕು, ಸಿಗರೇಟು ಕೂಡ ಇಲ್ಲ.
ಊಟದ ಮಧ್ಯೆ ಜನರು ಇವರ ಬಗ್ಗೆ ಇವರ ಹಿಂದೆ ಆಡಿ ಕೊಳ್ಳುತ್ತಿದ್ದ ಕುಹಕದ ಸತ್ಯ ಅರಿಯಲು ಅನೇಕ ನನ್ನ ಪ್ರಶ್ನೆಗೆ ಅವರು ಉತ್ತರಿಸಿದರು.
ಅದೇನೆಂದರೆ ...... ಇವರಿಗೆ 7 ವಷ೯ ವಯಸ್ಸು ಆದಾಗ ಶೆಟ್ಟರು ಎಂಬ ಹೋಟೆಲ್ ಭಟ್ಟರು ಇವರನ್ನ ತೀಥ೯ಹಳ್ಳಿ ಸಮಿಪದ ಆರಗದ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದರಂತೆ ಒಂದೆರಡು ವಷ೯ದಲ್ಲಿ ಆ ಹೋಟೆಲ್ ಮಾಲಿಕರಿಗೂ ಶೆಟ್ಟರಿಗೂ ಜಗಳವಾದಾಗ ಆ ಹೋಟೆಲ್ ಬಿಟ್ಟು ಮಂಗಳೂರಿಗೆ ಶೆಟ್ಟರ ಜೊತೆ ಹೋದರಂತೆ.
ಇವರ 2 ವಷ೯ದ ದುಡಿಮೆ ಶೆಟ್ಟರು ಖಚು೯ ಮಾಡಿಕೊಂಡಿದ್ದರಂತೆ. ಮಂಗಳೂರಲ್ಲಿ ಕೆಲಸ ಸಿಗದಿದ್ದಾಗ ಮುಂಬೈಗೆ ಹೋಗೋಣ ಅಂತ ಇಬ್ಬರು ಲಾರಿ ಹತ್ತಿದ್ದರಂತೆ.
ಬೆಳಿಗ್ಗೆ ಮುಂಬೈಯಲ್ಲಿ ಇವರಿಗೆ ಎಚ್ಚರವಾದಾಗ ಶೆಟ್ಟರು ನಾಪತ್ತೆ!! ಇಡಿ ದಿನ ದಿಕ್ಕು ಕಾಣದೆ ಅಳುವಾಗ ವೃದ್ದ ಬಿಕ್ಷಕನೋವ೯ ಇವರನ್ನ ಕೆಲ ದಿನ ಸಾಕುತ್ತಾರೆ.
ನಂತರ ಸಣ್ಣ ಕೆಲಸಕ್ಕೆ ಸೇರಿಸುತ್ತಾನೆ, ರಾತ್ರಿ ರೈಲು ನಿಲ್ಯಾಣ, ಬಸ್ ನಿಲ್ಡಣಗಳಲ್ಲಿ ಅನೇಕ ವಷ೯ ಕಳೆಯುತ್ತಾರೆ, ಆಗಲೇ ಅವರ ಮನಸ್ಸಿನಲ್ಲಿ ಒಂದು ಗುರಿ ರೂಪ ತಳೆಯುತ್ತದೆ, ನಿತ್ಯ ಅಲ್ಲಿ ಅನಾಥರನ್ನ ನೋಡಿದಾಗ ನಾನು ಇಂತವರ ಸೇವೆ ಮಾಡಲು ಅನಾಥ ಆಶ್ರಮ ಮಾಡಬೇಕಂತ.
ಅನೇಕ ಹೋಟೆಲ್ಗಳಲ್ಲಿ ಕೆಲಸ ಮಾಡಿದ್ದೆ ಈಗ ಅನಾಥ ಶ್ರಮದ ಕನಸು ನನಸಾಗಿದೆ,ಅನೇಕ ದಾನಿಗಳು ಸಹಕಾರ ನೀಡುತ್ತಿದ್ದಾರೆ, ಹಾವು ಹಿಡಿದಾಗ ಜನ ನೀಡುವ ಹಣ ಕೂಡ ಆಶ್ರಮಕ್ಕೆ ಕೊಡುತ್ತೇನೆ ಅಂದರು.ಅನಾಥ ಆಶ್ರಮವನ್ನ ಇವರು, ಇವರ ಪತ್ನಿ ಮತ್ತು ತಾಯಿ ಸೇರಿ ನಡೆಸುತ್ತಾರೆ.
ಒಮ್ಮೆ ಸಾಗರದಲ್ಲಿ ಕಾರ್ ರಿಪೇರಿ ಮಾಡಿಸಲು ಹೋದಾಗ ಪಕ್ಕದ ಮನೆಯ ಒಳಗೆ ಬಂದಿದ್ದ ಮಿಡಿ ನಾಗರ ಹಿಡಿದು ಅವರು ನೀಡಿದ ಚೀಲದಲ್ಲಿ ಹಾಕಿದ್ದಾರೆ ಆದರೆ ಚೀಲ ತೂತಾಗಿದ್ದು ಯಾರಿಗೂ ಗೊತ್ತಿರಲಿಲ್ಲ ಆ ಮಿಡಿ ನಾಗರದ ಕಡಿತದಿಂದ ಇವರು ಬದುಕಿ ಬಂದಿದ್ದೇ ಹೆಚ್ಚು.
ಕಳೆದ ವರ್ಷ ಇವರ ಆಶ್ರಮದ ಸಮೀಪದ ಕೂಲಿ ಕಾರ್ಮಿಕರ ಕಾಲೋನಿಯಲ್ಲಿ ನಿತ್ಕ ಬರುತ್ತಿದ್ದ ಕಾಳಿಂಗ ಸರ್ಪ ಹಿಡಿಯುವಾಗ ಆಯ ತಪ್ಪಿ ಬಿದ್ದು ಎರೆಡು ಸಾರಿ ಅದು ಹೆಡೆ ಬಿಚ್ಚಿ ಅಕ್ರಮಣ ಮಾಡಿದಾಗ ಅದೃಷ್ಟವಶಾತ್ ಕ್ಷಣ ಮಾತ್ರದಲ್ಲಿ ತಪ್ಪಿಸಿಕೊಂಡು ದೈಯ೯ಗೆಡದೆ ಎಡ ಕೈಯಿಂದ ಕಾಳಿಂಗ ಸರ್ಪದ ಕುತ್ತಿಗೆಯನ್ನೆ ಹಿಡಿದದ್ದು ಶಿವಮೊಗ್ಗದ ಕ್ರೀಡಾಪಟು ವೈಟ್ ಲಿಪ್ಟರ್ ಮಂಜುನಾಥ ಗೌಡರು ವಿಡಿಯೋದಲ್ಲಿ ಸೆರೆ ಹಿಡಿದದ್ದು ವಿಶ್ವದಾದ್ಯಂತ ವೈರಲ್ ಆಗಿತ್ತು.
https://youtu.be/teUwX3R4ptc
ಈ ತಿಂಗಳಿಂದ (ಅಕ್ಟೋಬರ್ 2016ರಿಂದ) ಪ್ರತಿ ತಿಂಗಳು ಈ ಅನಾಥ ಆಶ್ರಮಕ್ಕೆ 100 kg ಅಕ್ಕಿ ನೀಡಬೇಕೆಂದು ತೀಮಾ೯ನಿಸಿದ್ದೇನೆ.
Comments
Post a Comment