#ಕೊರಾನಾ_ಲಾಕ್_ಡೌನ್_ಡೈರಿ_2020
#ಲೆಟರ್_ನಂ_14.
#ದಿನಾ೦ಕ_14_ಏಪ್ರಿಲ್_2020
#ರಾಜ್ಯದ_30_ಜಿಲ್ಲೆಯಲ್ಲಿ_11_ರೆಡ್, 11 ಗ್ರೀನ್ ಮತ್ತು 8 ಯೆಲ್ಲೋ ಬಣ್ಣದಲ್ಲಿ ಕೊವಿಡ್ - 19 ನ ಪ್ರಸಕ್ತ ಸನ್ನಿವೇಶ ಗುರುತಿಸಲಾಗಿದೆ.
#ರೆಡ್_ಸೆಕ್ಟರ್ ನ 11 ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಬೀದರ್, ಉತ್ತರ ಕನ್ನಡ, ಬಾಗಲ್ ಕೊಟೆ, ಕಲಬುಗಿ೯, ಬೆಳಗಾಂ, ವಿಜಯಪುರ ಮತ್ತು ಬಳ್ಳಾರಿ.
#ಯೆಲ್ಲೊ_ಸೆಕ್ಟರ್ ನ 8 ಜಿಲ್ಲೆಗಳು ಬೆಂಗಳೂರು ಗ್ರಾಮಾ೦ತರ, ದಾವಣಗೆರೆ, ಕೊಡಗು, ತುಮಕೂರು, ಮಂಡ್ಯ, ಉಡುಪಿ, ದಾರವಾಡ ಮತ್ತು ಗದಗ.
#ಗ್ರೀನ್_ಸೆಕ್ಟರ್ ನಲ್ಲಿ ಶಿವಮೊಗ್ಗ, ರಾಮನಗರ, ಚಿತ್ರದುಗ೯, ಹಾವೇರಿ, ಚಾಮರಾಜನಗರ, ಯಾದಗಿರಿ, ಕೋಲಾರ, ಕೊಪ್ಪಳ, ಹಾಸನ, ರಾಯಚೂರು ಮತ್ತು ಚಿಕ್ಕಮಗಳೂರು.
ಇಲ್ಲಿ ಕೆಂಪು ಬಣ್ಣದ ಪ್ರದೇಶ ಅತ್ಯ೦ತ ಅಪಾಯಕಾರಿ ವಲಯ ಆಗಿದೆ ಇಲ್ಲಿ ಹೆಚ್ಚು ಪಾಸಿಟಿವ್ ಕೇಸ್ಗಳು ಬ೦ದಿದೆ ಹೆಚ್ಚು ಜನರಿಗೆ ಹರಡಿದೆ ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಮು೦ಜಾಗ್ರತೆ ವಹಿಸಬೇಕಾಗಿದೆ ಹಾಗಾಗಿ ಈ ಪ್ರದೇಶಕ್ಕೆ ಬೇರೆಯವರಿಗೆ ಪ್ರವೇಶ ಇರುವುದಿಲ್ಲ ಈ ಪ್ರದೇಶದವರು ಬೇರೆ ಪ್ರದೇಶಕ್ಕೆ ನಿದ೯ರಿಸಿದ ದಿನಗಳಷ್ಟು ದಿನ ನಿಬ೯೦ದ ವಿದಿಸಲಾಗುತ್ತದೆ ಕೆಂಪು ಪ್ರದೇಶದಲ್ಲೂ ಹೆಚ್ಚು ಸಮಸ್ಯೆ ಇರುವ ಹಾಟ್ ಸ್ಪಾಟ್ ಗಳನ್ನ ಸಂಪೂಣ೯ ಸೀಲ್ ಮಾಡಲಾಗುತ್ತದೆ.
ಹಳದಿ ಪ್ರದೇಶ ಕೆಂಪು ಪ್ರದೇಶದಷ್ಟು ಅಪಾಯಕಾರಿ ಅಲ್ಲದಿದ್ದರೂ ನಿಲ೯ಕ್ಷ ಮಾಡಿದರೆ ಅಪಾಯಕಾರಿ ವೈರಸ್ ಪ್ರಸರಣಕ್ಕೆ ಕಾರಣವಾದೀತು ಹಾಗಾಗಿ ಸದಾ ಈ ಪ್ರದೇಶ ನಿಗಾದಲ್ಲೇ ಇರಿಸಿ ಕೊಂಡು ಹೆಚ್ಚಿನ ಮುಂಜಾಗೃತೆ ವಹಿಸಿದರೆ ಈ ಪ್ರದೇಶ ಕೋರಾನ ಮುಕ್ತ ಮಾಡಬಹುದು.
ಹಸಿರು ಪ್ರದೇಶದಲ್ಲಿ ಈವರೆಗೆ ಪಾಸಿಟಿವ್ ಕೇಸ್ಗಳು ಪತ್ತೆ ಆಗಿಲ್ಲ, ಕೊರಾನಾ ವೈರಸ್ ಮುಕ್ತ ಪ್ರದೇಶವಾಗಿದೆ ಆದರೆ ಈ ವರೆಗಿನ ಮುಂಜಾಗೃತೆಗೆ ಲೋಪವಾದರೆ ಅಂದರೆ ಸೋ೦ಕಿನವರನ್ನ ಒಳಗೆ ಬಿಟ್ಟುಕೊಂಡರೆ ಇಲ್ಲೂ ತೊ೦ದರೆ ತಪ್ಪಿದ್ದಲ್ಲ.
ಈ ಬಣ್ಣಗಳಲ್ಲಿ ಗುರುತಿಸಿದ ಪ್ರದೇಶಕ್ಕೆ ಅನುಗುಣವಾಗಿ ಸಕಾ೯ರ ತನ್ನದೇ ಮಾನದಂಡದಲ್ಲಿ ಚಿಕಿತ್ಸೆ ವ್ಯವಸ್ಥೆ, ಕೊರಂಟೈನ್, ಸೀಲ್ ಡೌನ್ ಮತ್ತು ಲಾಕ್ ಡೌನ್ ಹಮ್ಮಿಕೊಳ್ಳಲಿದೆ.
ಒಟ್ಟಾರೆ ಮೂರು ಬಣ್ಣದವರು ಮೈ ಮರೆಯುವಂತಿಲ್ಲ.
Comments
Post a Comment