Blog number 1003. ಕುಡುಕ ಮತ್ತು ಕುಡಿಯೋರು ಬೇರೆ ಬೇರೆ ಆದರೆ ಕುಡಿಯೋರೆಲ್ಲ ಒಂದೇ ಎಂಬ ಭಾವನೆ ಇದೆ, ಮದ್ಯಪಾನ ಮಾಡುತ್ತೇನೆ ಎಂದು ಹೇಳಲು ಅಂಜಿಕೆ ಏಕೆ ?
ಒಮ್ಮೆ ಸಮೀಪದ ಮುರುಘಾಮಠದಲ್ಲಿ ದಮ೯ಸ್ಥಳ ಸಂಘದವರು ಮಧ್ಯಪಾನ ನಿಮೂ೯ಲನ ಸಭೆ ಹಮ್ಮಿಕೊಂಡಿದ್ದರು ಅಲ್ಲಿ ಅನೇಕ ಕುಡುಕರನ್ನ ಬಲತ್ಕಾರವಾಗಿ ಹಿಡಿದು ಕೊಂಡು ಹೋಗಿ ಶಿಬಿರದಲ್ಲಿ ಅವರನ್ನ ಕುಡಿತದಿಂದ ವಿಮುಕ್ತಿ ಮಾಡುವ ಕಾಯ೯ಕ್ರಮ ಅದು.
ಈ ಶಿಭಿರಕ್ಕೆ ನಮ್ಮ ಕೆಲಸದ ಅಡೂರಿನ ಹೊರಿ ಮಂಜನನ್ನ ಮೂರನೆ ಬಾರಿ ಹಿಡಿದು ಕೊಂಡು ಹೋಗಿದ್ದರು, ಪ್ರತಿ ಬಾರಿಯೂ ಸಂಸ್ಥೆಯವರು ವಿಫಲರಾಗಿದ್ದರು, ಹೊರಿ ಮಂಜ ಅಲ್ಲಿ ದಮ೯ಸ್ಥಳ ದೇವರ ಆಣೆ ಹಾಕಿಸಿದ್ದರು ಅದಕ್ಕೆ ಒಂದೂ ಕಾಲು ರೂಪಾಯಿ ತಪ್ಪು ಕಾಣಿಕೆ ಕಟ್ಟಿನೇ ನಾನು ಬ್ರಾಂಡಿ ಕುಡಿದು ಬಂದೆ ಅಂತ ಇದ್ದ.
ಈ ಶಿಬಿರದ ಸಮಾರೋಪ ಸಮಾರಂಭಕ್ಕೆ ನನ್ನ ಅತಿಥಿ ಆಗಿ ಕರೆಯಲು ನನ್ನ ಶಿಷ್ಯರು ತೀಮಾ೯ನಿಸಿ ದಮ೯ಸ್ಥಳ ಸಂಸ್ಥೆಯ ಸ್ಥಳಿಯ ಕಾಯ೯ಕತ೯ರೋOದಿಗೆ ಬಂದಿದ್ದರು.
ನಾನು ಸಂಪೂಣ೯ ಮಧ್ಯ ವಜ೯ನೆ ಮಾಡಿಲ್ಲ, ಹವ್ಯಾಸಿ ಮಧ್ಯಪಾನಿ ಅಂತ ಗೊತ್ತಿದ್ದು ಶಿಷ್ಯರು ನನ್ನನ್ನ ಮಧ್ಯ ವಜ೯ನ ಶಿಭಿರದ ಅತಿಥಿ ಮಾಡಲು ಹೊರಟಿದ್ದರು.
ನಾನು ಅವರಿಗೆಲ್ಲ ನಿಮ್ಮ ಶಿಭಿರದ ಉದ್ದೇಶಕ್ಕೆ ವಿರುದ್ಧವಾಗಿ ನನ್ನ ಆಮಂತ್ರಿಸುವುದು ಸರಿ ಅಲ್ಲ , ನಾನು ಮದ್ಯಪಾನ ನಿಷೇದದ ಪರವಾಗಿಲ್ಲ ಆದರೆ ಮಧ್ಯಪಾನ ಸಂಯಂಮದ ಪರವಾಗಿದ್ದೇನೆ ಹಾಗಾಗಿ ಬರುವುದಿಲ್ಲ ಅಂತ ನಯವಾಗಿ ನಿರಾಕರಿಸಿದೆ, ಅಲ್ಲಿ ಶಿಭಿರದಲ್ಲಿ ನನ್ನ ಶಿಷ್ಯನಾದ ಹೋರಿ ಮಂಜನ ಎದರು ನನಗೆ ಆತ್ಮವಂಚನೆ ಸಾಧ್ಯವಿಲ್ಲ ಎಂದೆ.
ನಂತರ ಹೊಸಗುಂದದ ಉಮಾ ಮಹೇಶ್ವರ ದೇವಸ್ಥಾನದ ಸಿ.ಎಲ್.ಎನ್.ಶಾಸ್ತ್ರಿಗಳು ನನ್ನ ಸ್ಥಾನ ಸ್ವೀಕರಿಸಿ ಮಧ್ಯಪಾನದ ದುಷ್ಪರಿಣಾಮದ ಬಗ್ಗೆ ಸೊಗಸಾದ ಬಾಷಣ ಮಾಡಿದ್ದು ಪತ್ರಿಕೆಗಳಲ್ಲಿ ನೋಡಿದೆ.
ಕೆಲ ದಿನದ ನಂತರ ಹೋರಿ ಮಂಜ ಮಧ್ಯವಜ೯ನ ಶಿಭಿರದ ಉದ್ದೇಶ ಬುಡಮೇಲು ಮಾಡಿ, ದೇವರಿಗೆ ತಪ್ಪು ಕಾಣಿಕೆ ಕಟ್ಟಿ ಪ್ರತ್ಯಕ್ಷ ಆಗಿದ್ದ, ನೀವು ಇಂತ ಕಾಯ೯ಕ್ರಮಕ್ಕೆ ಬರಲ್ಲ ಅಂತ ಚಾಲೆಂಜ್ ಕಟ್ಟಿದ್ದೆ ಹoಗೆ ಆಯಿತು ಅಂದ.
ಇದೆಲ್ಲ ಯಾಕೆ ನೆನಪಾಯಿತೆಂದರೆ ನಮ್ಮ ಜೀವನದಲ್ಲಿ ನಾವು ಒಂದಲ್ಲ ಒಂದು ಸುಳ್ಳು ಹೇಳುತ್ತನೇ ಇರುತ್ತೇವೆ, ಕುಡಿಯುತ್ತಿದ್ದರು ನಾನು ಕುಡಿಯಲ್ಲ ಅಂತ ಅಷ್ಟೆ ಅಲ್ಲ ವೇದಿಕೆಯಲ್ಲಿ ಭಾಷಣಕೂಡ.
ನಾನು ಕುಡುಕ ಅಲ್ಲ ಆದರೆ ಬೇಕಾದಾಗ ಕುಡಿಯುತ್ತೀನಿ ಅಂತ ಸತ್ಯ ಹೇಳಲಿಕ್ಕೆ ತುಂಬಾ ದೈಯ೯ ಮಾಡಿದೆ ಇವತ್ತು.
Comments
Post a Comment