#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನಂ_14. #ದಿನಾ೦ಕ_14_ಏಪ್ರಿಲ್_2020 #ರಾಜ್ಯದ_30_ಜಿಲ್ಲೆಯಲ್ಲಿ_11_ರೆಡ್, 11 ಗ್ರೀನ್ ಮತ್ತು 8 ಯೆಲ್ಲೋ ಬಣ್ಣದಲ್ಲಿ ಕೊವಿಡ್ - 19 ನ ಪ್ರಸಕ್ತ ಸನ್ನಿವೇಶ ಗುರುತಿಸಲಾಗಿದೆ. #ರೆಡ್_ಸೆಕ್ಟರ್ ನ 11 ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಬೀದರ್, ಉತ್ತರ ಕನ್ನಡ, ಬಾಗಲ್ ಕೊಟೆ, ಕಲಬುಗಿ೯, ಬೆಳಗಾಂ, ವಿಜಯಪುರ ಮತ್ತು ಬಳ್ಳಾರಿ. #ಯೆಲ್ಲೊ_ಸೆಕ್ಟರ್ ನ 8 ಜಿಲ್ಲೆಗಳು ಬೆಂಗಳೂರು ಗ್ರಾಮಾ೦ತರ, ದಾವಣಗೆರೆ, ಕೊಡಗು, ತುಮಕೂರು, ಮಂಡ್ಯ, ಉಡುಪಿ, ದಾರವಾಡ ಮತ್ತು ಗದಗ. #ಗ್ರೀನ್_ಸೆಕ್ಟರ್ ನಲ್ಲಿ ಶಿವಮೊಗ್ಗ, ರಾಮನಗರ, ಚಿತ್ರದುಗ೯, ಹಾವೇರಿ, ಚಾಮರಾಜನಗರ, ಯಾದಗಿರಿ, ಕೋಲಾರ, ಕೊಪ್ಪಳ, ಹಾಸನ, ರಾಯಚೂರು ಮತ್ತು ಚಿಕ್ಕಮಗಳೂರು. ಇಲ್ಲಿ ಕೆಂಪು ಬಣ್ಣದ ಪ್ರದೇಶ ಅತ್ಯ೦ತ ಅಪಾಯಕಾರಿ ವಲಯ ಆಗಿದೆ ಇಲ್ಲಿ ಹೆಚ್ಚು ಪಾಸಿಟಿವ್ ಕೇಸ್ಗಳು ಬ೦ದಿದೆ ಹೆಚ್ಚು ಜನರಿಗೆ ಹರಡಿದೆ ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಮು೦ಜಾಗ್ರತೆ ವಹಿಸಬೇಕಾಗಿದೆ ಹಾಗಾಗಿ ಈ ಪ್ರದೇಶಕ್ಕೆ ಬೇರೆಯವರಿಗೆ ಪ್ರವೇಶ ಇರುವುದಿಲ್ಲ ಈ ಪ್ರದೇಶದವರು ಬೇರೆ ಪ್ರದೇಶಕ್ಕೆ ನಿದ೯ರಿಸಿದ ದಿನಗಳಷ್ಟು ದಿನ ನಿಬ೯೦ದ ವಿದಿಸಲಾಗುತ್ತದೆ ಕೆಂಪು ಪ್ರದೇಶದಲ್ಲೂ ಹೆಚ್ಚು ಸಮಸ್ಯೆ ಇರುವ ಹಾಟ್ ಸ್ಪಾಟ್ ಗಳನ್ನ ಸಂಪೂಣ೯ ಸೀಲ್ ಮಾಡ...