ನನ್ನ ಊರು ಮನೆ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ, ರಾ.ಹೆ. 206 ಹೊನ್ನಾವರ ಬೆಂಗಳೂರು ಹೆದ್ದಾರಿಯಲ್ಲಿದೆ ಒಂದು ಕಾಲದಲ್ಲಿ ಆನಂದಪುರಂ, ಯಡೇಹಳ್ಳಿ ಮತ್ತು ಆಚಾಪುರ ಸೇರಿ ವಿಲೇಜ್ ಪಂಚಾಯತ್ ಆಗಿತ್ತು ಈ ಮೂರು ಪ್ರತ್ಯೇಕ ಗ್ರಾ.ಪಂ.ಮಾಡಿದ್ದಾರೆ, ಈ ಮೂರು ಗ್ರಾ.ಪಂ. ಸೇರಿಸಿ ಪಟ್ಟಣ ಪಂಚಾಯತ್ ಮಾಡುವ ಅಹ೯ತೆ ಇದ್ದರೂ ಆಳುವವರು ಯಾಕೋ ಮನಸ್ಸು ಮಾಡಿಲ್ಲ.
ಮೊನ್ನೆ ನನ್ನ ಶಿಷ್ಯ ನಾರೀ ಲೋಕಪ್ಪ ಬಂದಿದ್ದರು ಈ ಬಾರಿ ನಾಲ್ಕನೇ ಬಾರಿ ಗ್ರಾ.ಪಂ. ಆಯ್ಕೆ ಆಗಿದ್ದಾರೆ, ಸಿಹಿ ಕೊಟ್ಟು ಅಭಿನಂದಿಸಿದೆ.
1995ರಲ್ಲಿ ನಾನು ಜಿ.ಪ.ಸದಸ್ಯನಾಗುವಾಗ ನಾರೀ ಲೋಕಪ್ಪ ಚಿಕ್ಕ ಬಾಲಕ, ಇವರ ತಂದೆ ನಾರಿ ನಾರಾಯಣಪ್ಪ ನನ್ನ ಗೆಳೆಯರು, ಅವರು ಮಂಡಲ್ ಪಂಚಾಯಿತಿ ಸದಸ್ಯರಾಗಿದ್ದಾಗ ಇವರ ಈಡಿಗ ಸಮಾಜದ ಆ ಕಾಲದ ವಿದ್ಯಾವಂತ ಕೋವಿ ನಾರಾಯಣಪ್ಪರನ್ನ ಅಧ್ಯಕ್ಷರನ್ನಾಗಿಸದೆ ಬೇರೆಯವರನ್ನ ಆಯ್ಕೆ ಮಾಡುವ ಸಂದಭ೯ದಲ್ಲಿ ಇವರು ನನ್ನ ಸಹಾಯ ಬಯಸಿ ಬಂದಿದ್ದರು, ಬಹುಮತಕ್ಕೆ ಬೇಕಾಗಿದ್ದ 3 ಸದಸ್ಯರು ನನ್ನ ಹತ್ತಿರ ಇದ್ದರು ಆಗ ನಾನು, ಒಂದು ಕಾಲದ ದೀಘ೯ಕಾಲದ ಅಧ್ಯಕ್ಷರಾಗಿದ್ದ ಅಡೂರು ವಿಲೇಜ್ ಪಂಚಾಯತ್ ನ #ಜಮ್ಮಿನ_ಕೇವಿ_ಈರನಾಯ್ಕರು ಮತ್ತು ಒಂದು ಕಾಲದ ಸಾಗರ ತಾಲ್ಲೂಕ್ ಬೋಡ್೯ ಸದಸ್ಯರಾಗಿದ್ದ #ತಾರಸಿಕ್ಕೆ_ಹಿರಿಯಣ್ಣ_ನಾಯಕರು ನಾರೀ ನಾರಾಯಣಪ್ಪರೇ ಅಧ್ಯಕ್ಷರಾಗಬೇಕೆಂದರೂ ನಾರಿ ನಾರಾಯಣಪ್ಪ ಒಪ್ಪಲಿಲ್ಲ "ಇಲ್ಲ ವಿದ್ಯಾವಂತ ನಮ್ಮ ಸಮಾಜದ ಯುವಕ #ಕೋವಿ_ನಾರಾಯಣಪ್ಪ ರೇ ಆಗಲಿ ಅಂತ ಅಧಿಕಾರ ತ್ಯಾಗ ಮಾಡಿದ ವ್ಯಕ್ತಿ #ನಾರಿ_ನಾರಾಯಣಪ್ಪ.
ಒಟ್ಟು ಕುಟುಂಬದ ಯಜಮಾನರಾಗಿ ಇವರ ದೊಡ್ಡಪ್ಪ ಚಿಕ್ಕಪ್ಪರ ಕುಟುಂಬಕ್ಕೂ ಸರಿ ಸಮನಾಗಿ ಪಾಲು ಮಾಡಿ ಈಗ ಪ್ರತ್ಯೇಕವಾಗಿ ಮೂವರು ಮಕ್ಕಳನ್ನ ಸಂಸ್ಕಾರವಂತರಾಗಿ ಮಾಡಿದ್ದಾರೆ, ಮಕ್ಕಳೂ ಕೃಷಿ ವ್ಯಾಪಾರ ಮಾಡಿ ಕೊಂಡು ಆಸ್ತಿ ತೋಟ ವೃದ್ದಿ ಮಾಡಿದ್ದಾರೆ ವಾಷಿ೯ಕ 20 ರಿಂದ 25 ಲಕ್ಷ ಆದಾಯ ಕೃಷಿಯಲ್ಲಿ ತರುತ್ತಿದ್ದಾರೆ.
ನಾರಿ ಲೋಕಪ್ಪ ದೈವ ಭಕ್ತ, ಗುರು ಹಿರಿಯರೆಂದರೆ ಅಷ್ಟೇ ಗೌರವ, ಕೃಷಿಯಲ್ಲಿ ಅನುಭವಿ, ಒಳ್ಳೇ ಶಿಕಾರಿಗಾರ, ಓದು ಬರಹದಲ್ಲಿ, ಕಾನೂನು ತಿಳುವಳಿಕೆಯಲ್ಲಿ ಜ್ಞಾನವಂತ ಹಾಗೆಯೆ ಅವ್ಯವಹಾರ ಲಂಚಗಳಿಂದ ಬಲು ದೂರ ಇರುವ ಸಜ್ಜನ ಈ ಬಾರಿ ಆದರೂ ನಮ್ಮ ಗ್ರಾಮ ಪಂಚಾಯತ್ ಗೆ ಒ0ದು ಅವಧಿಗಾದರೂ ಅದ್ಯಕ್ಷರಾಗಲಿ ಅಂತ ಹಾರೈಸುತ್ತೇನೆ.
ಪಾಲಿ೯ಮೆಂಟ್ ಅಥವ ಶಾಸನ ಸಭೆಗೆ ಪ್ರತಿ ಮತದಾರನನ್ನ ಕಾಡಿ ಬೇಡಿ ಮತ ಪಡೆಯುವ ಅವಶ್ಯಕತೆ ಇರುವುದಿಲ್ಲ ಹಣ, ಜಾತಿ, ಪಕ್ಷಗಳ ಪ್ರಬಾವ ಇರುತ್ತದೆ ಲಕ್ಷಾಂತರ ಮತಗಳ ನೂರಾರು ಹಳ್ಳಿ ಊರು ಇರುತ್ತದೆ. ಒಂದು ಊರಿನ ಎಲ್ಲಾ ಮತ ಕೊಡದಿದ್ದರೂ ಇನ್ನೊಂದು ಊರಿನಲ್ಲಿ ಪಡೆಯುವ ಸಾಧ್ಯತೆ ಇರುತ್ತದೆ ಆದರೆ ನೂರಿನ್ನೂರು ಮತ ಕ್ಷೇತ್ರದಲ್ಲಿ ಹಾಗಲ್ಲ ತನ್ನ ಜಾತಿ, ಪಕ್ಷಗಳ ವ್ಯಕ್ತಿಗಳೇ ಇವರ ಎದರು ಸ್ಪದಿ೯ಸಿರುತ್ತಾರೆ, ಬೆಳಿಗ್ಗೆ ಭರವಸೆ ನೀಡಿದ ಮತದಾರ ಸಂಜೆ ಬದಲಾಗುತ್ತಾನೆ, ಚುನಾವಣೆ ಪ್ರಾರಂಭದ ದಿನದಿಂದ ಅಜಿ೯ ಹಾಕಲು, ಪ್ರಚಾರ ಮಾಡಲು ಬಂದವ ಚುನಾವಣಾ ಮತ ಕಟ್ಟೆಯಲ್ಲಿ ಮತದಾನದ ದಿನ ಬದಲಾಗಿರುತ್ತಾನೆ, ಪ್ರತಿ ಮತದಾರನ ಮೇಲೂ ಎಲ್ಲಾ ಕಡೆಯಿಂದ ಒತ್ತಡ ತರುತ್ತಾರೆ ಹಾಗಾಗಿ ಗ್ರಾ.ಪಂ.ಚುನಾವಣೆ ಅಷ್ಟು ಸುಲಭವಲ್ಲ ಇದನ್ನು ಒಮ್ಮೆ ಸ್ಪದೆ೯ ಮಾಡಿಯೇ ಅನುಭವ ಪಡೆಯಬೇಕು.
ರಾಜಕೀಯ ಪಕ್ಷಗಳೂ ಅಷ್ಟೆ ಈ ಚುನಾವಣೆಯಲ್ಲಿ ಯಾರೂ ಅವರ ನಿಯಂತ್ರಣಕ್ಕೆ ಸಿಗುವುದಿಲ್ಲ ಆದ್ದರಿಂದ ಚುನಾವಣಾ ಪಲಿತಾಂಶದ ನಂತರ ಗೆದ್ದವರನ್ನ ಅಭಿನಂದಿಸುವ ಕಾರಣದಿಂದ ಕರೆತಂದು ನಂತರ ನಮ್ಮ ಪಕ್ಷದಿಂದ ಹೆಚ್ಚು ಸದಸ್ಯರು ಆಯ್ಕೆ ಆಗಿದ್ದಾರೆಂದರೂ ಗ್ರಾ.ಪಂ.ಗಳಲ್ಲಿ ಗೆದ್ದವರ ಕೆಮಿಸ್ಟ್ರಿ ಬೇರೆಯೇ ಆಗಿರುತ್ತದೆ ಅದು ಅಧ್ಯಕ್ಷರ ಚುನಾವಣೆ ಮುಗಿಯಬೇಕು.
ನಾನು ರಾಜಕೀಯದಿಂದ ದೂರ ಇದ್ದರೂ, ಮತ ಹಾಕದಿದ್ದರೂ ನನ್ನ ವಿಚಾರಗಳಿಗೆ ಇಷ್ಟ ಪಟ್ಟ ಅನೇಕ ಶಿಷ್ಯರು ಗೆದ್ದು ಬಂದು ಶುಭ ಸುದ್ದಿ ತಿಳಿಸಿದಾಗ ನನಗೆ ಸಂತೋಷ ಆಗುತ್ತೆ ಅವರಿಗೆ ನಾನು ಹೇಳುವುದೊಂದೇ ಗ್ರಾಮ ಪಂಚಾಯತ್ ಆಕ್ಟ್ ಬುಕ್ ಖರೀದಿಸಿ ಓದಿಕೊಳ್ಳಿ ಅಂತ.
Comments
Post a Comment