#ಪ್ರಸಕ್ತರಾಜಕಾರಣದಒಳಗುಟ್ಟು
ಲೋಕ ಸಭಾ ಚುನಾವಣಾ ಅ೦ಕಣ
ಭಾಗ-7
( ಕೆ.ಅರುಣ್ ಪ್ರಸಾದ್ )
5 ದಿನದ ಚುನಾವಣಾ ಪ್ರಚಾರ ಬಾಕಿ ಇದೆ, ಇದರಲ್ಲಿ ಶಿವಮೊಗ್ಗದಲ್ಲಿ ಯಾವ ಪಕ್ಷ ಪ್ರಚಾರದಲ್ಲಿ ಮುಂದಿದೆ?
ಈ ವಿಚಾರದ ಬಗ್ಗೆ ನನ್ನದೇ ಆದ ಸುದ್ದಿ ಮೂಲಗಳನ್ನ ಜಾಲಾಡಿದೆ, ಈಗ ನಾನು ಯಾವುದೇ ರಾಜಕೀಯದಲ್ಲಿ ಸಕ್ರಿಯನಾಗಿಲ್ಲದ್ದರಿಂದ ಹೆಚ್ಚು ಸತ್ಯ ಸಂದೇಶ ಪಡೆಯುತ್ತೇನೆ.
ಜಂಟಿ ಪಕ್ಷದ ಪ್ರಚಾರದ ಬಗ್ಗೆ ಅನಂದಪುರಂ ಹೋಬಳಿಯ ಆಚಾಪುರದ ಗ್ರಾ.ಪಂ. ನ ನಿಷ್ಟಾವಂತ ಕಾಂಗ್ರೇಸ್ ಕಾಯ೯ಕತ೯ ಇಸ್ಲಾಂಪುರದ ಮಂಜಪ್ಪರ ಹತ್ತಿರ ಕೇಳಿದೆ ಅವರು ಹೇಳಿದ್ದು ಅಜಿ೯ ಹಾಕೋ ದಿನ ನಿಗದಿಪಡಿಸಿದ ಬಸ್ ಲ್ಲಿ 8 ಜನ ಮಾತ್ರ ಹೋಗಿದ್ದೆವು ಅಂದರು, ಯಾಕೆ ಅಂದೆ ನಮ್ಮಲ್ಲಿ ಸಂಘಟನೆ ಇಲ್ಲ, ಒಗ್ಗಟ್ಟು ಇಲ್ಲ ಅಂದರು.
ಇವತ್ತಿನ ತನಕ ಒಂದೇ ಒಂದು ಕರಪತ್ರ ಮತದಾರನ ಮನೆಗೆ ಮುಟ್ಟಿಸಿಲ್ಲ ಅಂದಾಗ ನನಗೆ ಆಶ್ಚಯ೯ ಆಯಿತು.
ಪರಿಶಿಷ್ಟ ಜನಾ೦ಗದ ಮುಖಂಡ ಮಂಜಪ್ಪ ಬೇಸರದಿಂದ ಹೇಳಿದ ಮಾತು ಏನೆಂದರೆ ಕಾಂಗ್ರೇಸ್ ಗುರುತಲ್ಲಿ ಯಾರನ್ನಾದರು ನಿಲ್ಲಿಸಿದ್ದರೆ ಪಲಿತಾಂಶ ಒಳ್ಳೆಯದಾಗುತ್ತಿತ್ತು ಅಂದರು.
ಇವರು ಹೀಗೆ ಅಂದ ಮೇಲೆ ಇದೇ ಗ್ರಾಮ ಪಂಚಾಯತನ ಆಚಾಪುರ ಬೂತಿನ ಬಿಜೆಪಿ ಅಧ್ಯಕ್ಷ ರಿಕ್ಷಾ ಮಾಲಿಕ ಶಿವರಾಂ ಗೌಡರಿಗೆ ಅವರ ಪಕ್ಷದ ಪ್ರಚಾರದ ಬಗ್ಗೆ ಕೇಳಿದೆ, ಬೂತ್ ಕಮಿಟಿ ಅಧ್ಯಕ್ಷರ ಹೋಬಳಿ ಮಟ್ಟದ ಸಭೆ ಶಾಸಕ ಹಾಲಪ್ಪ ನಡೆಸಿದ್ದಾರೆ, ಅಭ್ಯಥಿ೯ ಅಜಿ೯ ಸಲ್ಲಿಸುವ ದಿನ ಪ್ರತಿ ಬೂತನಿಂದ 10 ಜನ ಹೋಗಿದ್ದರು, ಈಗ ಎರೆಡು ಸಾರಿ ಪ್ರತಿ ಮನೆಗೆ ಕರಪತ್ರ, ಪ್ರಣಾಳಿಕೆ ತಲುಪಿಸಿದ್ದೇವೆ, ಇವತ್ತು ಪ್ರತಿ ಬೂತಿಂದ 5 ಜನ ಶಿವಮೊಗ್ಗದಲ್ಲಿ ನಡೆದ ರಕ್ಷಣಾ ಸಚಿವೆ ನಿಮ೯ಲಾ ಸೀತಾರಾಮ್ ಬಹಿರಂಗ ಸಭೆಗೆ ಹೋಗಿದ್ದಾರೆ, ಪೇಜ್ ಪ್ರಮುಖರ ಸಭೆ ಆಗಿದೆ, ನಾಳೆ ಸಿ ಓಟರ್ ಬಗ್ಗೆ ಸಾಗರದಲ್ಲಿ ಮೀಟಿಂಗ್ ಇದೆ ಅಂದರು.
17ನೇ ತಾರೀಖಿನಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬರ್ತಾರೆ, ಡಿಕೆಶಿ ಬರ್ತಾರೆ ಅಂತ ಸಮ್ಮಿಶ್ರ ಅಭ್ಯಥಿ೯ ಹೇಳಿಕೆ ಬರುತ್ತಿದೆ.
ಯಾರಾದರೂ ಗೆಲ್ಲಲಿ ಆದರೆ ರಚನಾತ್ಮಕ ಸಂಘಟನೆ ಮತ್ತು ಪ್ರಾಮಾಣಿಕ ಪ್ರಯತ್ನ ಕೂಡ ಸೋಲು ಗೆಲುವಿಗೆ ಕಾರಣ ಆಗಬಹುದಾ? ಎಂಬ ಪ್ರಶ್ನೆಗೆ ಮೇ 23ಕ್ಕೆ ಉತ್ತರ ಸಿಗಬಹುದೇನೋ ಕಾಯೋಣ.
Comments
Post a Comment