#ಆನಂದಪುರಂ_ಹೋಬಳಿ_ಬ್ರಹ್ಮಶ್ರೀ_ನಾರಾಯಣಗುರು_ಈಡಿಗ_ಸಂಘ #ಪ್ರಜ್ಞಾವಂತ_ಯುವಕರ_ಸಂಘಟನೆ #ಹೊಸ_ಅನುಭವ_ಹೊಸ_ತಲೆಮಾರಿನ_ವಿದ್ಯಾವಂತ_ಯುವಕರಿಂದ... #narayanguru #anandapuram #sagara #idigasanga #janardhanpujari #kagoduthimmappa ಈ ವಿಚಾರ ಯಾಕೆಂದರೆ ಸಾಮಾನ್ಯವಾಗಿ ನಾನು ನನ್ನ ತಂದೆ ತಾಯಿ ಹೆಸರಲ್ಲಿ ಕಟ್ಟಿಸಿದ ಕಲ್ಯಾಣ ಮಂಟಪ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಅನೇಕ ಜನಪರ ಕಾಳಜಿಯ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುತ್ತೇನೆ ಇದೇ ರೀತಿ ಸ್ಥಳೀಯರಿಗೆ ಆರ್ಥಿಕ ಸಹಾಯವಾಗಲಿ ಎಂಬ ದೃಷ್ಟಿಯಿಂದ ಅವರ ವಿವಾಹ ಇತ್ಯಾದಿ ಕಾರ್ಯಕ್ರಮಗಳಿಗೆ ಕೂಡ ವಿನಾಯಿತಿ ದರದಲ್ಲಿ ಕೆಲವೊಮ್ಮೆ ಸಂಪೂರ್ಣ ಉಚಿತವಾಗಿ ನೀಡುತ್ತೇನೆ ಆದರೆ ಕಾರ್ಯಕ್ರಮದ ನಂತರ ಅವರ್ಯಾರು ಕೃತಜ್ಞತೆ ಬಂದು ಹೇಳುವ ವ್ಯವಧಾನದಲ್ಲಿ ಇರುವುದಿಲ್ಲ, ಸ್ವಲ್ಪ ದಿನದಲ್ಲಿ ಮರೆತುಬಿಡುತ್ತಾರೆ ಇನ್ನು ಕೆಲವರು ಉಚಿತ ರಿಯಾಯಿತಿ ಪಡೆದು ಅಲ್ಲಿ ಬಹಳ ದುಡ್ಡು ಕೇಳುತ್ತಾರೆ ಅಂತ ಅಪವಾದ ಕೂಡ ಮಾಡುತ್ತಾರೆ ಮತ್ತೆ ಕೆಲವರು ಹಣ ಬಾಕಿ ಕೊಡದೆಯೂ ಹೆಚ್ಚು ಹಣ ಪಾವತಿ ಮಾಡಿದ್ದೆವೆಂದು ಅಪಪ್ರಚಾರ ಮಾಡುತ್ತಾರೆ ಇಂತದ್ದೆಲ್ಲ ಬೇಸರ ಮೂಡಿಸದೇ ಇರುವುದಿಲ್ಲ. ಇಡೀ ಜಿಲ್ಲೆಯಲ್ಲೇ ನನ್ನಷ್ಟು ಕಡಿಮೆ ಹಣ ಪಡೆಯುವ ಕಲ್ಯಾಣ ಮಂಟಪ ಬೇರಾವುದೂ ಇಲ್ಲ ಅನ್ನುವವರೂ ಇದ್ದಾರೆ. ಕಳೆದ ಬುಧವಾರ ದಿನಾಂಕ 25 ಸೆಪ್ಟೆಂಬರ್ 2024 ನ...