#ಕೊವಿಡ್_ಮೊದಲ_ಅಲೆಯಲ್ಲಿ_ಮದ್ಯದ_ಮಾರಾಟ_ಬಂದ್
#ಕೋವಿಡ್_ಎರಡನೆ_ಅಲೆಯಲ್ಲಿ_ಮದ್ಯ_ಮಾರಾಟಕ್ಕೆ_ಅನುಮತಿ
ಕಳೆದ ವರ್ಷ ಮಧ್ಯದ ಮಾರಾಟ ರದ್ದು ಮಾಡಿದ್ದರು ಇದರಿಂದ ಕೊರಾನಾ ಹರಡುವುದು ಕಡಿಮೆ ಆಗಲಿಲ್ಲ ಹೆಚ್ಚೇ ಆಗಿರಬಹುದು ಯಾಕೆಂದರೆ ಕುಡಿಯುವವರು ಮಧ್ಯ ಹುಡುಕಿಕೊಂಡು ತಿರುಗಾಡಿದ್ದೇ ಹೆಚ್ಚು, ಮಧ್ಯ ಕಾಳಸಂತೆಯಲ್ಲಿ ಹತ್ತುಪಟ್ಟು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರು, ಕಳ್ಳಭಟ್ಟಿಯಂತ ಕಳಪೆ ಮದ್ಯವೂ ದೊಡ್ಡ ಪ್ರಮಾಣದಲ್ಲಿ ಮಾರಾಟವಾಯಿತು.
ನಿತ್ಯ ಮಧ್ಯಪಾನಕ್ಕೆ ಅಡಿಕ್ಟ್ ಆದವರು ಅಸಹನೆಯಿಂದ ಅನಾರೋಗ್ಯ ಪೀಡಿತರೂ ಆದ ಉದಾಹರಣೆ ನೂರಾರು.
ಮಧ್ಯಪಾನ ಅಗತ್ಯ ವಸ್ತು ಸೇವೆ (Essential goods and services) ವ್ಯಾಪ್ತಿಯಲ್ಲಿ ಬರುವುದರಿಂದ ಮಧ್ಯಪಾನ ಮಾರಾಟ ನಿಷೇದ ಮಾಡಬಾರದಿತ್ತು.
ಕಳೆದ ವರ್ಷ ಲಾಕ್ ಡೌನ್ ಮೊದಲು ಮತ್ತು ಲಾಕ್ ಡೌನ್ ತೆರವಿನ ನಂತರ ಮದ್ಯದ ಅಂಗಡಿ ಎದುರಿನ ಜನಸಂದಣಿ ಮದ್ಯದ ಅವಶ್ಯಕತೆ ಹೇಳಿತ್ತು.
ಈಗ ಎರಡನೆ ಅಲೆಯಲ್ಲಿ ಘೋಷಿಸಿರುವ ಕ್ಲೋಸ್ ಡೌನ್ (ಲಾಕ್ ಡೌನ್ ಸುದಾರಿತ ಹೆಸರು) ನಲ್ಲಿ ಬೆಳಿಗ್ಗೆ 6 ರಿಂದ 10 ರವರೆಗೆ ಮಧ್ಯಪಾನಿಗಳಿಗೆ ಪಾರ್ಸಲ್ ದೊರೆಯುವಂತ ವ್ಯವಸ್ಥೆ ಸಕಾ೯ರ ಮಾಡಿದೆ.
ಇದರಿಂದ ಸರ್ಕಾರದ ಆದಾಯ, ಮಧ್ಯಪಾನಿಯ ಉತ್ಪಾದನ ಘಟಕಗಳ ಮತ್ತು ಮಾರಾಟ ಕೇಂದ್ರಗಳ ಆದಾಯಕ್ಕೆ ಚ್ಯುತಿ ಉಂಟಾಗುವುದಿಲ್ಲ ಎಲ್ಲದಕ್ಕಿಂತ ಮಧ್ಯಪಾನ ಮಾಡುವವರಿಗೆ ಮಧ್ಯ ಸಿಗುವುದಿಲ್ಲ ಎಂಬ ಕಾರಣದಿಂದ ಉಂಟಾಗುತ್ತಿದ್ದ ಡಿಪ್ರೆಷನ್ ಇರುವುದಿಲ್ಲ, ಕುಡಿಯುವವರು ಹೆಂಡ ಹುಡುಕಿಕೊಂಡು ಕೊರಾನಾದ ಬಲೆಗೆ ಸಿಕ್ಕಿಬೀಳುವ ಆತಂಕ ಇಲ್ಲ.
ಎಷ್ಟು ದಿನ ಕ್ಲೋಸ್ ಡೌನ್ ಆದರೂ ನಿರಾತಂಕವಾಗಿ ಬೆಳಿಗ್ಗೆ ಖರೀದಿಸಿ ಬೇಕಾದಾಗ ಕುಡಿದು ಮನೇನಲ್ಲೇ ಇದ್ದು ಕೊರಾನಾ ಕಪಿ ಮುಷ್ಟಿಯಿಂದ ತಪ್ಪಿಸಿಕೊಳ್ಳುವ ಅವಕಾಶ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು
Comments
Post a Comment