Blog number 1451.25- ಏಪ್ರಿಲ್ -2019 ಪ್ರಜಾವಾಣಿ - DH ಪ್ರಸರಣಾ ವಿಭಾಗದ ಜನರಲ್ ಮ್ಯಾನೇಜರ್ ಓಲಿವರ್ ಲೆಸ್ಲಿ, ಸಂಗಣ್ಣ ಪ್ರಕಾಶ್ ಮತ್ತು ಸಂಜಯ್ ನನ್ನ ಕಛೇರಿಯಲ್ಲಿ
# ಇವತ್ತಿನ ನನ್ನ ಅತಿಥಿಗಳು
ಇವತ್ತು ಬೆಳಿಗ್ಗೆ ಈ ಮಾಗ೯ದಲ್ಲಿ ಪ್ರಯಾಣಿಸುತ್ತಿದ್ದ ಪ್ರಜಾವಾಣಿ DH ನ ಪ್ರಸಾರಣಾ ವಿಭಾಗದ ಜನರಲ್ ಮ್ಯಾನೇಜರ್ - ಒಲಿವರ್ ಲೆಸ್ಲಿ, ಸಂಗಣ್ಣಾ ಪ್ರಕಾಶ್ ಮತ್ತು ಸ೦ಜೀವ್ ನನ್ನ ಕಚೇರಿಗೆ ಬಂದಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಕಾರ ಇಲ್ಲದೆ ಸ್ವತಂತ್ರವಾಗಿ ಲಾಡ್ಜ್, ರೆಸ್ಟೋರೆಂಟ್ಗಳನ್ನ 2012 ರಿಂದ ನಡೆಸುತ್ತಿರುವ ನನ್ನ ಸಾಹಸಕ್ಕೆ ಇಂತವರೆಲ್ಲರ ಪ್ರೇರಣೆ ಇದೆ.
ಪ್ರತಿ ದಿನ ಲಾಡ್ಜ್ ಗಾಗಿ 10 ಡೆಕ್ಕನ್ ಹೆರಾಲ್ಡ್ ಮತ್ತು 5 ಪ್ರಜಾವಾಣಿ ಖರೀದಿಸುತ್ತೇನೆ ಮತ್ತು ಉಚಿತವಾಗಿ ಉಳಿದವರಿಗೆ ನೀಡುತ್ತೇನೆ ಇದಕಾಗಿ ಪ್ರಜಾವಾಣಿ ಸಂಸ್ಥೆ ನನಗೆ ರಿಯಾಯಿತಿ ದರದಲ್ಲಿ ಪತ್ರಿಕೆಗಳನ್ನ ನೀಡುತ್ತದೆ.
ಇದರ ಜೊತೆ ವಿಜಯವಾಣಿ, ವಿಜಯ ಕನಾ೯ಟಕ, ಉದಯವಾಣಿ, ಕನ್ನಡ ಪ್ರಭ, ಸಂಯುಕ್ತ ಕನಾ೯ಟಕ, ಹೊಸದಿಗಂತ, ಜನ ಹೋರಾಟ, ಇಂಡಿಯನ್ ಎಕ್ಸ್ ಪ್ರೆಸ್, ವಾರಪತ್ರಿಕೆಗಳಾದ ತರಂಗ, ಸುಧಾ, ಹಾಯ್ ಬೆಂಗಳೂರು, ರೀಡಸ್೯ ಡೈಜೆಸ್ಟ್ ಸ್ವ೦ತಕ್ಕಾಗಿ ಬರುತ್ತದೆ.
ಆದರೆ ಪ್ರಜಾವಾಣಿ ಗುಂಪಿನೊಂದಿಗೆ ಸಾಂಗತ್ಯ ಜಾಸ್ತಿ ಯಾಕೆಂದರೆ ನಾನು ಹುಟ್ಟುವುದಕ್ಕಿಂತ ಮುಂಚಿನಿಂದ (1965) ನಮ್ಮ ತಂದೆ ಪ್ರಜಾವಾಣಿ ಚಂದಾದಾರರು, ನನಗೆ 54 ವಷ೯ ಅಂದರೆ ಪ್ರಜಾವಾಣಿ ಮತ್ತು ನಮ್ಮ ಸಂಬಂಧಕ್ಕೆ ಮುಂದಿನ ವಷ೯ 55ರ ಮಹೋತ್ಸವ!
Comments
Post a Comment