Blog number 1006. ಕರಾವಳಿಯ ಹುಲಿ ವೇಷ, ಕೇರಳದ ಪುಲಿ ನಲಿಕೆ, ಒಡಿಷಾದ ಬಾಗ್ ನಾಚ್, ನಾಗಪುರದ ಮಾನವೀ ವಾಗ್, ತಮಿಳುನಾಡಿನ ಪುಲಿಯಟ್ಟಮ್ ಗಳು ಮನುಷ್ಯ ಹುಲಿಯಾಗಿ ಬದಲಾಗಿ ದೇವಿಯ ಸೇವೆ ಮಾಡುವುದು ಮತ್ತು ದುಗಾ೯ ದೇವಿ ವಾಹನ ಹುಲಿ ಕೂಡ.
#ದಸರಾ_ಕೃಷ್ಣಜನ್ಮಾಷ್ಟಮಿ_ಗಣೇಶಚತುರ್ಥಿ_ಓಣಂಗಳಲ್ಲಿ_ಹುಲಿವೇಷ
#ದುರ್ಗಾದೇವಿಯ_ವಾಹನ_ಹುಲಿ
#ಕರಾವಳಿಯ_ಹುಲಿವೇಷ_ಕೇರಳದ_ಪುಲಿಕಲಿ
#ಹುಲಿ_ವೇಷ_ಮೂಲ_ಎಲ್ಲಿ ?
ನಮ್ಮ ಆನಂದಪುರಂನಲ್ಲಿ ಪ್ರತಿ ದಸರಾದಲ್ಲಿ ಹುಲಿ ವೇಷ ಹಾಕುತ್ತಿದ್ದವರು ಸ್ಕೂಲ್ ಜಗನಾಥಣ್ಣ ಅದೂ ಆಯಿಲ್ ಪೇಯಿಂಟ್ ನಲ್ಲಿ ಹುಲಿಯಾಗಿ ಕುಣಿಯುತ್ತಿದ್ದರು ಜೊತೆಗೆ ಕುಪ್ಪಣ್ಣನ ಹಲಿಗೆಯ ನಕ್ಕ-ಚಕ್ಕ ಆಕರ್ಷಣೆ ಊರಿಗೆಲ್ಲ ಮನೋರಂಜನೆ ಆಗಿರುತ್ತಿತ್ತು.
ಸಾಗರದ ಮುನ್ಸಿಪಲ್ ಆಫೀಸಲ್ಲಿ ನಮ್ಮ ಸಂಬಂದಿಗಳಾದ ರಾಮಕೃಷ್ಣಣ್ಣ ಕೆಲಸದಲ್ಲಿದ್ದರು ಅವರು ಪ್ರತಿ ದಸರಾದಲ್ಲಿ ಮತ್ತು ಎಳ್ಳಮಾವಸ್ಯೆಯಲ್ಲಿ ತೀರ್ಥಳ್ಳಿಗೆ ತಪ್ಪದೇ ಹೋಗಿ ಹುಲಿವೇಶ ಹಾಕುತ್ತಿದ್ದರು.
ಈ ಹುಲಿ ವೇಷ ಏಕೆ? ಅದರ ಮೂಲ ಎಲ್ಲಿ? ಎಂಬ ಪ್ರಶ್ನೆಗಳಿಗೆ ಉತ್ತರ ಕೂಡ ಆಸಕ್ತಿದಾಯಕವಾಗಿದೆ.
ಕರಾವಳಿಯಲ್ಲಿ ನವರಾತ್ರಿಯಲ್ಲಿ ಮನುಷ್ಯ ಹುಲಿಯಾಗಿ ಬದಲಾಗಿ ದೇವಿ ಸೇವೆ ಮಾಡುವುದೇ ಹುಲಿ ವೇಷ ಮತ್ತು ದುರ್ಗಾ ದೇವಿಯ ವಾಹನ ಹುಲಿ ಎಂಬುದು ಇಲ್ಲಿ ಗಮನಾರ್ಹ ವಿಷಯವಾಗಿದೆ.
200 ವರ್ಷದ ಹಿಂದೆ ಕೇರಳದ ಮಹಾರಾಜ ರಾಮ ವರ್ಮ ಸಕ್ತಾನ ಪಂಪಪುರವನ್ ಕೇರಳದ ದೊಡ್ಡ ಸಂಖ್ಯೆಯ ಕಲಾವಿದರಿಗೆ ತರಬೇತಿ ನೀಡಿ ಹುಲಿ ವೇಷವನ್ನು ಒಣಂ ಹಬ್ಬದ ನಾಲ್ಕನೆ ದಿನ ದೈಯ೯ - ಶೌರ್ಯದ ಸಂಕೇತವಾಗಿ ನಡೆಸಿದ್ದೆ ಮಲೆಯಾಳಂನಲ್ಲಿ ಪುಲಿಕಲಿ ಎಂದೇ ಇವತ್ತಿಗೂ ಪ್ರಸಿದ್ಧಿ ಆಗಿದೆ.
ಆದರೆ ಈ ಹುಲಿ ವೇಷ ಆಯಾ ಪ್ರಾದೇಶಿಕ ಹೆಸರಲ್ಲಿ ಒಡಿಷಾದ ಗ೦ಜಾಂ ಡಿಸ್ಟ್ರಿಕ್ಟ್ ನಲ್ಲಿ ಬಾಗ್ ನಾಚ್ ಅಂತ, ಮಹಾರಾಷ್ಟ್ರದ ನಾಗಪುರದಲ್ಲಿ ಮಾನವಿ ವಾಗ್, ತಮಿಳುನಾಡಿನಲ್ಲಿ ಪುಲಿಯಾಟ್ಟಮ್ ಹೆಸರಿನಲ್ಲಿ ಭಾರತದಲ್ಲಿ ಹುಲಿ ವೇಷಗಳು ನಡೆಯುತ್ತಿದೆ ಅದು ಯಾವಾಗಿಂದ ಪ್ರಾರಂಭ ಆಗಿದೆ ಎಂಬ ಮಾಹಿತಿ ಇಲ್ಲ.
ನೇಪಾಳದಲ್ಲಿ, ಚೈನಾದಲ್ಲಿ, ಹಾಂಕಾಂಗ್, ಜಪಾನ್, ಥಾಯ್ ಲ್ಯಾಂಡ್ ಅಷ್ಟೆ ಅಲ್ಲ ಕೊಲ೦ಬಿಯಾದ ಕಾರ್ನಿವಲ್ ನಲ್ಲೂ ಹುಲಿ ವೇಷಗಳಿದೆ.
ಹುಲಿ ವೇಷದಾರಿಗಳು ಬಾರ್ ಗೆ ಹೋಗಿ ಬ್ರಾಂಡಿ ಕುಡಿಯುವ ಪನ್ನಿ ಸಂದರ್ಭಗಳ ಪೋಟೋಗಳು ತಮಾಷೆ ಅನ್ನಿಸಿ ನಗು ತರಿಸುತ್ತದೆ.
ಒಮ್ಮೆ ಮಂಗಳೂರಿಂದ ಬರುವಾಗ ಕಾಪು ಸಮೀಪದ ಹೋಟೆಲ್ ನಲ್ಲಿ ಊಟ ಮಾಡುವಾಗ 8-10 ಜನರ ಹುಲಿ ವೇಷದ ತಂಡ ಬಾಯಾರಿಸಿಕೊಳ್ಳಲು ಬಾರ್ ಗೆ ಬಂದಾಗ ಎಲ್ಲಾ ಹುಲಿಗಳು ಕುಡಿದ ಪಾನಿಯದ ಬಿಲ್ ನಾನೇ ಕೊಟ್ಟಿದ್ದು ಒಂದು ಗಮ್ಮತ್ತಿನ ಸನ್ನಿವೇಷ ಆಗಿತ್ತು.
ಈಗೆಲ್ಲ ಮೊದಲಿನ ರೀತಿ ದೇಹದ ಚರ್ಮಕ್ಕೆ ಅಪಾಯಕಾರಿ ಆದ ಸೀಸದ ಅಂಶದ ಆಯಿಲ್ ಪೇಯಿಂಟ್ ಬಳಸುವುದಿಲ್ಲ, ಸಿನಿಮಾ ನಾಟಕ ಕ್ಷೇತ್ರದಲ್ಲಿ ಬಳಸುವ ವಾಟರ್ ಬೇಸ್ ಬಣ್ಣಗಳಿಂದ ಈಗಿನ ಹುಲಿ ವೇಷದಾರಿಗಳು ಸೇಪ್ ಆಗಿದ್ದಾರೆ.
Comments
Post a Comment